ಒಂದೇ ದಿನದಲ್ಲಿ ದಾಖಲೆ ಬರೆದ ಸುದೀಪ್​ Mark Trailer​: ಇಷ್ಟೊಂದು Views​ ಆಗಿದ್ದು ನಿಜನಾ? ಏನಿದು ಚರ್ಚೆ?

Published : Dec 09, 2025, 11:36 AM IST

ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 1.4 ಕೋಟಿ ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಆದರೆ,  ವೀಕ್ಷಣೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದು, ಇದು ನಿಜವಾದ ವೀಕ್ಷಣೆಗಳೇ  ಎಂಬ ಚರ್ಚೆ ನಡೆಯುತ್ತಿದೆ. ಯಾಕಿಷ್ಟು ಚರ್ಚೆ?

PREV
18
ಬೆರಳೆಣಿಕೆಯಷ್ಟು ಸಕ್ಸಸ್​

ಇಂದು ವಿವಿಧ ಭಾಷೆಗಳಲ್ಲಿ ಸಾವಿರಾರು ಚಿತ್ರಗಳು ತೆರೆಗೆ ಬರುತ್ತಿದ್ದರೂ ಬೆರಳೆಣಿಕೆಯಷ್ಟು ಮಾತ್ರ ಸಕ್ಸಸ್​ ಕಾಣಿಸುತ್ತಿದೆ. ಕೆಲವು ಸಿನಿಮಾಗಳು ಎಷ್ಟೇ ಬಂಡವಾಳ ಹಾಕಿ ಮಾಡಿದ್ದರೂ ಹೇಳ ಹೆಸರೇ ಇಲ್ಲದಂತೆ ತೆರೆಮರೆಗೆ ಸರಿಯುತ್ತಿದ್ದರೆ, ಕೆಲವು ಕಡಿಮೆ ಬಂಡವಾಳ ಹಾಕಿ ಆಡಂಬರವೇ ಇಲ್ಲದಿದ್ದರೂ ಪ್ಯಾನ್​ ಇಂಡಿಯಾ ದಾಟಿಯೂ ಮಿಂಚಿ ಬಿಡುತ್ತದೆ.

28
ಮಾರ್ಕ್​​ ಚಿತ್ರ ಸದ್ದು

ಇದೀಗ ಕಿಚ್ಚ ಸುದೀಪ್​ ಅಭಿನಯದ ಮಾರ್ಕ್​ ಚಿತ್ರ ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ ಇದರ ಟ್ರೈಲರ್​ ಬಿಡುಗಡೆಯಾಗಿದೆ. ಚಿತ್ರವು ಇದೇ 25ರಿಂದ ವಿವಿಧ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ಇದೀಗ ಸುದೀಪ್​ ಅವರ MARK ಚಿತ್ರ ಸದ್ದು ಮಾಡುತ್ತಿರಲು ಕಾರಣ, ಅದರ ವ್ಯೂವ್ಸ್​.

38
ದಾಖಲೆ ಬರೆದ ಮಾರ್ಕ್​ ಟ್ರೈಲರ್​

ಹೌದು. ಒಂದೇ ದಿನದಲ್ಲಿ ದಾಖಲೆಯನ್ನು ಬರೆದಿದೆ ಮಾರ್ಕ್​ ಟ್ರೈಲರ್​ (Kichcha Sudeeps' Mark Trailer). ಮಾರ್ಕ್' ಟ್ರೈಲರ್ ಬಿಡುಗಡೆಯಾದ ಮೊದಲ 7 ಗಂಟೆಗಳಲ್ಲಿ ಸುಮಾರು 1 ಕೋಟಿ 30 ಲಕ್ಷ views ಆಗಿತ್ತು. ಬಳಿಕ ಮೊದಲ 24 ಗಂಟೆಗಳಲ್ಲಿ 1 ಕೋಟಿ 40 ಲಕ್ಷ ವೀಕ್ಷಣೆ ಗಳಿಸಿದೆ. ಈ ಮೂಲಕ ದಾಖಲೆ ಮಾಡಿದೆ.

48
ಭಾರಿ ಚರ್ಚೆ

ಆದರೆ ಇದರ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಇಷ್ಟೊಂದು ವ್ಯೂವ್ಸ್​ ನಿಜಕ್ಕೂ ಪಡೆಯಲು ಸಾಧ್ಯನಾ, ಇದು ಫೇಕ್​ ಎನ್ನುವುದು ಕೆಲವರ ಮಾತು. ಅದಕ್ಕೆ ಕಾರಣ ಏನೆಂದರೆ, ಈ ಮೊದಲೇ ಹೇಳಿದ ಹಾಗೆ ಮೊದಲ 7 ಗಂಟೆಗಳಲ್ಲಿ 1 ಕೋಟಿ 30 ಲಕ್ಷ ವ್ಯೂವ್ಸ್​ ಆದ್ರೆ ಒಟ್ಟೂ 24 ಗಂಟೆಗಳಲ್ಲಿ 1 ಕೋಟಿ 40 ಲಕ್ಷ ದಾಖಲಾಗಿದೆ. ಇದರ ಅರ್ಥ 8 ಗಂಟೆಯಿಂದ ಮುಂದಿನ ಅವಧಯಲ್ಲಿ ಕೇವಲ 10 ಲಕ್ಷ ಮಾತ್ರ ಆಗಿರೋದಾ? ಇದನ್ನು ನಂಬಬೇಕಾ ಎನ್ನುವುದು ಅವರ ವಾದ. ಇದು ಪೇಯ್ಡ್​ ವ್ಯೂವ್ಸ್​ ಎನ್ನುವುದು ಅವರ ವಾದ!

58
ಜನರಿಗೆ ಹೊಟ್ಟೆ ಉರಿ

ಆದರೆ ಇದರಲ್ಲಿ ಮೋಸ ಮಾಡಲು ಹೇಗೆ ಸಾಧ್ಯ, ಹೊಟ್ಟೆ ಉರಿಯಿಂದ ಸುದೀಪ್​ ವಿರುದ್ಧ ಮಾತನಾಡುತ್ತಿದ್ದಾರೆ ಎನ್ನುವುದು ಸುದೀಪ್​ ಅಭಿಮಾನಿಗಳ ಮಾತು. ಅಷ್ಟಕ್ಕೂ ಟ್ರೈಲರ್​ ಬಿಡುಗಡೆಗೆ ಕಾಯುತ್ತಿರುವ ದೊಡ್ಡ ವರ್ಗವೇ ಇದೆ. ಆದ್ದರಿಂದ ಬಿಡುಗಡೆಯಾದ ತಕ್ಷಣ ವೀಕ್ಷಣೆ ಮಾಡುವವರ ಸಂಖ್ಯೆ ಸಹಜವಾಗಿ ಹೆಚ್ಚಾಗುತ್ತದೆ. ಬಳಿಕ ಉಳಿದವರು ನೋಡುತ್ತಾರೆ. 

68
ಕಾರಣ ಇದೇ...

ಅದಕ್ಕಾಗಿಯೇ ಮೊದಲ ಏಳು ಗಂಟೆ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಆಗಿದೆ ಎನ್ನುವ ಲೆಕ್ಕಾಚಾರವನ್ನು ಸುದೀಪ್​ ಅಭಿಮಾನಿಗಳು ನೀಡುತ್ತಿದ್ದಾರೆ. ಸುದೀಪ್ ಅಂಥವರಿಗೆ ದುಡ್ಡು ಕೊಟ್ಟು ವೀಕ್ಷಣೆ ಮಾಡಿಸಿಕೊಳ್ಳುವ ಗ್ರಹಚಾರ ಇನ್ನೂ ಬಂದಿಲ್ಲ ಎನ್ನುವುದು ಅವರ ಮಾತು.

78
ಮಾರ್ಕಂಡೆಯ ಅವತಾರದಲ್ಲಿ...

ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ 'ಮಾರ್ಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರ ವಿತರಣೆಗೆ ಮಾಡುತ್ತಿದೆ. ಖಡಕ್ ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೆಯ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.ಅಜನೀಶ್ ಲೋಕನಾಥ್ ಅವರು ‘ಮಾರ್ಕ್’ ಸಿನಿಮಾಗೆ ಸಂಗೀತ ನೀಡಿದ್ದಾರೆ.

88
ಸ್ಟೋರಿ ಏನು?

ಮಕ್ಕಳ ಅಪಹರಣದ ಕಹಾನಿಯನ್ನು ಈ ಸಿನಿಮಾ ಹೊಂದಿದೆ. ಮಕ್ಕಳನ್ನು ಕಿಡ್ನಾಪ್ ಮಾಡುವ ಖಳರಿಗೆ ಮಾರ್ಕ್ ತಕ್ಕ ಪಾಠ ಕಲಿಸುತ್ತಾನೆ. ಅದು ಹೇಗೆ ಎಂಬುದನ್ನು ಚಿತ್ರ ನೋಡಿ ತಿಳಿಯಬೇಕು.

Read more Photos on
click me!

Recommended Stories