ಅದ್ಧೂರಿಯಾಗಿ ನಡೆದ ಥ್ರಿಲ್ಲರ್ ಮಂಜು ಮಗಳ ಅರಿಶಿನ ಶಾಸ್ತ್ರ !

First Published | Dec 24, 2023, 12:45 PM IST

ಕನ್ನಡ ಸಿನಿಮಾರಂಗದಲ್ಲಿ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡ ಥ್ರಿಲ್ಲರ್ ಮಂಜು ಅವರು ಮಗಳ ಮದುವೆ ಸಂಭ್ರಮದಲ್ಲಿದ್ದು, ಮಗಳ ಅರಿಶಿನ ಶಾಸ್ತ್ರದ ಸಡಗರದ ಫೋಟೋಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ. 

ಸಾಹಸ ದೃಶ್ಯಗಳನ್ನು ಥ್ರಿಲ್ ಆಗಿ ಕಾಣುವಂತೆ ನಿರ್ದೇಶನ ಮಾಡುವ ಕನ್ನಡದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು (Triller Manju) ಅವರ ಮಗಳ ವಿವಾಹ ಸಮಾರಂಭವೂ ಅದ್ಧೂರಿಯಾಗಿ, ಆದರೆ ಸದ್ದಿಲದೆ ನಡೆದಿದೆ. 

ಮಗಳ ಮದುವೆ ಸಂಭ್ರಮದಲ್ಲಿರುವ ಥ್ರಿಲ್ಲರ್ ಮಂಜು ಅದ್ಧೂರಿಯಾಗಿ ನಡೆದ ಮಗಳ ಅರಿಶಿನ ಶಾಸ್ತ್ರದ (Haldi ceremony) ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. 

Tap to resize

ಥ್ರಿಲ್ಲರ್ ಮಂಜು ತಮ್ಮ ಮಗಳು ರಕ್ಷತಾ ಮಂಜುನಾಥ್ (Rakshatha Manjunath) ಅವರನ್ನು ಮಂಗಳೂರು ಮೂಲದ ಉದ್ಯಮಿ ದೀಪಕ್‌ ಜತೆಗೆ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯು ಸದ್ದಿಲ್ಲದೆ ನಡೆದಿದ್ದು, ಇದೀಗ ಅರಿಶಿನ ಶಾಸ್ತ್ರದ ಫೋಟೋಗಳು ವೈರಲ್ ಆಗುತ್ತಿವೆ. 

ಇದೇ ಡಿಸೆಂಬರ್ 7 ರಂದು ಥ್ರಿಲ್ಲರ್ ಮಂಜು ಮಗಳು ರಕ್ಷತಾ ಅವರ ಮದುವೆ ನಡೆದಿರೋದಾಗಿ ತಿಳಿದು ಬಂದಿದೆ. ಅದರ ಹಿಂದಿನ ದಿನ ಅಂದರೆ ಡಿಸೆಂಬರ್ 6 ರಂದು ಅರಶಿನ ಶಾಸ್ತ್ರ ಜರುಗಿದ್ದು, ಆ ಸಂಭ್ರಮದ ಫೋಟೋಗಳನ್ನು ಮಂಜು ಹಂಚಿಕೊಂಡಿದ್ದಾರೆ. 

ಮಂಜು ಮಗಳು ರಕ್ಷತಾ ಐರ್ಲ್ಯಾಂಡ್ ನಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದ್ದು, ಹುಡುಗ ದೀಪಕ್ (Deepak Baliga) ಕೂಡ ಐರ್ಲ್ಯಾಂಡ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ. 

ಮಂಗಳೂರು ಮೂಲದ ಯುವಕ ದೀಪಕ್ ಬಾಳಿಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದೀಪಕ್ ಐರ್ಲ್ಯಾಂಡ್‌ ನಲ್ಲಿ ಕಂಪನಿ ಹೊಂದಿರೋದರಿಂದ ಮದುವೆಯಾದ ಬಳಿಕ ರಕ್ಷತಾ- ದೀಪಕ್ ಐರ್ಲ್ಯಾಂಡ್ ನಲ್ಲಿ ನೆಲೆಸಲಿದ್ದಾರೆ ಎಂದು ತಿಳಿದು ಬಂದಿದೆ. 

ಇನ್ನು ಇದೊಂದು ಪಕ್ಕಾ ಅರೇಂಜ್ ಮ್ಯಾರೇಜ್ (arranged Marriage) ಆಗಿದ್ದು, ಸ್ವತಃ ಮಂಜು ಅವರೇ ಮಗಳಿಗೆ ತಕ್ಕ ಹುಡುಗನನ್ನು ಹುಡುಕಿ ಮದುವೆ ಮಾಡಿದ್ದಾರಂತೆ. ಮಂಜು ಮತ್ತು ಗೀತಾ ದಂಪತಿಗಳು ಮಗಳ ಮದುವೆ ಸಂಭ್ರಮದಲ್ಲಿ ಸಂಭ್ರಮಿಸಿರುವ ಕ್ಷಣಗಳು ಸಹ ಫೋಟೊದಲ್ಲಿ ಸೆರೆಯಾಗಿದೆ. 

Latest Videos

click me!