ಸೀರೇಲಿ ಮಿಂಚಿದ ಗೋಲ್ಡನ್ ಸ್ಟಾರ್ ಪುತ್ರಿ : ಇಷ್ಟು ದೊಡ್ಡೋಳಾದ್ಲಾ ಅಂತಿದ್ದಾರೆ ಫ್ಯಾನ್ಸ್!

First Published | Dec 26, 2023, 11:30 AM IST

ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಗಣೇಶ್ ಸೀರೆಯುಟ್ಟ ಫೋಟೋಗಳನ್ನು ತಾಯಿ ಶಿಲ್ಪಾ ಗಣೇಶ್ ಶೇರ್ ಮಾಡಿದ್ದು, ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. 
 

ಕನ್ನಡ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh). ಸದ್ಯ ಇವರ ಮಗಳು ಚಾರಿತ್ರ್ಯ ಸಹ ಅಪ್ಪನಂತೆ ಸಿನಿಮಾ ರಂಗದಲ್ಲಿ ಹೆಸರು ಮಾಡೋದಕ್ಕೆ ರೆಡಿಯಾಗುತ್ತಿರುವಂತೆ ಕಾಣುತ್ತಿದ್ದಾರೆ. 
 

ಇತ್ತೀಚಿಗೆ ಗಣೇಶ್ ಪತ್ನಿ ಶಿಲ್ಪಾ ಗಣೇಶ್ (Shilpa Ganesh) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮುದ್ದು ಮಗಳು ಚಾರಿತ್ರ್ಯ ಗಣೇಶ್ ಸೀರೆಯುಟ್ಟಿರೋ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪಿಂಕ್ ಸೀರೆಯಲ್ಲಿ ಚಾರಿತ್ರ್ಯ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. 
 

Tap to resize

ಗುಲಾಬಿ ಬಣ್ಣದ ಕಾಟನ್ ಸೀರೆ ಜೊತೆ, ಗುಲಾಬಿ ಬಣ್ಣದ ಸ್ಲೀವ್ ಲೆಸ್ ಫುಲ್ ನೆಕ್ ಬ್ಲೌಸ್ ಧರಿಸಿರುವ ಚಾರಿತ್ರ್ಯ (Charitrya Ganesh) ಬೇರೆ ಬೇರೆ ರೀತಿಯಲ್ಲಿ ಪೋಸ್ ನೀಡಿದ್ದು, ಇದನ್ನು ಅಮ್ಮ ಶಿಲ್ಪಾ ಗಣೇಶ್ ಕ್ಲಿಕ್ ಮಾಡಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಚಾರಿತ್ರ್ಯ ಫೋಟೋ ನೋಡಿ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹಲವರು ಇಷ್ಟು ದೊಡ್ಡೋಳಾದ್ಲಾ ಮಗಳು ಎಂದು ಕಾಮೆಂಟ್ ಮಾಡಿದ್ದಾರೆ. 
 

ಪ್ರಿಯಾಂಕ ಉಪೇಂದ್ರ (Priyanka Upendra) ಸೋ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ರೆ, ಗಾಯಕಿ ಇಂಪನಾ ಜಯರಾಜ್ ಬ್ಯೂಟಿಫುಲ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ನಟ ರವಿಶಂಕರ್ ಗೌಡ, ನನ್ನ ಮುದ್ದು ಮಗಳು ಎಂದು ಕಾಮೆಂಟ್ ಮಾಡಿದ್ದಾರೆ. 
 

14 ವರ್ಷದ ಚಾರಿತ್ರ್ಯ ಸದ್ಯ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಮ್ಮ, ಅಪ್ಪನ ಜೊತೆ ಚಾರಿತ್ರ್ಯ ಕೂಡ ಹೆಚ್ಚಾಗಿ ಪಾರ್ಟಿಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಕಾಣಿಸುತ್ತಿದ್ದಾರೆ. ಮುಂದೊಂದು ದಿನ ಸಿನಿಮಾ ನಟಿಯಾಗಬಹುದು ಎಂದು ಸಿನಿರಸಿಕರು ಕಾಯ್ತಾ ಇದ್ದಾರೆ. 
 

ಇನ್ನು ಚಾರಿತ್ರ್ಯ ಚಮಕ್ ಚಿತ್ರದಲ್ಲಿ ಗಣೇಶ್ ಮಗಳಾಗಿ ಕ್ಲೈಮ್ಯಾಕ್ಸ್ ದೃಶ್ಯ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಡ್ಯಾನ್ಸ್, ರೀಲ್ಸ್, ಲಿಪ್ ಸಿಂಕ್ ವಿಡಿಯೋ, ಜೊತೆಗೆ ಅಡುಗೆ ಮಾಡೋದರಲ್ಲೂ ಚಾರಿತ್ರ್ಯ ನಿಸ್ಸೀಮರು. ಅಷ್ಟೇ ಅಲ್ಲ, ಫಿಟ್ ಆಗಿರಲು ಈ ಸಣ್ಣ ವಯಸ್ಸಲ್ಲೇ ಯೋಗಾಭ್ಯಾಸ ಮಾಡ್ತಾರಂತೆ ಗೋಲ್ಡನ್ ಪುತ್ರಿ. 
 

Latest Videos

click me!