ಕುಂದಾಪುರದಲ್ಲಿ ಗಾಳ ಹಾಕುತ್ತಿರುವ ರಿಷಬ್ ಶೆಟ್ಟಿ: ಮೀನು ಸಿಗ್ಲಿಲ್ಲ, ಆದ್ರೆ ಎರಡು ರಾಷ್ಟ್ರ ಪ್ರಶಸ್ತಿ ಬುಟ್ಟಿಗೆ ಬಿತ್ತು!

First Published | Aug 24, 2024, 9:15 PM IST

ಕಾಂತಾರ ಚಾಪ್ಟರ್ 1ಕ್ಕಾಗಿ ಇಡೀ ಚಿತ್ರತಂಡ ಕುಂದಾಪುರದಲ್ಲಿಯೇ ಬೀಡು ಬಿಟ್ಟಿದೆ. ಬಿಡುವಿನ ಸಮಯದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ‌ ಮೀನಿಗೆ ಗಾಳ ಹಾಕಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂತಾರ ಅಧ್ಯಾಯ 1ರ ಚಿತ್ರೀಕರಣ ಕುಂದಾಪುರದಲ್ಲಿ ನಡೆಯುತ್ತಿದೆ. ಇಡೀ ಚಿತ್ರತಂಡ ಕುಂದಾಪುರದಲ್ಲಿಯೇ ಬೀಡು ಬಿಟ್ಟಿದೆ. ಪುರ್ಸೊತ್ತಲ್ಲಿ ಕ್ಯಾಪ್ಟನ್‌ ರಿಷಬ್‌ ಶೆಟ್ಟಿ ತಂಡದ ಜೊತೆ ಸೇರಿಕೊಂಡು ಕಾಡು ಮೇಡು ಅಲೆದುಕೊಂಡು ಮೀನಿಗೆ ಗಾಳ ಹಾಕುವ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.

ರಾತ್ರಿ ಹೊತ್ತು ರಿಷಬ್ ಮೀನಿಗೆ ಗಾಳ ಹಾಕುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಡಿಓಪಿ ಅರವಿಂದ್ ಕಶ್ಯಪ್, ‘ಇವರಿಗೆ ಮೀನು ಸಿಗ್ಲಿಲ್ಲ. ಆದ್ರೆ ಎರಡು ರಾಷ್ಟ್ರ ಪ್ರಶಸ್ತಿ ಬುಟ್ಟಿಗೆ ಬಿತ್ತು’ ಎಂದು ಹೇಳಿದ್ದಾರೆ.

Tap to resize

ರಿಷಬ್ ಶೆಟ್ಟಿ ಟ್ಯಾಲೆಂಟ್‌ನ ಗತ್ತು ಇಡೀ ದೇಶಕ್ಕೆ ಗೊತ್ತು. ಹೀಗಾಗೆ ಶೆಟ್ರನ್ನ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಿಗಿದಪ್ಪಿತ್ತು. ಅದಕ್ಕಾಗಿ ಕಳರಿಯಪಟ್ಟು ಯುದ್ಧ ಕಲೆ ಕಲಿಯುತ್ತಿದ್ದಾರೆ ರಿಷಬ್.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಚಾಪ್ಟರ್-1 ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಶೇಕಡಾ 30ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಈ ಚಿತ್ರಕ್ಕಾಗಿ ಶೆಟ್ರು ಕಳರಿ ಪಯಟ್ಟು ಕಲಾಕಾರ್ ಆಗಿದ್ದಾರೆ. 

ಕುಂದಾಪುರದ ಕೆರಾಡಿಯಲ್ಲಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಆಗುತ್ತಿದೆ. ಈ ಸಿನಿಮಾದಿಂದ 1000 ಕೋಟಿ ರೂ ಕಲೆಕ್ಷನ್ ಟಾರ್ಗೆಟ್ ಇಟ್ಟಿದ್ದಾರೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಕಸರತ್ತು ನಡೆಸುತ್ತಿದ್ದು, ಪಾತ್ರಕ್ಕಾಗಿ ಕಳರಿ ಪಯಟ್ಟು ಸಮರಕಲೆ ಕಲಿಯುತ್ತಿದ್ದಾರೆ. 

ಕತ್ತಿ, ಗುರಾಣಿ ಹಿಡಿದು ರಿಷಬ್ ಶೆಟ್ಟಿ ಕಳರಿ ಪಯಟ್ಟು ಕಲಿಯುತ್ತಿರುವ ಫೋಟೊ ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಕಳರಿ ಪಯಟ್ಟು ಕೇರಳದ ಪುರಾತನ ಸಮರಕಲೆ. 11-12ನೇ ಶತಮಾನದಲ್ಲಿ ಕೇರಳದಲ್ಲಿ ಕಳರಿಯಪಟ್ಟು ಸಮರಕಲೆ ಹುಟ್ಟಿಕೊಂಡಿತ್ತು.
 

Latest Videos

click me!