Sandalwood Films: ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಬಿಡುಗಡೆಗೂ ಮುನ್ನ ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದ್ದವು. ಆದರೆ ಬಿಡುಗಡೆಯಾದ ಬಳಿಕ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡದೆ ಸೋತವು. ಅಂತಹ ಕೆಲವು ಸಿನಿಮಾಗಳ ಲಿಸ್ಟ್ ಇಲ್ಲಿವೆ.
ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಇನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಯಶಸ್ಸು ಕಂಡಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. ಕೆಲವು ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿತ್ತು. ಆದರೆ ಬಿಡುಗಡೆ ಬಳಿಕ ಸೋತು ಹೋಗಿದ್ದವು. ಅಂತಹ ಸಿನಿಮಾಗಳ ಲಿಸ್ಟ್ ಇಲ್ಲಿದೆ.
211
ಸಿದ್ಲಿಂಗು 2
ರಮ್ಯಾ ಮತ್ತು ಲೂಸ್ ಮಾದ ಯೋಗಿ ಅಭಿನಯದ ಸಿದ್ಲಿಂಗು ಸಿನಿಮಾ ಭರ್ಜರಿಯಾಗಿ ಹಿಟ್ ಆಗಿತ್ತು, ಆದರೆ ಅದರ ಎರಡನೇ ಭಾಗ ಭಾರಿ ನಿರೀಕ್ಷೆ ಮೂಡಿಸಿದ್ದು ಮಾತ್ರ, ಆದರೆ ಥಿಯೇಟರ್ ನಲ್ಲಿ ಸಿನಿಮಾ ಸೋತಿತ್ತು.
311
ಸಂಜು ವೆಡ್ಸ್ ಗೀತಾ 2
ಸಂಜು ವೆಡ್ಸ್ ಗೀತಾ ಸಿನಿಮಾದ ಗೆಲುವಿನ ಖುಷಿಯಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಲೀಡ್ ರೋಲ್ ನಲ್ಲಿ ಎರಡನೇ ಭಾಗವನ್ನು ಮಾಡಿದ್ದರು ನಿರ್ದೇಶಕ ನಾಗಶೇಖರ್. ಆದರೆ ಈ ಸಿನಿಮಾ ಜನರ ನಿರೀಕ್ಷೆಯನ್ನು ಹುಸಿಗೊಳಿಸಿತ್ತು.
ಪೃಥ್ವಿ ಅಂಬಾರ್ ಮತ್ತು ಕಾವ್ಯಾ ಶೈವ ನಟಿಸಿರುವ ಯಶ್ ತಾಯಿ ಪುಷ್ಪಾ ನಿರ್ಮಾಣ ಮಾಡಿರುವ ಕೊತ್ತಲವಾಡಿ ಸಿನಿಮಾ ಕೂಡ ಭಾರಿ ನಿರೀಕ್ಷೆ ಮೂಡಿಸಿತ್ತು. ಆದರೆ ಸಿನಿಮಾ ಅಂದುಕೊಂಡಷ್ಟು ಯಶಸ್ಸು ಪಡೆಯಲಿಲ್ಲ.
511
ರಾಯಲ್
ಕಿಸ್ ಸ್ಟಾರ್ ವಿರಾಟ್, ಸಂಜನಾ ಆನಂದ್, ರಘು ಮುಖರ್ಜಿ, ಛಾಯಾ ಸಿಂಗ್ ಸೇರಿ ದೊಡ್ಡ ತಾರಾಗಣವೇ ಇದ್ದ ದಿನಕರ್ ತೂಗುದೀಪ್ ನಿರ್ದೇಶನದ ರಾಯಲ್ ಸಿನಿಮಾ ಕೂಡ ಜನರು ಇಟ್ಟಿದ್ದ ನಿರೀಕ್ಷೆಯನ್ನ ಸುಳ್ಳು ಮಾಡಿತ್ತು.
611
ರುದ್ರ ಗರುಡ ಪುರಾಣ
ರುದ್ರ ಗರುಡ ಪುರಾಣ ಎಂಬ ಹೆಸರಿನಿಂದ ಜನರನ್ನು ಸೆಳೆದಿದ್ದ, ರಿಷಿ ನಟಿಸಿರುವ ಸಿನಿಮಾ ಕವಲು ದಾರಿ, ಆಪರೇಶನ್ ಅಲಮೇಲಮ್ಮ ಸಿನಿಮಾದಂತೆ ಗೆಲ್ಲಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಸದ್ದು ಮಾಡಿಯೇ ಇಲ್ಲ.
711
ವಿಷ್ಣು ಪ್ರಿಯ
ಶ್ರೇಯಸ್ ಮಂಜು ಮತ್ತು ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಟಿಸಿರುವ ಈ ಸಿನಿಮಾ ಕೂಡ ಪ್ರಮೋಶನ್ ಸಮಯದಲ್ಲಿ ಭರವಸೆ ಮೂಡಿಸಿತ್ತು. ಆದರೆ ಈ ರೋಮ್ಯಾಂಟಿಕ್ ಚಿತ್ರವನ್ನು ಜನ ಮಾತ್ರ ಇಷ್ಟ ಪಡಲಿಲ್ಲ.
811
ವಾಮನ
'ವಾಮನ' ಕನ್ನಡ ಆಕ್ಷನ್-ಡ್ರಾಮಾ ಚಿತ್ರ. ಧನ್ವೀರ್ ಗೌಡ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದ, ಶಂಕರ್ ರಾಮನ್ ಎಸ್ ನಿರ್ದೇಶಿಸಿ ಮತ್ತು ಚೇತನ್ ಕುಮಾರ್ ಗೌಡ ನಿರ್ಮಿಸಿರುವ ಇದು ತಾಯಿಯ ಮೇಲಿನ ಪ್ರೀತಿ, ಸೇಡು ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕಥೆಯಾಗಿತ್ತು. ಆದರೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ.
911
ವಿದ್ಯಾಪತಿ
ಟಗರು ಪಲ್ಯ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಡಾ. ನಾಗಭೂಷಣ್ ಮತ್ತು ಮಲೈಕಾ ವಸುಪಾಲ್ ನಟಿಸಿರುವ ವಿದ್ಯಾಪತಿ ಸಿನಿಮಾ ಕೂಡ ಡಾಲಿ ಪಿಕ್ಚರ್ಸ್ ಪ್ರೊಡಕ್ಷನ್ ನಿಂದಾಗಿ ಭಾರಿ ಹೈಪ್ ಪಡೆದಿತ್ತು. ಆದರೆ ಇದು ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು.
1011
ವೀರ ಚಂದ್ರಹಾಸ
ಯಕ್ಷಗಾನದ ಕಥೆಯನ್ನು ಹೊಂದಿರುವ ರವಿ ಬಸ್ರೂರ್ ನಿರ್ದೇಶನ ಮಾಡಿರುವ ಶಿವರಾಜ್ ಕುಮಾರ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ ವೀರ ಚಂದ್ರಹಾಸ ಸಿನಿಮಾ ಕೂಡ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡಿತ್ತು, ಆದರೆ ನಿರೀಕ್ಷೆಯಷ್ಟು ಯಶಸ್ಸು ಸಿನಿಮಾಗೆ ಸಿಕ್ಕಿಲ್ಲ.
1111
ರಿಪ್ಪನ್ ಸ್ವಾಮಿ
ಕಿಶೋರ್ ಮೂಡಬಿದ್ರೆ ನಿರ್ದೇಶನ ಮಾಡಿರುವ ರಿಪ್ಪನ್ ಸ್ವಾಮಿ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದರು. ಈ ಸಿನಿಮಾ ಕೂಡ ವಿಜಯ್ ರಾಘವೇಂದ್ರರ ವಿಭಿನ್ನ ಗೆಟಪ್ ನಿಂದ ಸುದ್ದಿಯಾಗಿತ್ತು. ಆದರೆ ಸಿನಿಮಾ ಗೆಲ್ಲಲಿಲ್ಲ.