ನೇರ ನುಡಿಯ ಬೆಂಕಿ ಚೆಂಡು ತನಿಷಾ ಕುಪ್ಪಂಡ ಸದ್ಯ ಸುದ್ದಿಯಲ್ಲಿಲ್ಲ ಯಾಕೆ? ಇರ್ಲಿ ಬಿಡಿ, ಫೋಟೋಸ್ ನೋಡಿ!

Published : Feb 05, 2025, 02:26 PM ISTUpdated : Feb 05, 2025, 02:28 PM IST

ಇತ್ತೀಚೆಗೆ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ ನಡೆಸುತ್ತಿರುವ ತನಿಷಾ, ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕೋಮಲ್ ಕುಮಾರ್ ನಟನೆಯ 'ಕೋಣ' ಸಿನಿಮಾವನ್ನು ತನಿಷಾ ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ... 

PREV
112
ನೇರ ನುಡಿಯ ಬೆಂಕಿ ಚೆಂಡು ತನಿಷಾ ಕುಪ್ಪಂಡ ಸದ್ಯ ಸುದ್ದಿಯಲ್ಲಿಲ್ಲ ಯಾಕೆ? ಇರ್ಲಿ ಬಿಡಿ, ಫೋಟೋಸ್ ನೋಡಿ!

ನಟಿ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕತ್ ಆಕ್ವಿವ್. ಅವರು ತಮ್ಮ ಅಂದಚೆಂದದ ಫೋಟೋಗಳನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. 
 

212

ಅದು ಫೋಟೋ ಶೂಟ್ ಇರಬಹುದು ಅಥವಾ ಫಂಕ್ಷನ್‌, ಪಾರ್ಟಿ ಸಮಾರಂಭಗಳೇ ಇರಬಹುದು, ನಟಿ ತನಿಷಾ ಮೇಕಪ್ ಮಾಡಿಕೊಳ್ಳುವುದರಲ್ಲಿ ಹಾಗೂ ಫೋಟೋ ಹೊರಗೆ ಹರಿಬಿಡುವುದರಲ್ಲಿ ಸದಾ ಎತ್ತಿದ ಕೈ!
 

312

ನಟಿ ತನಿಷಾ ಕುಪ್ಪಂಡ ಅವರು 'ಹಳ್ಳಿ ದುನಿಯಾ' ರಿಯಾಲಿಟಿ ಶೋ ಮೂಲಕ ಬಣ್ಣದ ಬದುಕಿಗೆ ಬಂದವರು. ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಮೇಕಪ್‌ ಬಿಟ್ಟು ಬದುಕಿಲ್ಲ ಎಂಬಂತೆ ಸದಾ ಹೊಸತನಕ್ಕೆ ಹೊಂದಿಕೊಂಡವರು. 

412

ಸದಾ ಏನಾದರೊಂದು ಚಟುವಟಿಕೆಯಲ್ಲಿ ಭಾಗಿಯಾಗುತ್ತ, ಸಿಕ್ಕ ಸಿನಿಮಾದಲ್ಲಿ ನಟಿಸುತ್ತ, ಕೆಲವೊಮ್ಮೆ ಬಿಗ್ ಬಾಸ್‌ನಂಥ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುತ್ತ ವೃತ್ತಿಜೀವನದಲ್ಲಿ ಮುಂದುವರಿಯುತ್ತ ಸಾಗುತ್ತಿರುವವರು. 
 

512

ಇತ್ತೀಚೆಗೆ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ ನಡೆಸುತ್ತಿರುವ ತನಿಷಾ, ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕೋಮಲ್ ಕುಮಾರ್ ನಟನೆಯ 'ಕೋಣ' ಸಿನಿಮಾವನ್ನು ತನಿಷಾ ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಸೀರಿಯಲ್ ನಿರ್ಮಾಣವನ್ನೂ ಸಹ ಮಾಬಹುದು. 

612

ಈ ಬಗ್ಗೆ ಮಾತನಾಡಿರುವ ತನಿಷಾ 'ನನಗೆ ಗೊತ್ತಿರುವುದೇ ಬಣ್ಣದ ಬದುಕು, ಅದೇ ನನ್ನ ವೃತ್ತಿ ಹಾಗೂ ಪ್ರವೃತ್ತಿ. ನಾನೇನು ಮಾಡಿದರೂ ಇಲ್ಲೇ ಮಾಡಬೇಕು, ಇದರಲ್ಲೇ ಸಾಧಿಸಬೇಕು' ಎಂದಿದ್ದಾರೆ. 
 

712

ನಟ ಕೋಮಲ್ ಜೊತೆಗಿನ ಸಿನಿಮಾ ನಿರ್ಮಾಣದಲ್ಲಿ ಸದ್ಯ ತೊಡಗಿಸಿಕೊಂಡಿರುವ ತನಿಷಾ, ಅದರಲ್ಲಿ ನಾಯಕಿಯಾಗಿ ತಾವೂ ನಟಿಸುತ್ತಿದ್ದಾರೆ. ಕೋಣ ಸಿನಿಮಾ ಹಾಸ್ಯ ಬೇಸ್ಟ್ ಆಗಿದ್ದರೂ ಕೂಡ ಅದರಲ್ಲಿ ಸಿನಿಪ್ರಿಯರನ್ನು ರಂಜಿಸುವ ಸಕಲವೂ ಇದೆ ಎನ್ನಲಾಗಿದೆ. 

812

ಕೋಣ ಟೀಸರ್ ಕೂಡ ಬಿಡುಗಡೆಯಾಗಿ ಗಮನ ಸೆಳೆದಿದೆ. ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ನಿರ್ಮಾಪಕಿ ಹಾಗೂ ನಟಿ ತನಿಷಾ ಮಾತನ್ನಾಡಿ 'ಕೋಣ' ಚಿತ್ರದ ಬಗ್ಗೆ ತಮ್ಮ ಅನಿಸಿಕೆ-ಅಭಿಪ್ರಾಯ ಹಾಗೂ ನಿರ್ಮಾಣ ಮಾಡುತ್ತಿರುವ ಖುಷಿ ಹಂಚಿಕೊಂಡಿದ್ದಾರೆ. 

912

ನಟಿ ತನಿಷಾ ಅವರು ಮೇಕಪ್ ಪ್ರಿಯೆ. ಅವರು ಅದನ್ನು ಬಹಿರಂಗವಾಗಿಯೇ ಬಿಗ್ ಬಾಸ್ ವೇದಿಕೆ ಸೇರಿದಂತೆ ಹಲವಾರು ಕಡೆಗಳಲ್ಲಿ ಹೇಳಿಕೊಂಡಿದ್ದಾರೆ. 'ನನಗೆ ಮೇಕಪ್ ಮಾಡಿಕೊಳ್ಳುವುದು ಅಂದ್ರೆ ತುಂಬಾ ಇಷ್ಟ. 

1012

ನಾನು ಇಡೀ ದಿನ ಬೇಕಾದ್ರೂ ಕನ್ನಡಿ ಮುಂದೆ ಇರಲು ಇಷ್ಟಪಡ್ತೀನಿ. ಕಲರ್‌ಫುಲ್ ಬಟ್ಟೆ ಧರಿಸುವುದು ಕೂಡ ನನಗೆ ಇಷ್ಟ' ಎಂದಿದ್ದಾರೆ. 

1112

ಇನ್ನು, ನಟಿ ತನಿಷಾ ಅವರು ಕಾಲೇಜ್‌ ದಿನಗಳಲ್ಲೇ ಸ್ವಂತ ದುಡಿಮೆಯ ರುಚಿ ಕಂಡವರು, ತಮ್ಮ ದುಡಮೆಯಲ್ಲಿಯೇ ಖುಷಿ ಕಂಡವರು. ಅದೆಲ್ಲವುಗಳನ್ನು ತನಿಷಾ ಕುಪ್ಪಂಡ ತಮ್ಮ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 

1212

ನಟಿ ತನಿಷಾ ಕುಪ್ಪಂಡ ಕಲರ್‌ಫುಲ್ ಪೋಟೋಗಳನ್ನು ನೋಡಿ ಎಂಜಾಯ್ ಮಾಡಿದ್ದಿರ.. ನಿಮಗೆ ಏನನ್ನಿಸಿತು? ಕಾಮೆಂಟ್ ಮಾಡಿ ತಿಳಿಸಿ, ಕೆಟ್ಟ ಕಾಮೆಂಟ್ ಮಾಡಬೇಡಿ, ಮನುಷ್ಯರಿಗೆಲ್ಲರಿಗೂ ಮನಸ್ಸಿದೆ ಅನ್ನೋದನ್ನ ಮರೀಬೇಡಿ, ಆಯ್ತಾ..?!

Read more Photos on
click me!

Recommended Stories