ಡಾ. ರಾಜ್‌ಕುಮಾರ್ ಅಭಿನಯಿಸಿದ ಒಂದೇ ಒಂದು ತೆಲುಗು ಸಿನಿಮಾ ಯಾವುದು?

First Published | Oct 21, 2024, 10:00 PM IST

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ, ಕನ್ನಡದ ಕಣ್ಮಣಿ ಡಾ. ರಾಜ್‌ಕುಮಾರ್ ಕನ್ನಡ ಸಿನಿಮಾಗೆ ನೀಡಿದ ಕೊಡುಗೆ ಬಿಡಿಸಿ ಹೇಳಬೇಕಾಗಿಲ್ಲ. ಕನ್ನಡ ಬಿಟ್ಟು ಬೇರೆ ಭಾಷಣೆಯಲ್ಲಿ ರಾಜ್ ನಟಿಸಿಲ್ಲ. ಇದರ ನಡುವೆ ಒಂದೇ ಒಂದು ತೆಲುಗು ಸಿನಿಮಾದಲ್ಲಿ ಡಾ. ರಾಜ್ ನಟಿಸಿದ್ದಾರೆ. ಆ ಚಿತ್ರ ಯಾವುದು?
 

ಭಾರತ ಚಿತ್ರರಂಗದಲ್ಲಿ ಡಾ.ರಾಜ್‌ಕುಮಾರ್ ಸಂಪಾದಿಸಿದ ಪ್ರೀತಿ, ವಿಶ್ವಾಸ, ಅಭಿಮಾನಿ ಬಳಕ ಬಹುಷ ಮತ್ತೊಬ್ಬ ನಟರಿಗೆ ಸಿಕ್ಕಿಲ್ಲ. ಭಾರತದ ಯಾವುದೇ ಸಿನಿಮಾ ಇಂಡಸ್ಟ್ರಿ ಆಗಲಿ ಡಾ. ರಾಜ್‌ಕುಮಾರ್ ಪರಮೊಚ್ಚ ಗೌರವ, ಪ್ರೀತಿ ನೀಡುತ್ತಾರೆ. ಹಲವು ಧಶಕಗಳ ಕಾಲ ಅಣ್ಣಾವ್ರು ಕನ್ನಡ ಚಿತ್ರರಂಗವನ್ನು ಆಳಿದ್ದಾರೆ. ರಾಜ್ ಕಾಲಾನಂತರವೂ ಕನ್ನಡ ಚಿತ್ರರಂಗ ಅಣ್ಣಾವ್ರ ನೆರಳಿನಲ್ಲೇ ನಡೆಯುತ್ತಿದೆ. 200ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್.  

ರಾಜ್‌ಕುಮಾರ್‌ಗೆ ಇತರ ಭಾಷೆಗಳಲ್ಲಿ, ಸಿನಿಮಾ ಇಂಡಸ್ಟ್ರಿಗಳಲ್ಲೂ ಭಾರಿ ಬೇಡಿಕೆ ಇದ್ದ ನಟ. ಆದರೆ ಕನ್ನಡ ಬಿಟ್ಟು ಬೇರೆ ಭಾಷೆಯತ್ತ ಗಮನಹರಿಸಿದವರಲ್ಲ.  ಚಂದನವನದ ದಂತಕಥೆಯಾದ ರಾಜ್‌ಕುಮಾರ್ ತೆಲುಗಿನಲ್ಲಿ ಒಂದು ಚಿತ್ರ ಮಾಡಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಬೇರೆ ಯಾವ ಭಾಷೆಯಲ್ಲೂ ಅವರು ಚಿತ್ರಗಳನ್ನು ಮಾಡಿಲ್ಲ. ಕೇವಲ ಕನ್ನಡಕ್ಕೆ ಸೀಮಿತರಾಗಿದ್ದರು. ಕನ್ನಡದಲ್ಲಿ ಅವರೇ ನಟಿಸಿದ ಚಿತ್ರದ ರಿಮೇಕ್ ಆಗಿರುವುದು ಇನ್ನೊಂದು ವಿಶೇಷ. ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ಆ ಚಿತ್ರ ಬ್ಲಾಕ್‌ಬಸ್ಟರ್ ಆಯಿತು.  
 

Tap to resize

ಡಾ. ರಾಜ್‌ಕುಮಾರ್ ನಟಿಸಿದ ಏಕೈಕ ತೆಲುಗು ಚಿತ್ರ  ಕಾಳಹಸ್ತಿ ಮಹಾತ್ಮೆ. ಭಕ್ತಿಪ್ರಧಾನ ಚಿತ್ರ ಇದು ಬೇಡರ ಕಣ್ಣಪ್ಪ ಚಿತ್ರದ ರಿಮೇಕ್. ಈ ಚಿತ್ರಕ್ಕೆ ಹೆಚ್. ಎಲ್. ಎನ್. ಸಿಂಹಾ ನಿರ್ದೇಶನ ಮಾಡಿದ್ದಾರೆ. ರಾಜ್‌ಕುಮಾರ್ ನಾಯಕ. ಅವರ ಜೊತೆಗೆ ಮಾಲತಿ, ರತನ್, ಕುಶಾಲ ಕುಮಾರಿ, ಮುದಿಗೊಂಡ ಲಿಂಗಮೂರ್ತಿ, ಕುಮಾರಿ, ಪದ್ಮನಾಭಂ, ಹೆಚ್. ಆರ್. ರಾಮಚಂದ್ರ ಶಾಸ್ತ್ರಿ, ರುಷ್ಯೇಂದ್ರಮಣಿ, ರಾಜಸುಲೋಚನ ನಟಿಸಿದ್ದಾರೆ. ಸಿ.ಆರ್. ಬಸವರಾಜು, ಗುಬ್ಬಿ ವೀರಣ್ಣ ನಿರ್ಮಿಸಿದ್ದಾರೆ. ಚಿತ್ರ ಪೂರ್ತಿ ಸಂಗೀತಮಯ.  

ಈ ಚಿತ್ರದಲ್ಲಿ ಒಟ್ಟು 16 ಹಾಡುಗಳಿವೆ. ಆರ್. ಗೋವರ್ಧನಂ, ಆರ್. ಸುದರ್ಶನಂ ಸಂಗೀತ ನೀಡಿದ್ದಾರೆ. ಎ. ಎಂ. ರಾಜಾ, ಎಂ. ಎಲ್. ವಸಂತಕುಮಾರಿ, ಘಂಟಸಾಲ ವೆಂಕಟೇಶ್ವರರಾವ್, ಪಿ. ಸುಶೀಲ, ಟಿ.ಎಸ್. ಭಗವತಿ ಹಾಡಿದ್ದಾರೆ. ಇರುವ ಕೆಲವು ಸಂವಾದಗಳನ್ನು ತೋಲೇಟಿ ವೆಂಕಟರೆಡ್ಡಿ ಬರೆದಿದ್ದಾರೆ. ಈ ಚಿತ್ರ 1954 ನವೆಂಬರ್ 12 ರಂದು ಬಿಡುಗಡೆಯಾಯಿತು. ಹಲವು ಕಡೆಗಳಲ್ಲಿ ನೂರು ದಿನಗಳು ಪ್ರದರ್ಶನ ಕಂಡಿತು. ಸಂಗೀತ ಹಿಟ್ ಆಯಿತು.  ಹಾಡುಗಳನ್ನು ಪ್ರೇಕ್ಷಕರು ಮೆಚ್ಚಿದರು. ಕನ್ನಡದಲ್ಲಿ ಬೇಡರ ಕಣ್ಣಪಪ್ಪ ಚಿತ್ರದ ಮೂಲಕವೇ ಅವರು ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಿರುವುದು ವಿಶೇಷ. ಹೀಗೆ ತಮ್ಮ ಮೊದಲ ಚಿತ್ರದ ಮೂಲಕವೇ ಕನ್ನಡ, ತೆಲುಗು ಪ್ರೇಕ್ಷಕರನ್ನು ರಂಜಿಸಿದರು 

ರಾಜ್‌ಕುಮಾರ್ ಕೊನೆಯ ಚಿತ್ರ ಶಬ್ದವೇದಿ. ಈ ಚಿತ್ರ 2000ನೇ ಇಸವಿಯಲ್ಲಿ ತೆರೆಕಂಡಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಭಕ್ತ ಅಂಬರೀಷ ಚಿತ್ರದಲ್ಲಿ ನಟಿಸಲು ಎಲ್ಲಾ ತಯಾರಿ ಮಾಡಿದ್ದರು. ಈ ವೇಳೆ ಅಕಾಲಿಕ ಮರಣ ದೇಶದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಈಗಲೂ ಕಾಡುತ್ತಿದೆ. ಮತ್ತೊಂದು ನೋವು ಹಾಗೂ ಆಘಾತ ಎಂದರೆ ರಾಜ್‌ಕುಮಾರ್ ರೀತಿ ಅಪಾರ ಅಭಿಮಾನಿ ಬಳಕ ಹಾಗೂ ಅದೇ ಗೌರವ ಸಂಪಾದಿಸಿದ ಅಣ್ಣಾವ್ರ ಪುತ್ರ ಪುನೀತ್ ರಾಜ್‌ಕುಮಾರ್ ನಿಧನ ಈಗಲೂ ನಂಬಲಾಗದ, ಅರಗಿಸಿಕೊಳ್ಳಲಾಗದ ಘಟನೆ. ಶಿವರಾಜ್ ಕುಮಾರ್ ನಟನೆಯಲ್ಲಿ ಸಕ್ರಿಯರಾಗಿದ್ದರೆ, ರಾಘವೇಂದ್ರ ರಾಜ್‌ಕುಮಾರ್ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

Latest Videos

click me!