ಸೈಡ್‌ ಎಫೆಕ್ಟ್ ಇಲ್ಲ, ಕಾಂತಿ ಹೆಚ್ಚುತ್ತೆ: ಪ್ಲಾಸ್ಮಾ ನೀಡೋದು ನನ್ನ ಜವಾಬ್ದಾರಿ ಎಂದ ನಟಿ

First Published May 5, 2021, 10:17 AM IST

ಪ್ಲಾಸ್ಮಾ ನೀಡೋದು ಸೇವೆಯೂ ಅಲ್ಲ ಸೋಷಿಯಲ್‌ ಸವೀರ್‍ಸೂ ಅಲ್ಲ, ಅದು ನನ್ನ ಜವಾಬ್ದಾರಿ ಎಂದು ಗಟ್ಟಿದನಿಯಲ್ಲಿ ಹೇಳುವ ಕಾವ್ಯಾ ಶಾಸ್ತ್ರೀ ತಾವು ಪ್ಲಾಸ್ಮಾ ನೀಡಿದ ವಿವರಗಳನ್ನಿಲ್ಲಿ ಹೇಳಿದ್ದಾರೆ.

ನನಗೆ ಕೊರೋನಾ ಬಂದಿದ್ದು 2020ರ ನವೆಂಬರ್‌ನಲ್ಲಿ. ಡಿಸೆಂಬರ್‌ನಲ್ಲಿ ತಂದೆಗೆ ಕೊರೋನಾ ಬಂದಿತ್ತು. ಆಗ ಯಾರೋ ಒಬ್ರು ಪ್ಲಾಸ್ಮಾ ನೀಡಿದರು ಎಂದಿದ್ದಾರೆ ನಟಿ ಕಾವ್ಯಾ ಶಾಸ್ತ್ರಿ.
undefined
ನಾನೂ ಪ್ಲಾಸ್ಮಾ ನೀಡಿ, ಕಷ್ಟದಲ್ಲಿರುವ ಕೊರೋನಾ ರೋಗಿಗಳಿಗೆ ಸಹಾಯ ಮಾಡಬೇಕು ಅಂದುಕೊಂಡೆ ಎಂದಿದ್ದಾರೆ.
undefined
ದುರಾದೃಷ್ಟವಶಾತ್‌ ನನ್ನ ರಕ್ತದಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆ ಇತ್ತು. ರಿಜೆಕ್ಟ್ ಆಯ್ತು. ಆ ಹೊತ್ತಿಗೆ ಕೊರೋನಾ ಇಳಿಮುಖವಾಗುತ್ತಿತ್ತು ಎಂದಿದ್ದಾರೆ.
undefined
ಆದರೂ ನನ್ನ ಡಯೆಟ್‌ ಬದಲಿಸಿಕೊಂಡೆ. ಹಿಮೋಗ್ಲೋಬಿನ್‌ ಹೆಚ್ಚಿಸುವ ಆಹಾರ, ಟಾನಿಕ್‌ ತೆಗೆದುಕೊಳ್ಳಲಾರಂಭಿಸಿದೆ. ಇತ್ತೀಚೆಗೆ ಕೊರೋನಾ ಕೇಸ್‌ಗಳು ವಿಪರೀತ ಏರುತ್ತಿರುವುದನ್ನು ಗಮನಿಸಿ ಮತ್ತೆ ಪ್ಮಾಸ್ಮಾ ನೀಡಲು ರಿಜಿಸ್ಟರ್‌ ಮಾಡಿಕೊಂಡೆ. ನನ್ನ ಶ್ರಮ ಫಲಿಸಿತ್ತು. 2 ಯುನಿಟ್‌ ಅಂದರೆ 500 ಎಂಎಲ್‌ ಪ್ಲಾಸ್ಮಾ ನೀಡಿ ಬಂದೆ ಎಂದು ಹೇಳಿದ್ದಾರೆ.
undefined
ಸೈಡ್‌ ಎಫೆಕ್ಟ್ ಏನಿಲ್ಲ, ಪ್ರಯೋಜನ ಹೆಚ್ಚು: ಪ್ಲಾಸ್ಮಾ ನೀಡುವುದರಿಂದ ಸೈಡ್‌ ಎಫೆಕ್ಟ್ ಆಗಲ್ಲ. ಸುಮಾರು 40 ನಿಮಿಷಗಳ ಪ್ರಕ್ರಿಯೆ. ನಮ್ಮ ರಕ್ತದಲ್ಲಿರುವ ಪ್ಲಾಸ್ಮಾವನ್ನು ತೆಗೆದು ವಾಪಾಸು ರಕ್ತವನ್ನು ದೇಹಕ್ಕೆ ನೀಡುತ್ತಾರೆ ಎಂದಿದ್ದಾರೆ.
undefined
ಒಂದು ವಾರದಲ್ಲಿ ರಕ್ತ ಹಾಗೂ ಪ್ಲಾಸ್ಮಾ ಪುನಃ ತುಂಬಿಕೊಳ್ಳುತ್ತೆ. ಪ್ರಯೋಜನಗಳೂ ಸಾಕಷ್ಟಿವೆ. ಮುಖದಲ್ಲಿ ಕಾಂತಿ ಮೂಡುತ್ತೆ. ರಕ್ತದಲ್ಲಿ ಪ್ರತಿರೋಧ ಶಕ್ತಿ ಹೆಚ್ಚಾಗುತ್ತೆ. ಆದರೆ ಕೊರೋನಾ ಬಂದ ಎಲ್ಲರೂ ಪ್ಲಾಸ್ಮಾ ನೀಡಲಾಗೋದಿಲ್ಲ ಎಂದಿದ್ದಾರೆ.
undefined
ರಕ್ತದಲ್ಲಿರುವ ಹಿಮೋಗ್ಲೋಬಿನ್‌ ಸೇರಿದಂತೆ ಹಲವು ಅಂಶಗಳು ನಿಗದಿಯಷ್ಟಿರಬೇಕು, ಸಣ್ಣ ಮಕ್ಕಳ ತಾಯಂದಿರುವ ರಕ್ತ ನೀಡುವಂತಿಲ್ಲ. ಕೊರೋನಾ ಬಂದು ಹೋದ 28ರಿಂದ 6 ತಿಂಗಳ ಒಳಗೆ ಪ್ಲಾಸ್ಮಾ ನೀಡಬೇಕು ಹೀಗೆ ಒಂದಿಷ್ಟುನಿಯಮಗಳಿವೆ. ಎಲ್ಲಾ ಚೆನ್ನಾಗಿದ್ದರೆ ಆರು ತಿಂಗಳೊಳಗೆ 2 ಬಾರಿ ಪ್ಲಾಸ್ಮಾ ನೀಡಬಹುದು ಎಂದಿದ್ದಾರೆ.
undefined
ಯೋಗ್ಯತೆ ಇರುವ ಇತರರು ಪ್ಲಾಸ್ಮಾ ನೀಡದ ಬಗ್ಗೆ ನಾನು ದೂರುವುದಿಲ್ಲ. ನಾನು ಹೀಗೆ ಪ್ಲಾಸ್ಮಾ ನೀಡಿದ್ದನ್ನು ಸೇವೆ ಅಂತಾಗಲೀ, ಸೋಷಿಯಲ್‌ ಸವೀರ್‍ಸ್‌ ಅಂತಾಗಲೀ ಭಾವಿಸಿಲ್ಲ. ಇದು ನನ್ನ ಜವಾಬ್ದಾರಿ ಅಂದುಕೊಂಡಿದ್ದೇನೆ ಎಂದಿದ್ದಾರೆ.
undefined
ನಾನು ಹಿಂದಿನಿಂದಲೂ ರಕ್ತದಾನ ಶಿಬಿರ ಆಯೋಜಿಸುತ್ತೇನೆ. ಸಾಕಷ್ಟುಸಲ ರಕ್ತದಾನ ಮಾಡಿದ್ದೇನೆ. ಕೋವಿಡ್‌ ರೋಗಿಗಳಿಗೆ ಕಳೆದ ಬಾರಿ ರೇಶನ್‌, ಕಾರ್ಮಿಕರನ್ನು ಊರಿಗೆ ತಲುಪಿಸೋದು, ರೈತರಿಂದ ತರಕಾರಿ ಖರೀದಿಸಿ ಅಸಹಾಯಕರಿಗೆ ನೀಡೋದು ಹೀಗೆಲ್ಲ ಕೆಲಸ ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
undefined
ಈ ಬಾರಿಯೂ ಗ್ರೂಪ್‌ಗಳ ಮೂಲಕ ಅಗತ್ಯ ಇರುವ ಕೋವಿಡ್‌ ರೋಗಿಗಳಿಗೆ ರೆಮ್‌ ಡಿಸಿವಿರ್‌, ಪ್ಲಾಸ್ಮಾ, ಬೆಡ್‌ ವ್ಯವಸ್ಥೆ ಮಾಡುತ್ತಿದ್ದೇವೆ. ಬಹಳ ಕಷ್ಟದಲ್ಲಿರುವ ಹೊಟೇಲ್‌ ಹುಡುಗರಿಗೆ ಆರ್ಥಿಕ ಸಹಾಯ, ಊರಿಗೆ ಹೋಗಲು ಸಹಾಯ ಇತ್ಯಾದಿ ಕೆಲಸ ಮಾಡಿದ್ದೇನೆ.
undefined
click me!