ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ರಂಗಿನ ಹಬ್ಬ ಹೋಳಿಯ ಸಂಭ್ರಮ ಹೇಗಿತ್ತು ನೋಡಿ

First Published | Mar 25, 2024, 5:02 PM IST

ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ತಾರೆಯರೂ ಕೂಡ ಭರ್ಜರಿಯಾಗಿ ಹೋಳಿ ಆಚರಿಸಿದ್ದು, ಅವರ ಸಂಭ್ರಮಾಚರಣೆ ಹೇಗಿತ್ತು ನೋಡೋಣ. 
 

ಇಂದು ದೇಶಾದ್ಯಂತ ಸಂಭ್ರಮದಿಂದ ಹೋಳಿ ಹಬ್ಬವನ್ನು (Holi festival) ಆಚರಿಸಲಾಗುತ್ತಿದೆ. ಬಣ್ಣಗಳ ಹಬ್ಬ ಹೋಳಿಯಲ್ಲಿ ದೇಶವೆಲ್ಲಾ ಮಿಂದೇಳುತ್ತಿದೆ, ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸಹ ಹೋಳಿ ಆಡಿ ಸಂಭ್ರಮಿಸಿದ್ದಾರೆ. 
 

ಹೌದು ಕನ್ನಡದ ಸ್ಟಾರ್, ನಟ ನಟಿಯರು ಹೋಳಿ ಹಬ್ಬವನ್ನು ವಿವಿಧ ರೀತಿಯ ಸೆಲೆಬ್ರೇಟ್ ಮಾಡುವ ಮೂಲಕ ಎಂಜಾಯ್ ಮಾಡಿದ್ದಾರೆ, ಕೆಲವರು ಬಣ್ಣ ಹಚ್ಚುವ ಮೂಲಕ ಆಚರಿಸಿದರೆ, ಮತ್ತೆ ಕೆಲವರು ಬಣ್ಣ ಬಣ್ಣ ಸಿಹಿ ತಿನಿಸು, ಹೂವುಗಳ ಮೂಲಕ ಬಣ್ಣಗಳ ಹಬ್ಬವನ್ನು (festival of colors) ಆಚರಿಸಿದ್ದಾರೆ. 
 

Tap to resize

ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರಿಟಿಗಳಾದ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ (Priyanka Upendra) ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರ್ಯಾಂಡ್ ಸೆಲೆಬ್ರೇಶನ್ ಏರ್ಪಡಿಸಿದ್ದು, ಕನ್ನಡದ ಹಲವು ನಟ ನಟಿಯರು ಈ ಹಬ್ಬದಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ. 
 

ಉಪೇಂದ್ರ, ಪ್ರಿಯಾಂಕ, ಮಕ್ಕಳಾದ ಆಯುಷ್, ಐಶ್ವರ್ಯ, ಉಪೇಂದ್ರ ಅವರ ತಂದೆ, ತಾಯಿ, ಅಣ್ಣ, ಅತ್ತಿಗೆ, ಅವರ ಮಕ್ಕಳು, ನಿರಂಜನ್ ಸುಧೀಂದ್ರ ಎಲ್ಲರೂ ಜೊತೆಯಾಗಿ ಸೇರಿ ಹಬ್ಬ ಆಚರಿಸಿದ್ದು, ಬಣ್ಣ ಎರಚಿ, ಹೋಳಿ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡಿದ್ದಾರೆ.
 

ಪ್ರಿಯಾಂಕ ಉಪೇಂದ್ರ ಏರ್ಪಡಿಸಿದ ಈ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಗುರು ಕಿರಣ್ ಮತ್ತು ಅವರ ಪತ್ನಿ ಪಲ್ಲವಿ, ಸೌಂದರ್ಯ ಜಗದೀಶ್ ದಂಪತಿಗಳು, ಆಗಮಿಸಿ ಹಬ್ಬದ ಕಳೆ ಹೆಚ್ಚಿಸಿದರು. 
 

ಜೊತೆಗೆ ದಿಶಾ ಮದನ್ ದಂಪತಿಗಳು, ಶರಣ್ಯ ಶೆಟ್ಟಿ, ಶ್ರುತಿ ನಂದೀಶ್, ಸುಜಾತ ಕಷ್ಯಪ್, ಅನುಷಾ ರೈ, ಅನುಪ್ರಭಾಕರ್, ರಘು ಮುಖರ್ಜಿ, ಮೊದಲಾದ ನಟ ನಟಿಯರು ಸಹ ಬಣ್ಣಗಳಲ್ಲಿ ಆಡುವ ಮೂಲಕ ಸಂಭ್ರಮಿಸಿರೋದನ್ನು ಕಾಣಬಹುದು. 
 

ಸೃಜನ್ ಲೋಕೇಶ್ ಅವರ ಕುಟುಂಬ ಸಹ ಹೋಳಿ ಆಚರಣೆಯಲ್ಲಿ ಭಾಗಿಯಾಗಿದ್ದು, ಸೃಜನ್ ಸಹೋದರಿ ಪೂಜಾ ಲೋಕೇಶ್, ವಿವಿಧ ವಿಡಿಯೋ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಸೃಜನ್ ಪತ್ನಿ ಗ್ರೀಷ್ಮಾ ಜೊತೆ ಡ್ಯಾನ್ಸ್ ಮಾಡುವ, ಎಂಜಾಯ್ ಮಾಡುತ್ತಿರೋದನ್ನು ಕಾಣಬಹುದು. 
 

ಪ್ರಿಯಾಂಕ ಉಪೇಂದ್ರ ನಿವಾಸದಲ್ಲಿಯೇ ಬೃಹತ್ ಪಾರ್ಟಿ ಆಯೋಜಿಸಿದ್ದು, ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಕಲರ್ ಪೇಪರ್ ನಿಂದ ಸಿಂಗರಿಸಿದ್ದಾರೆ, ಬಣ್ಣಗಳ ಜೊತೆ ಆಟ, ಮನೋರಂಜನೆ ಎಲ್ಲವನ್ನು ಸೆಲೆಬ್ರಿಟಿಗಳು ಎಂಜಾಯ್ ಮಾಡಿದಂತೆ ಕಾಣುತ್ತಿದೆ. 
 

ಇನ್ನು ಎವರ್ ಗ್ರೀನ್ ನಟಿ ಸುಧಾರಾಣಿ (Sudharani) ಸಹ ಬಣ್ಣಗಳ ಹಬ್ಬವನ್ನು ವಿಶೇಷವಾಗಿ ಎಂಜಾಯ್ ಮಾಡಿದ್ದು, ಬಿಳಿ ಬಣ್ಣದ ಶರ್ಟ್ ಪ್ಯಾಂಟ್ ಧರಿಸಿ, ಮೈ, ಮುಖದಲ್ಲೆಲ್ಲಾ ಬಣ್ಣ ಬಳಿದು, ಕಲರ್ ಕಲರ್ ಕಲರ್ ಕಲರ್ ಹಾಡಿಗೆ ಸಖತ್ತಾಗಿ ಹೆಜ್ಜೆ ಹಾಕಿರುವ ವಿಡಿಯೋ ಪೋಸ್ಟ್ ಮಾಡಿ, ಹೋಳಿ ಹಬ್ಬದ ಶುಭ ಕೋರಿದ್ದಾರೆ. 
 

Latest Videos

click me!