ಮಾಲ್ಡೀವ್ಸ್‌ನಲ್ಲಿ ಕಪಲ್ ಪೇಂಟಿಂಗ್ ಮಾಡಿದ ಸೋನಲ್- ತರುಣ್; ಓ ಜಾಲಿ ಜಾಲಿ ಎಂದು ಕಾಲೆಳೆದ ನೆಟ್ಟಿಗರು!

First Published | Oct 22, 2024, 3:23 PM IST

ಹನಿಮೂನ್ ಟ್ರಿಪ್‌ನ ಪ್ರತಿಯೊಂದು ಅಪ್ಡೇಟ್ಸ್‌ಗಳನ್ನು ಹಂಚಿಕೊಂಡ ಸೋನಲ್. ಫೋಟೋ ನೋಡಿ ಕಾಲೆಳೆದ ನೆಟ್ಟಿಗರು......

ಸ್ಯಾಂಡಲ್‌ವುಡ್‌ ಹಿಟ್ ಡೈರೆಕ್ಟರ್‌ ತರುಣ್ ಸುಧೀರ್ ಮತ್ತು ಪತ್ನಿ ಸೋನಲ್ ಹಲವು ವರ್ಷಗಳ ಕಾಲ ಸೈಲೆಂಟ್ ಆಗಿ ಪ್ರೀತಿಸಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಮಾಡಿಕೊಂಡ ಈ ಜೋಡಿ ತಮ್ಮ ಹನಿಮೂನ್‌ಗೆಂದು ಮಾಲ್ಡೀವ್ಸ್‌ ಕಡೆ ಪ್ರಯಾಣ ಮಾಡಿದ್ದಾರೆ. 

Tap to resize

ಮಾಲ್ಡೀವ್ಸ್‌ ಹನಿಮೂನ್ ಟ್ರಿಪ್ ಹೇಗಿತ್ತು ಎಂದು ಪ್ರತಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುವ ಸೋನಲ್ ಕಾಲೆಳೆದಿದ್ದರು ನೆಟ್ಟಿಗರು. 

ಇದೀಗ ಸೋನಲ್ ಮತ್ತು ತರುಣ್ ಮಾಲ್ಡೀವ್ಸ್‌ನಲ್ಲಿ ಮಾಡಿದ ಕಪಲ್ ಪೇಂಟಿಂಗ್ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇಬ್ಬರು ಸಿಕ್ಕಾಪಟ್ಟೆ ಸೀರಿಯಲ್ ಆಗಿ ಕ್ಯಾನ್ವರ್ಸ್ ಮೇಲೆ ಪೇಂಟಿಂಗ್ ಮಾಡಿದ್ದಾರೆ.

ಓ ಅಕ್ಕಾ...ಫುಲ್ ಜಾಲಿ ಜಾಲಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಅಲ್ಲದೆ ಹನಿಮೂನ್ ಟ್ರಿಪ್‌ನಿಂದ ಬಂದ ತಿಂಗಳಾಗುತ್ತಿದ್ದರೂ ಜನರು ಮಾತ್ರ ಅವರ ಫೋಟೋಗಳನ್ನು ಶೇರ್ ಮಾಡುವುದು ಕಡಿಮೆ ಮಾಡಿಲ್ಲ. 

ಇನ್ನು ಮದುವೆ ನಂತರ ಹೆಣ್ಣು ಮಕ್ಕಳು ದಪ್ಪ ಆಗುತ್ತಾರೆ ಎಂದು ಪತ್ರಕರ್ತರೊಬ್ಬರು ಕಾಲೆಳೆದಿದ್ದಕ್ಕೆ ಸೋನಲ್ ಖುಷಿಯಿಂದಲೇ ತಮ್ಮ ಪತಿಯವರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅದಿಕ್ಕೆ ಎಂದು ಉತ್ತರ ಕೊಟ್ಟಿದ್ದರು. 

Latest Videos

click me!