ಯಶ್‌ ಮುಂದಿನ ಚಿತ್ರಕ್ಕೆ ಝೀ ಸಿನಿಮಾಸ್‌ ನಿರ್ಮಾಣ ಸಾರಥ್ಯ

Published : May 05, 2021, 09:46 AM IST

ಯಶ್‌ ಅವರ ಅಭಿನಯದ ಮುಂದಿನ ಚಿತ್ರಕ್ಕೆ ಝೀ ಸಿನಿಮಾಸ್‌ ನಿರ್ಮಾಣ ಸಾರಥಿ | ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಮೊದಲ ಬಾರಿಗೆ ಹಣ ಹೂಡುತ್ತಿದೆ ಝೀ ಸಿನಿಮಾಸ್‌

PREV
16
ಯಶ್‌ ಮುಂದಿನ ಚಿತ್ರಕ್ಕೆ ಝೀ ಸಿನಿಮಾಸ್‌ ನಿರ್ಮಾಣ ಸಾರಥ್ಯ

ಯಶ್‌ ಅವರ ಅಭಿನಯದ ಮುಂದಿನ ಚಿತ್ರಕ್ಕೆ ಝೀ ಸಿನಿಮಾಸ್‌ ನಿರ್ಮಾಣ ಸಾರಥಿ ಆಗಲಿದೆ ಎನ್ನುವ ಸುದ್ದಿ ಜೋರಾಗಿಯೇ ಕೇಳಿ ಬರುತ್ತಿದೆ.

26

ಇದು ಮಫ್ತಿ ನರ್ತನ್‌ ನಿರ್ದೇಶನದ ಸಿನಿಮಾ. ಈಗಾಗಲೇ ನಿರ್ದೇಶಕ ನರ್ತನ್‌ ಯಶ್‌ ಅವರಿಗೆ ಒಂದು ಸಾಲಿನ ಕತೆ ಹೇಳಿದ್ದು, ಈ ಕತೆಯನ್ನು ಪೂರ್ತಿ ಮಾಡಿಕೊಂಡ ಬರಲು ಹೇಳಿದ್ದಾರೆ.

36

ಹೀಗಾಗಿ ‘ಕೆಜಿಎಫ್‌ 2’ ನಂತರ ಬಹುತೇಕ ನರ್ತನ್‌ ನಿರ್ದೇಶನದಲ್ಲೇ ಯಶ್‌ ನಟಿಸಲಿದ್ದು, ಈ ಚಿತ್ರವನ್ನು ಯಾರು ನಿರ್ಮಿಸಲಿದ್ದಾರೆ ಎಂಬುದು ಇಲ್ಲಿವರೆಗೂ ಗುಟ್ಟಾಗಿಯೇ ಇತ್ತು.

46

ಇದೀಗ ಕನ್ನಡದಲ್ಲಿ ಸೆಟ್ಟೇರಲಿರುವ ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಮೊದಲ ಬಾರಿಗೆ ಝೀ ಸಿನಿಮಾಸ್‌ ಹಣ ಹೂಡುತ್ತಿದೆ.

56

ಇದೆಲ್ಲದಕ್ಕೂ ಕಾರಣ ‘ಕೆಜಿಎಫ್‌’ ಚಿತ್ರದ ಯಶಸ್ಸು ಹಾಗೂ ಈ ಚಿತ್ರದಿಂದ ನ್ಯಾಶನಲ್‌ ಸ್ಟಾರ್‌ ಆಗಿರುವ ಯಶ್‌. ‘ಮಫ್ತಿ’ ಮೂಲಕ ನರ್ತನ್‌ ಕೂಡ ಗೆಲುವು ಕಂಡ ನಿರ್ದೇಶಕ.

66

ಹೀಗೆ ಗೆದ್ದ ಇಬ್ಬರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಚಿತ್ರಕ್ಕೆ ಝೀ ಸಿನಿಮಾಸ್‌ ಹಣ ಹೂಡುವ ವಿಷಯ ಗುಟ್ಟಾಗಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ನರ್ತನ್‌ ಅಥವಾ ಯಶ್‌ ಅಧಿಕೃತ ಹೇಳಿಕೆ ನೀಡಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories