ಬಿಗ್ ಬಾಸ್‌ ನನ್ನ ಯಶಸ್ಸಿಗೆ ಬ್ರೇಕ್ ಹಾಕಿಬಿಟ್ಟರು: ರಂಜಿತ್ ಕುಮಾರ್ ಗರಂ

Published : Mar 31, 2025, 04:16 PM ISTUpdated : Mar 31, 2025, 04:35 PM IST

ಗೆಲ್ಲಬೇಕು ಅನ್ನೋರನ್ನು ತಡೆದಿದ್ದಾರೆ ಬಿಗ್ ಬಾಸ್. ಯಾರ್ಗೂ ಹೊಡೆದಿಲ್ಲ. ಒಳ್ಳೆ ಸಿನಿಮಾ ಮಾಡ್ತೀನಿ ಅಂದಿದ್ದಾರೆ ರಂಜಿತ್. 

PREV
19
ಬಿಗ್ ಬಾಸ್‌ ನನ್ನ ಯಶಸ್ಸಿಗೆ ಬ್ರೇಕ್ ಹಾಕಿಬಿಟ್ಟರು: ರಂಜಿತ್ ಕುಮಾರ್ ಗರಂ

ಬಿಗ್ ಬಾಸ್ ಸೀಸನ್ 11ರ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ಕಲಾವಿದ ರಂಜಿತ್ ಕುಮಾರ್. ಮನೆಯಲ್ಲಿ 15 ದಿನ ಇದ್ರೂ ಕೂಡ ಜನರಿಗೆ ಇಷ್ಟವಾಗಿದ್ದಾರೆ.

29

ಹೆಣ್ಣುಮಕ್ಕಳ ಬಗ್ಗೆ ಮನೆಯಲ್ಲಿದ್ದ ಮತ್ತೊಬ್ಬ ಸದಸ್ಯ ಕೆಟ್ಟದಾಗಿ ಮಾತನಾಡಿದ ಎನ್ನುವ ಕಾರಣಕ್ಕೆ ರಂಜಿತ್ ಕೊಂಡ ಗರಂ ಆಗುತ್ತಾರೆ. ಮಾಡದ ತಪ್ಪಿದೆ ಆ ವ್ಯಕ್ತಿ ಜೊತೆ ರಂಜಿತ್ ಕೂಡ ಹೊರ ಬರುತ್ತಾರೆ. ಹೀಗಾಗಿ ತಮ್ಮ ಬೇಸರ ಹೊರ ಹಾಕಿದ್ದಾರೆ.

39

ಅಂದು ಬಿಗ್ ಬಾಸ್ ಮನೆಯಿಂದ ಹೊರ ಬಂದಾಗ ತುಂಬಾನೇ ಬೇಸರ ಆಯ್ತು ಏಕೆಂದರೆ ಗೆಲ್ಲಬೇಕು ಎಂದು ಮುಂದೆ ಹೋಗುತ್ತಿದ್ದವನು ನಾನು. ಗೆಲ್ಲೊದನ್ನು ತಡೆಯುತ್ತಾರೆ ಅಲ್ವಾ ಅದು ತುಂಬಾ ಬೇಸರ ಆಯ್ತು.

49

ಬಿಗ್ ಬಾಸ್ ಮನೆಯಲ್ಲಿ ಇದ್ದ 15 ದಿನವೂ ನಾನು ಪ್ರಾಮಿಸಿಂಗ್ ಕ್ಯಾರೆಕ್ಟರ್ ಆಗಿದ್ದೆ.ಮನೆಯಲ್ಲಿ ಎಲ್ಲಿಯೂ ನಾಟಕ ಮಾಡಿಲ್ಲ ನನಗೆ ನಾಟಕ ಮಾಡುವುದು ಇಷ್ಟ ಕೂಡ ಆಗಿಲ್ಲ.

59

ನಾನು ಪ್ರಾಮಾಣಿಕವಾಗಿ ಜೀವಿಸಿದ್ದೀನಿ ಆ ಮನೆಯಲ್ಲಿ ಅಲ್ಲದೆ ತಪ್ಪು ಮಾಡಿಲ್ಲ ಅಂತ ತುಂಬಾ ಚೆನ್ನಾಗಿದೆ ಗೊತ್ತಿದೆ ಹೀಗಾಗಿ ಹೊರಗಡೆ ನೋಡುವ ಜನರೇ ತೀರ್ಮಾನ ತೆಗೆದುಕೊಳ್ಳಬೇಕು. 

69

ಹೊಡೆದಿದ್ದರೆ ಹೇಳಿ ಸರ್ ನಾನು ಕರ್ಕೊಂಡು ಬಂದುಬಿಡುತ್ತೀನಿ ಆದರೆ ಅಲ್ಲಿ ದೂಕಿರುವುದು ಅಷ್ಟೇ. ಹೊರಗಡೆ ಬಂದ್ಮೇಲೆ ಎಲ್ಲೋ ನನ್ನ ಯಶಸ್ಸಿಗೆ ಬ್ರೇಕ್ ಹಾಕಿಬಿಟ್ಟರು ಅನಿಸಿತ್ತು. 

79

ಹೊರ ಬಂದ ಮೇಲೆ ಸರಿಯಾಗಿ ಪ್ರಡ್ಯೂಸರ್‌ಗಳು ಸಿಗಲಿಲ್ಲ ಒಂದು ವೇಳೆ ಸಿಕ್ಕಿದ್ದರೆ ಆ ವೇದಿಕೆ ಮೇಲೆ ತಂದು ನಿಲ್ಲಿಸಿಬಿಡುತ್ತಿದೆ. ಫ್ಯೂಷರ್ ಕೂಡ ಅಷ್ಟೇ ಪ್ಲ್ಯಾನ್ ಮಾಡಿದ್ದೀನಿ...ಸಿನಿಮಾ ಮಾಡ್ಬೇಕು ಅಂದ್ರು ಕೂಡ ಒಳ್ಳೆ ರೀತಿಯಲ್ಲಿ ಸಿನಿಮಾ ಮಾಡಬೇಕು. 

89

ಬಿಗ್ ಬಾಸ್ ರಂಜಿತ್ ಎಂದು ಹಲವರು ಗುರುತಿಸುತ್ತಿದ್ದಾರೆ, ಅಷ್ಟು ಸುಲಭವಾಗಿ ಮರೆಯುವ ವ್ಯಕ್ತಿ ಅಲ್ಲ ರಂಜಿತ್ ಅಂತ ತೋರಿಸಿಕೊಡಬೇಕು. 

99

ಆ ರೀತಿ ರಿಯಾಲಿಟಿ ಶೋಯಿಂದ ಹೊರಗಡೆ ಬಂದ್ರೂನು ಒಳ್ಳೆ ಸಿನಿಮಾ ಮಾಡಿದ್ದಾನೆ ಅನ್ನೋದು ಜನರಿಗೆ ಅನಿಸಬೇಕು. ಸಾಧನೆ ಮಾಡೇ ಮಾಡುತ್ತೀನಿ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ ರಂಜಿತ್. 

Read more Photos on
click me!

Recommended Stories