Sanvi Sudeep: ನನ್ನ ಮೈಮೇಲೆ ಟ್ಯಾಟೂ ಹಾಕ್ಕೊಳ್ಳೋದಕ್ಕೆ ಪರ್ಮಿಶನ್ ತಗೋಬೇಕಾ: ಸಾನ್ವಿ ಫುಲ್ ಫೈರ್!

Published : Jun 16, 2026, 10:28 PM IST

Ganesha Tattoo Controversy: ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದ ಸುದೀಪ್‌ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಇದೀಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

PREV
15
ನಿಮ್ಮ ಅನುಮತಿ ಪಡೆಯಬೇಕಾ

ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದ ಸುದೀಪ್‌ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಇದೀಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ನಿಮ್ಮಿಂದ ಪರ್ಮಿಶನ್‌ ತಗೊಂಡು ನನ್ನ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಕಾ, ನನ್ನ ಪ್ರತೀ ನಿರ್ಧಾರಕ್ಕೂ ನಿಮ್ಮ ಅನುಮತಿ ಪಡೆಯಬೇಕಾ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

25
ಎನರ್ಜಿ ವೇಸ್ಟ್ ಮಾಡುತ್ತಿದ್ದೀರಲ್ಲಾ

‘ನೀವೇನೇ ಕಾಮೆಂಟ್‌ ಮಾಡಿದರೂ ನಾನೇನೂ ಕೇರ್‌ ಮಾಡಲ್ಲ, ಆದರೆ ನನ್ನೊಬ್ಬಳ ಬಗ್ಗೆ ಟ್ರೋಲ್‌ ಮಾಡಲು ಅದೆಷ್ಟು ಎನರ್ಜಿ ವೇಸ್ಟ್ ಮಾಡುತ್ತಿದ್ದೀರಲ್ಲಾ, ಅದು ಶೋಚನೀಯ. ನೀವು ಜನರ ಗಮನ ಸೆಳೆಯಲು ಹೀಗೆಲ್ಲ ಮಾಡಿರಬಹುದು, ನಿಮ್ಮ ಆ ಆಸೆಯೂ ಈಡೇರಲಿ ಬಿಡಿ’ ಎಂದಿದ್ದಾರೆ.

35
ನಾನು ಸುದೀಪ್‌ ಮಗಳು

ಇತ್ತೀಚೆಗೆ ಸಾನ್ವಿ ತಂದೆ ಸುದೀಪ್‌ ಅವರನ್ನು ಓಲ್ಡ್‌ ಮ್ಯಾನ್‌ ಅಂದಿದ್ದಕ್ಕೆ ಒಂದಿಷ್ಟು ಮಂದಿ ತಗಾದೆ ತೆಗೆದಿದ್ದರು. ಅದಕ್ಕೂ ಸಾನ್ವಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಸುದೀಪ್‌ ಮಗಳು. ನನ್ನ ಪಾಲಿಗೆ ಅವರು ಯಾವತ್ತೂ ಓಲ್ಡ್‌ ಮ್ಯಾನ್‌ ಆಗಿರುತ್ತಾರೆ. ದ್ವೇಷಿಸಲು ನಿಮಗೊಂದು ಸಣ್ಣ ಕಾರಣ ಸಿಕ್ಕರೂ ಸಾಕಾಗುತ್ತದೆ. ಆದರೆ ಹೀಗೆಲ್ಲ ಸಮಯ ವ್ಯರ್ಥ ಮಾಡುವ ಬದಲು ಒಳ್ಳೆ ಕೆಲಸಗಳಿಗೆ ನಿಮ್ಮ ಸಮಯ ವಿನಿಯೋಗಿಸಿ’ ಎಂದಿದ್ದಾರೆ.

45
ಬ್ಲಾ ಬ್ಲಾ ಬ್ಲಾ

ಏನೂ ಸಾಧನೆ ಮಾಡದೇ ಎಷ್ಟೆಲ್ಲ ಮಾತಾಡ್ತಾಳೆ ಬ್ಲಾ ಬ್ಲಾ ಬ್ಲಾ ಅಂತೆಲ್ಲ ನೀವು ಹೇಳಬಹುದು, ನಿಮ್ಮ ಮಾತು ನಿಜವೇ. ಹಾಗೆಂದು ನೀವು ಹೇಳಿದ್ದೆಲ್ಲ ಕೇಳಿಕೊಂಡು ಇರಲಿಕ್ಕಾಗದು. ನೀವು ತೆರೆಯ ಹಿಂದೆ ಹೇಡಿಗಳ ಹಾಗೆ ಅವಿತು ಕುಳಿತು ನಮ್ಮ ಬಗ್ಗೆ ತೀರ್ಪು ಕೊಡುವವರಂತೆ ಮಾತನಾಡುತ್ತೀರಿ. ನಮ್ಮ ಬದುಕಿನ ಪ್ರತೀ ಸನ್ನಿವೇಶವನ್ನೂ ಇದೇ ರೀತಿ ನೋಡುತ್ತೀರಿ.

55
ಸೋ ಸ್ಯಾಡ್‌

ನಿಮ್ಮಿಂದಾಗಿ ಅಪ್ಪನ ಬರ್ತ್‌ಡೇಯನ್ನು ಆಚರಿಸಲು ಅಥವಾ ಆಪ್ತರ ಕೊನೆಯ ಕ್ಷಣಗಳಲ್ಲಿ ಭಾಗವಹಿಸಲು ನಮಗೆ ಸಾಧ್ಯವಾಗುವುದಿಲ್ಲ. ನಮ್ಮ ಕುಟುಂಬವನ್ನು ನಿಮ್ಮ ಮನರಂಜನೆಗೆ ಬಳಸಿಕೊಂಡಿದ್ದೀರಿ. ಸದಾ ತೀರ್ಪು ಕೊಡಲು ಕಾಯುತ್ತಿರುತ್ತೀರಿ. ನೀವ್ಯಾರು ಅಂತ ನನಗೆ ಗೊತ್ತಿಲ್ಲ ಅಂದುಕೊಳ್ಳಬೇಡಿ, ಅನೇಕ ಸಲ ನನ್ನ ಭೇಟಿಯಾಗಿದ್ದೀರಿ ಮತ್ತು ನಿಮ್ಮ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಕೇಳುತ್ತಿರುತ್ತೀರಿ. ಸೋ ಸ್ಯಾಡ್‌ ಎಂದು ನೋವು ತೋಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories