ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಅಭಿಷೇಕ್-ಅವಿವಾ!

First Published | Aug 10, 2024, 1:14 PM IST

ಅಂಬಿ ಮನೆಯಲ್ಲಿ ಸಂಭ್ರಮ. ಬರ್ತಾನಪ್ಪ ಬೂಪಾ ಈ ಬಂಗಾರಿ ಮಡಿಲಿನಲ್ಲಿ ಎಂದ ನೆಟ್ಟಿಗರು.....

ಕನ್ನಡ ಚಿತ್ರರಂಗ ರೆಬಲ್ ಸ್ಟಾರ್ ಅಂಬರೀಶ್ ಮತ್ತು ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಮನೆಯಲ್ಲಿ ಈ ವರ್ಷ ಡಬಲ್ ಸಂಭ್ರಮ ಮನೆ ಮಾಡಿದೆ.

ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಮಾಡಲ್ ಅವಿವಾ ಬಿದ್ದಪ್ಪ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

Tap to resize

ಇದೇ ತಿಂಗಳು ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಗುಡ್‌ ನ್ಯೂಸ್‌ ರಿವೀಲ್ ಆದ ಬೆನ್ನಲ್ಲ ಅಂಬಿ ಫ್ಯಾಮಿಲಿ ಟೆಂಪಲ್ ರನ್ ಮಾಡುತ್ತಿದ್ದಾರೆ.

ಹೌದು! ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ, ಸುಮಲತಾ ಅಂಬರೀಶ್ ಮತ್ತು ಸುಮಲತಾ ಸಹೋದರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. 

ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿದ ನಂತರ ಅಲ್ಲೇ ಇರುವ ತಮ್ಮ ಆಪ್ತ ಸ್ನೇಹಿತರಾದ ಮೋಹನ್ ಬಾಬು ನಿವಾಸಕ್ಕೆ ಭೇಟಿ ನೀಡಿದ್ದಾರೆ. 

ನಮ್ಮ ಜೂನಿಯರ್ ಎಂಟ್ರಿ ಕೊಡಲಿದ್ದಾರೆ ಚೆನ್ನಾಗಿ ಹಾರೈಕೆ ಮಾಡಿಸಿಕೊಳ್ಳ ಅತ್ತಿಗೆಮ್ಮಾ...ನನ್ನ ಮಂಡ್ಯ ಕಡೆ ಬನ್ನಿ ಬಿಸಿಬಿಸಿ ವೆರೈಟಿ ಅಡುಗೆ ಮಾಡಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೀವಿ ಎಂದಿದ್ದಾರೆ ಅಭಿಮಾನಿಗಳು. 

Latest Videos

click me!