ಬೆಂಗಳೂರು(ಅ. 14) ಕೊರೋನಾ ಕಾರಣಕ್ಕೆ ನಿಂತಿದ್ದ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಮುಂದಿನ ವರ್ಷಾರಂಭದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಆದರೆ ಇದು ಸುದ್ದಿಅಲ್ಲ.. ಇದಕ್ಕಿಂತಲೂ ದೊಡ್ಡದಾದ ಸುದ್ದಿಯೊಂದಿದೆ. ಅದು ಸಂಜಯ್ ದತ್ ಕುರಿತಾಗಿದ್ದು. ಕೆಜಿಎಫ್ ಅಖಾಡಕ್ಕಿಳಿಯಲು ಸಂಜಯ್ ದತ್ ಸಿದ್ಧರಾಗಿದ್ದಾರೆ. ಕ್ಯಾನರ್ ವಿರುದ್ದ ಹೋರಾಟ ಮಾಡಿ ಮತ್ತೆ ಶೂಟಿಂಗ್ ನತ್ತ ಖಳನಾಯಕ್ ಆಗಮಿಸಿದ್ದಾರೆ. ಕೆಜಿಎಫ್ ಶೂಟಿಂಗ್ ಗಾಗಿ ದತ್ತ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೇರ್ ಕಟ್ ಮಾಡಿಕೊಂಡು ರಾಕಿ ಬಾಯ್ ಸಾಮ್ರಾಜ್ಯಕ್ಕೆ ಅಧೀರ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಹೇರ್ ಕಟ್ ಮಾಡಿಕೊಂಡ ನಂತ್ರ ವಿಡಿಯೋ ಮಾಡಿ ಸಂಜಯ್ ದತ್ ವಿಷಯ ತಿಳಿಸಿದ್ದಾರೆ. ವಿಡಿಯೋದಲ್ಲಿ ನಾನು ಕೆಜಿಎಫ್ ಶೂಟಿಂಗ್ ನಲ್ಲಿ ಭಾಗಿ ಆಗುತ್ತಿರುವುದಾಗಿ ತಿಳಿಸಿದ್ದು ಕೊನೆಯ ಶೆಡ್ಯೂಲ್ ನಲ್ಲಿ ಭಾಗಿಯಾಗಲಿದ್ದಾರೆ. ಕ್ಯಾನ್ಸರ್ ಕಾರಣಕ್ಕೆ ಹಿರಿಯ ನಟ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. Sandalwood actor Yash starrer KGF chapter 2 is in the final stages of its production. Bollywood Actor Sanjay Dutt Will To Start Shooting For KGF 2 Soon. ಕ್ಯಾನ್ಸರ್ ಹೋರಾಟ ಗೆದ್ದು ಕೆಜಿಎಫ್ ಅಖಾಡಕ್ಕೆ ಸಂಜಯ್ ದತ್