ಮಗುವಿಗೆ ತಿಂಗಳು ಆಗೋವಷ್ಟರಲ್ಲೆ ಸಿನಿಮಾ ಪ್ರಚಾರಕ್ಕೆ ರೆಡಿಯಾದ್ರು ನಟಿ ಮಿಲನಾ ನಾಗರಾಜ್

Published : Oct 21, 2024, 06:15 PM ISTUpdated : Oct 22, 2024, 07:26 AM IST

ತಿಂಗಳ ಹಿಂದೆಯಷ್ಟೇ ಮುದ್ದಾದ ಹೆಣ್ಣುಮಗುವಿಗೆ ತಾಯಿಯಾಗಿರುವ ನಟಿ ಮಿಲನಾ ನಾಗರಾಜ್ ಇದೀಗ ತಮ್ಮ ಹೊಸ ಸಿನಿಮಾ ಪ್ರಚಾರಕ್ಕೆ ರೆಡಿಯಾಗಿದ್ದಾರೆ.   

PREV
16
ಮಗುವಿಗೆ ತಿಂಗಳು ಆಗೋವಷ್ಟರಲ್ಲೆ ಸಿನಿಮಾ ಪ್ರಚಾರಕ್ಕೆ ರೆಡಿಯಾದ್ರು ನಟಿ ಮಿಲನಾ ನಾಗರಾಜ್

ಸ್ಯಾಂಡಲ್’ವುಡ್ ನ ಖ್ಯಾತ ಜೋಡಿಗಳಾದ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ ಒಂದು ತಿಂಗಳ ಹಿಂದೆ ಮುದ್ದಾದ ಹೆಣ್ಣು ಮಗುವನ್ನ ತಮ್ಮ ಜೀವನಕ್ಕೆ ಬರಮಾಡಿಕೊಂಡಿದ್ದರು. ಸದ್ಯ ಇಬ್ಬರು ತಂದೆ- ತಾಯಿಯಾಗಿರೋ ಸಂಭ್ರಮದಲ್ಲಿದ್ದಾರೆ. ಮುದ್ದಿನ ಮಗಳಿಗೆ ಪ್ರೀತಿಯಿಂದ ಪರಿ ಅಂತ ಕರೆದಿದ್ದಾರೆ. 
 

26

ಸೆಪ್ಟೆಂಬರ್ 05ರಂದು  ನಟಿ ಮಿಲನಾ ನಾಗರಾಜ್ (Milana Nagraj)ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂಭ್ರಮವನ್ನು ಡಾರ್ಲಿಂಗ್ ಕೃಷ್ಣ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಡೆಲಿವರಿ ಆಗಿ ಮಗಳೊಂದಿಗೆ ಮನೆಗೆ ಬಂದ ಕೃಷ್ಣಾ ಮತ್ತು ಮಿಲನಾರನ್ನು ಮನೆಮಂದಿ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಅಷ್ಟೇ ಅಲ್ಲ, ನಂತರದ ದಿನಗಳಲ್ಲಿ ಮುದ್ದಾದ ಫ್ಯಾಮಿಲಿ ಫೋಟೊ ರಿಲೀಸ್ ಮಾಡುವ ಮೂಲಕ, ಮಗಳ ಮುಖವನ್ನು ಸಹ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. 
 

36

ಇದೀಗ ಮಗುವಾಗಿ ಕೇವಲ ಒಂದು ತಿಂಗಳು ಕಳೆದಿದೆ ಅಷ್ಟೇ ನಟಿ ತಮ್ಮ ಸಿನಿಮಾ ಪ್ರಚಾರಕ್ಕೆ ರೆಡಿಯಾಗಿದ್ದಾರೆ. ಹೌದು, ಮಿಲನಾ ನಾಗರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಝೀ ಕುಂಟುಂಬ ಅವಾರ್ಡ್ಸ್ ಗೆ (Zee Kutumba Awards) ರೆಡಿಯಾಗಿರುವ ಫೋಟೊಗಳನ್ನ ಅಪ್ ಲೋಡ್ ಮಾಡಿದ್ದು, ತಮ್ಮ ಸಿನಿಮಾ ಪ್ರಚಾರಕ್ಕೆ ರೆಡಿಯಾಗಿರೋದಾಗಿ ತಿಳಿಸಿದ್ದಾರೆ. 
 

46

ಹೌದು ಮಿಲನಾ ನಾಗರಾಜ್ ಆರಾಮ ಅರವಿಂದಾ ಸ್ವಾಮಿ (Aaram Aravind Swamy) ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಅನೀಶ್ ತೇಜೇಶ್ವರ್ ನಟಿಸಿರುವ ಈ ಸಿನಿಮಾ ನವಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಹಾಗಾಗಿ ನಟಿ ಮಗು ಹುಟ್ಟಿ ಒಂದೇ ತಿಂಗಳಲ್ಲಿ ಇದೀಗ ಸಿನಿಮಾ ಪ್ರಚಾರಕ್ಕೆ ರೆಡಿಯಾಗಿದ್ದಾರೆ. ತಿಳಿ ಗುಲಾಬಿ ಬಣ್ಣದ ಸೀರೆಯುಟ್ಟಿರುವ ಮಿಲನಾ ಬಿಳಿ ಬಣ್ಣದ ಡಿಸೈನರ್ ಬ್ಲೌಸ್ ಧರಿಸಿದ್ದು, ಮುತ್ತಿನ ಸುಂದರವಾದ ನೆಕ್ ಪೀಸ್ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

56

ಅಲ್ಲದೇ ವೈರಲ್ (Viral Video) ಆಗಿರೋ ವಿಡೀಯೋ ಒಂದರಲ್ಲಿ ನಟಿ ಮಗುವನ್ನು ಎತ್ತಿ ಮುದ್ದಾಡುತ್ತಿರೋದನ್ನು ಸಹ ಕಾಣಬಹುದು. ಮಗಳಿಗೂ ಪಿಂಕ್ ಬಣ್ಣದ ಡ್ರೆಸ್ ಧರಿಸಿದ್ದು, ಕೈಯಲ್ಲಿ ಹಿಡಿದು, ನಿದ್ದೆ ಮಾಡುವಂತೆ ಆಡಿಸುತ್ತಿರುವ ಮುದ್ದಾದ ಫೋಟೊ ಇದಾಗಿದ್ದು, ಅಮ್ಮ -ಮಗಳಿಗೆ ಜನರು ಪ್ರೀತಿಯ ಸುರಿಮಳೆ ಸುರಿಸಿದ್ದಾರೆ. 
 

66

ಇನ್ನು ಒಂದು ತಿಂಗಳ ಹಿಂದಷ್ಟೆ ಮಗುವಿಗೆ ಜನ್ಮ ನೀಡಿರೋದರಿಂದ, ಅಷ್ಟು ಬೇಗ ಮಗುವನ್ನ ಬಿಟ್ಟು ಪ್ರಚಾರಕ್ಕೆ ಹೊರಟಿರೋ ನಟಿಗೆ ಜನ ಪ್ರಚಾರ ಮಾಡುವಂತೆ, ಮಗುವನ್ನ ಚೆನ್ನಾಗಿ ನೋಡಿಕೊಬೇಕು ಮೇಡಂ ಎಂದಿದ್ದಾರೆ. ಜೊತೆಗೆ ಬಾಣಂತಿಯಾಗಿದ್ದರೂ ಫಿಟ್ನೆಸ್ ಕಾಯ್ದುಕೊಂಡಿರುವ ನಟಿಯನ್ನ ನೋಡಿ ತುಂಬಾನೆ ಮುದ್ದಾಗಿದ್ದೀರಿ, ಸಂತೂರ್ ಮಮ್ಮಿ ಎಂದು ಕಾಮೆಂಟ್ ಮಾಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories