ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯಾ ಮೊದಲ ಬಾರಿಗೆ 'ಜವರ' ಎಂಬ ಚಿತ್ರದಲ್ಲಿ ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಜೊತೆಗೆ ನಟಿಸುತ್ತಿದ್ದಾರೆ.
ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಹಾಗೂ ದುನಿಯಾ ವಿಜಯ್ ಪುತ್ರಿ ರಿತನ್ಯಾ ಮುಖ್ಯಪಾತ್ರದಲ್ಲಿರುವ ಹೊಸ ಸಿನಿಮಾ ಹೆಸರು ‘ಜವರ’. ಇತ್ತೀಚೆಗಷ್ಟೇ ಸಿನಿಮಾ ಸೆಟ್ಟೇರಿದೆ.
25
ಚಿತ್ರದ ಮುಹೂರ್ತ
'ಯಲಾ ಕುನ್ನಿ' ಚಿತ್ರವನ್ನು ಈ ಹಿಂದೆ ನಿರ್ದೇಶಿಸಿದ್ದ ಪ್ರದೀಪ್ ದಳವಾಯ್ ನಿರ್ದೇಶನದ ಈ ಚಿತ್ರದ ಮುಹೂರ್ತ ನಡೆದಿದ್ದು, ಸ್ಮಶಾನದಲ್ಲಿ ಶವಗಳನ್ನು ಹೂಳುವ ನೀಲಮ್ಮ ಈ ಸಿನಿಮಾಕ್ಕೆ ಕ್ಲಾಪ್ ಮಾಡಿದರು.
35
ಮೊದಲ ಬಾರಿಗೆ ನಾಯಕಿ
ದುನಿಯಾ ವಿಜಯ್ ಪುತ್ರಿ ರಿತನ್ಯಾ ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿಯೂ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.
ಈ ಕುರಿತು ರಿತನ್ಯಾ ‘ವೈದ್ಯಕೀಯ ವಿದ್ಯಾರ್ಥಿನಿ ಭೂಮಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸುತ್ತಿರುವುದಕ್ಕೆ ಖುಷಿ ಇದೆ’ ಎಂದರು.
55
ಸ್ಕ್ರಿಪ್ಟ್ ಅನ್ನು ತಕ್ಷಣವೇ ಇಷ್ಟಪಟ್ಟೆ
ನಾಯಕ ರಿಷಿ, ರುದ್ರನಾಗಿ ನಟಿಸುತ್ತಿದ್ದೇನೆ. ಬಹಳ ಒಳ್ಳೆಯ ಕತೆ. ಪ್ರದೀಪ್ ಕಥೆಯನ್ನು ಹೇಳಿದ ಕ್ಷಣವೇ ಸ್ಕ್ರಿಪ್ಟ್ ಅನ್ನು ತಕ್ಷಣವೇ ಇಷ್ಟಪಟ್ಟೆ ಎಂದರು. ಚಿದಾವೃಷಭ ಈ ಚಿತ್ರದ ನಿರ್ಮಾಪಕರು.