ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವ್ರ ಪುತ್ರ ನಿಧನರಾಗಿದ್ದಾರೆ.
ರಾಮು ಕಣಗಾಲ್ ಕೋರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇವರು ವೃತ್ತಿಯಲ್ಲಿ ನೃತ್ಯ ನಿರ್ದೇಶಕರಾಗಿದ್ದರು.
ಎಸ್. ಆರ್. ಪುಟ್ಟಣ್ಣ ಕಣಗಾಲ್ ಅವರನ್ನು ಚಿತ್ರ ಬ್ರಹ್ಮ ಎಂದೇ ಕರೆಯಲಾಗುತ್ತದೆ.
ಇವರು ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆ ಬರೆದು ಸಿನಿಮಾ ಕ್ಷೇತ್ರದಲ್ಲಿ ಖ್ಯಾತಿಗಳಿಸಿದ್ದರು.
ರಾಮು ಅವರು ಕಣಗಾಲ್ ನೃತ್ಯಾಲಯ ಎಂಬ ಹೆಸರಿನಲ್ಲಿ ನೃತ್ಯ ಶಾಲೆ ಕಟ್ಟಿ ದೊಡ್ಡ ಶಿಷ್ಯವೃಂದವನ್ನೂ ಹೊಂದಿದ್ದರು.
ತಂದೆ ಪುಟ್ಟಣ್ಣ ಅವರ ಶಿಸ್ತು ರಾಮು ಅವರಲ್ಲೂ ಇತ್ತು. ನೃತ್ಯ ಶಾಲೆ ನಡೆಸುತ್ತಾ ಗೌರವಯುತವಾಗಿ ಬದುಕುತ್ತಿದ್ದವರು ಇವರು.
ತಂದೆಗೆ ಅಭಿಮಾನಿಗಳಿದ್ದಾರೆ. ಈಗಲೂ ಅಭಿಮಾನಿಗಳು ನನ್ನಲ್ಲಿ ನನ್ನ ತಂದೆಯನ್ನು ಕಾಣುತ್ತಾರೆ. ಆದರೆ ಚಿತ್ರೋದ್ಯಮದವರಲ್ಲ ಎಂದು ಹಿಂದೊಮ್ಮೆ ರಾಮು ಬೇಸರ ವ್ಯಕ್ತಪಡಿಸಿದ್ದರು
ಕೆಲವು ದಿನಗಳ ಹಿಂದೆ ಕೊರೋನಾ ದೃಢಪಟ್ಟ ಹಿನ್ನೆಲೆ ಇವರು ಚಿಕಿತ್ಸೆ ಪಡೆಯುತ್ತಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ರಾಮು ಕಣಗಲ್ ಅವರ ನೃತ್ಯದ ಭಂಗಿಗಳು