ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು, ಇದೀಗ ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾಗಿ ಎಲ್ಲೆಡೆ ಅಬ್ಬರಿಸುತ್ತಿರುವ ನಡುವೆ, ಜನರು ಸಪ್ತಮಿ ಗೌಡರನ್ನು (Sapthami Gowda) ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
27
ಕಾಂತಾರ ಚಾಪ್ಟರ್ 1 ಟ್ರೈಲರ್
ರಿಷಭ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ಟ್ರೈಲರ್ (Kantara Chapter 1 trailer ) ಇತ್ತೀಚೆಗೆ ತೆರೆ ಕಂಡಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಸಮಯದಲ್ಲಿ ಜನರು ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರದಲ್ಲಿ ಮಿಂಚಿದ ಸಪ್ತಮಿ ಗೌಡರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
37
ಹೊಸ ಫೋಟೊ ಶೂಟ್ ವೈರಲ್
ಸಪ್ತಮಿ ಗೌಡ ಇದೀಗ ಹೊಸದಾಗಿ ಫೋಟೊ ಶೂಟ್ ಮಾಡಿಸಿಕೊಂಡು, ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಲ್ವರ್ ಬಣ್ಣದ ಸೀರೆಯುಟ್ಟಿರುವ ಚೆಲುವೆ Embracing the silver lining ಎಂದು ಬರೆದುಕೊಂಡಿದ್ದಾರೆ.
ಸಪ್ತಮಿ ಗೌಡ ಫೋಟೊ ನೋಡಿ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಕಾಮೆಂಟ್ ಮಾಡಿ ಪ್ರೆಟಿ ಎಂದು ಹೇಳಿದ್ದಾರೆ. ಇನ್ನು ಅಭಿಮಾನಿಗಳು ಸಹ ಬ್ಯೂಟಿ, ಏಂಜಲ್, ಬಾಸ್, ಪ್ರೆಟಿ, ನಿಮ್ಮ ಅಂದವನ್ನು ನೋಡುತ್ತಿದ್ದರೆ ಹೊಟ್ಟೆಯುರಿತ್ತೆ ಅಂತಾನು ಕಾಮೆಂಟ್ ಮಾಡಿದ್ದಾರೆ.
57
ಕಾಂತಾರ ಚಾಪ್ಟರ್ 1 ರಲ್ಲಿ ನೀವಿರಬೇಕಿತ್ತು
ಇನ್ನೂ ಹಲವರು ಕಾಮೆಂಟ್ ಮಾಡಿ, ಸಪ್ತಮಿ ಕಾಂತಾರ ಸಿನಿಮಾದಲ್ಲಿ ನೀವು ಇರಬೇಕಿತ್ತು. ನೀವು ಈ ಸಿನಿಮಾಗೆ ಸರಿಯಾಗಿ ಆಯ್ಕೆಯಾಗಿದ್ದೀರಿ. ಆದಷ್ಟು ಬೇಗ ಹೊಸ ಸಿನಿಮಾ ಮೂಲಕ ತೆರೆ ಮೇಲೆ ಬನ್ನಿ ಎಂದಿದ್ದಾರೆ.
67
ಕಾಂತಾರ ಬಗ್ಗೆ ಸಪ್ತಮಿ ಹೇಳಿದ್ದೇನು?
ನಿನ್ನೆ ರಾಯಚೂರಿನಲ್ಲಿ ಶಾಪಿಂಗ್ ಮಾಲ್ ಉದ್ಘಾಟನೆ ಮಾಡಿ, ಕಾಂತಾರ ಚಾಪ್ಟರ್ 1 ಕುರಿತು ಮಾತನಾಡಿದ ಸಪ್ತಮಿ ಟ್ರೈಲರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಮೊದಲ ಸಿನಿಮಾಗೆ ನೀಡಿದ ಬೆಂಬಲವನ್ನು ಈ ಸಿನಿಮಾಗೂ ನೀಡಿ ಎಂದಿದ್ದಾರೆ.
77
ಸಪ್ತಮಿ ಸಿನಿಮಾಗಳು
ಸಪ್ತಮಿ ಗೌಡ ಕೊನೆಯದಾಗಿ ತೆಲುಗಿನ ತಮ್ಮುಡು ಸಿನಿಮಾದಲ್ಲಿ ನಟಿಸಿದ್ದರು, ಅವರು ನಟಿಸಿದ ಇನ್ನೆರಡು ಸಿನಿಮಾಗಳು ತೆರೆ ಮೇಲೆ ಬರಲಿದೆ. ಅದರಲ್ಲಿ ಒಂದು ದಿ ರೈಸ್ ಆಫ್ ಅಶೋಕ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಗೆ ನಾಯಕಿಯಾಗಲಿದ್ದಾರೆ ಸಪ್ತಮಿ.