ಪ್ರಿಯಾಂಕ ಲಕ್ಷಣವಾಗಿ ಸೀರೆಯುಟ್ಟು ನಾಗರನಿಗೆ ಹಾಲೆರೆದರೆ, ಹೀಗೆೆ ಏಕಿದೆ ಉಪ್ಪಿ ಡ್ರೆಸ್?

Published : Aug 10, 2024, 03:02 PM ISTUpdated : Aug 10, 2024, 03:28 PM IST

ನಟ ಉಪೇಂದ್ರ ಮತ್ತು ಪ್ರಿಯಾಂಕ ದಂಪತಿಗಳು ಸಕುಟುಂಬ ಸಮೇತರಾಗಿ ನಾಗರಪಂಚಮಿ ಹಬ್ಬ ಆಚರಿಸಿಕೊಂಡಿದ್ದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.   

PREV
17
ಪ್ರಿಯಾಂಕ ಲಕ್ಷಣವಾಗಿ ಸೀರೆಯುಟ್ಟು ನಾಗರನಿಗೆ ಹಾಲೆರೆದರೆ,  ಹೀಗೆೆ ಏಕಿದೆ ಉಪ್ಪಿ ಡ್ರೆಸ್?

ದೇಶದೆಲ್ಲೆಡೆ ನಾಗರ ಪಂಚಮಿ (Nag Panchami) ಹಬ್ಬವನ್ನು ನಿನ್ನೆ ಸಂಭ್ರಮದಿಂದ ಆಚರಿಸಿದ್ದು ರಾಜ್ಯದಲ್ಲೂ ಭಕ್ತರು ನಾಗನಿಗೆ ಹಾಲೆರೆದು ಪೂಜೆ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಹಲವು ನಟ - ನಟಿಯರೂ ಪೂಜೆ ಸಲ್ಲಿಸಿ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

27

ಸ್ಯಾಂಡಲ್‌ವುಡ್ ಸ್ಟಾರ್ ನಟ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಮತ್ತು ಪ್ರಿಯಾಂಕ ದಂಪತಿಯೂ ತಮ್ಮ ಕುಟುಂಬದ ನಾಗ ಸನ್ನಿಧಾನಕ್ಕೆ ಕುಟುಂಬ ಸಮೇತವಾಗಿ ತೆರ,ಳಿ ಪೂಜೆ ಸಲ್ಲಿಸಿ ಬಂದಿದ್ದಾರೆ. 
 

37

ಉಪೇಂದ್ರ, ಪತ್ನಿ ಪ್ರಿಯಾಂಕ, ಮಗ ಆಯುಷ್ , ಮಗಳು ಐಶ್ವರ್ಯ, ಉಪೇಂದ್ರ ತಂದೆ, ತಾಯಿ, ಅಣ್ಣ ಮತ್ತು ಅತ್ತಿಗೆ ಅವರ ಇಬ್ಬರು ಮಕ್ಕಳು ಹೀಗೆ ಪೂರ್ತಿ ಕುಟುಂಬ ನಾಗಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. 
 

47

ದೈವ ಭಕ್ತೆಯಾಗಿರುವ ಪ್ರಿಯಾಂಕ ಹೆಚ್ಚಾಗಿ ಹಬ್ಬ ಹರಿದಿನಗಳನ್ನ ಆಚರಿಸುತ್ತಾ, ಪೂಜೆ ಪುರಸ್ಕಾರ ಮಾಡುತ್ತಲೇ ಇರುತ್ತಾರೆ. ನಾಗರ ಪಂಚಮಿ ಹಬ್ಬಕ್ಕೂ ನಟಿ ನಾಗನಿಗೆ ಹಾಲೆರೆದು ಪೂಜೆ ಮಾಡಿದ್ದಾರೆ. 
 

57

ಪ್ರಿಯಾಂಕ ಉಪೇಂದ್ರ ಸಂಪ್ರದಾಯ ಬದ್ಧವಾಗಿ ರೇಷ್ಮೆ ಸೀರೆಯುಟ್ಟು, ನಾಗನಿಗೆ ಪೂಜೆ ಮಾಡುತ್ತಾ, ಹಾಲೆರೆದರೆ, ಉಪೇಂದ್ರ ಮಾತ್ರ ಜೀನ್ಸ್ ಪ್ಯಾಂಟ್ , ಟೀ ಶರ್ಟ್ ಧರಿಸಿ ಕುಟುಂಬಕ್ಕೆ ಸಾಥ್ ನೀಡಿದ್ದು, ಫೋಟೋ ನೋಡಿ ಅಭಿಮಾನಿಗಳು ಉಪೇಂದ್ರ ಯಾಕೆ ಹಿಂಗೆ ಅಂತ ಕೇಳಿದ್ದಾರೆ. 
 

67

ಪೂರ್ತಿ ಫ್ಯಾಮಿಲಿ ಹಬ್ಬಕ್ಕೆ ಚೆನ್ನಾಗಿ ರೆಡಿಯಾಗಿದ್ದಾರೆ, ಆದ್ರೆ ಉಪೇಂದ್ರ ಸರ್ ಮಾತ್ರ ಜೈಲಿಂದ ಈಗಷ್ಟೇ ಹೊರ ಬಂದಿರೋ ತರ ಕಾಣಿಸ್ತಿದ್ದಾರೆ, ಯಾಕೆ ಹೀಗೆ? ಯಾವುದೋ ಹೊಸ ಕಥೆ ಬಗ್ಗೆ ತಲೆ ಕೆಡಿಸಿಕೊಂಡಿರಬೇಕು ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. 
 

77

ರಿಯಲ್ ಸ್ಟಾರ್ ಕುಟುಂಬದ ಎಲ್ಲಾ ಸದಸ್ಯರನ್ನ ಜೊತೆಯಾಗಿ ನೋಡಿ ಫ್ಯಾನ್ಸ್ ಖುಷಿಯಾಗಿದ್ದು, ತುಂಬಿದ ಸಂಸಾರ ನೋಡೋದಕ್ಕೆ ಚೆಂದ ಎಂದಿದ್ದಾರೆ. ಯಾವಾಗ್ಲೂ ಹೀಗೆ ಖುಶಿಯಾಗಿರಿ ಎಂದು ಹಾರೈಸಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories