ಡಿಂಪಲ್ ಕ್ವೀನ್ ರಚಿತಾ ರಾಮ್ ಇಷ್ಟೊಂದು ಫೇಮಸ್ ಆಗಿರೋದು ಹೇಗೆ? ಕೊನೆಗೂ ಆ ಗುಟ್ಟು ಬಹಿರಂಗ ಆಯ್ತು!

Published : Jul 26, 2026, 07:34 PM IST

ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಆಗಿರುವ ರಚಿತಾ ರಾಮ್, ಸತೀಶ್ ನೀನಾಸಂ ಜೋಡಿಯಾಗಿ ನಟಿಸಿರುವ 'ಅಯೋಗ್ಯ 2' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇದ್ದಾರೆ. 7 ಆಗಸ್ಟ್ 2026ರಂದು ಅಯೋಗ್ಯ 2 ಸಿನಿಮಾ ಬಿಡುಗಡೆ ಆಗಲಿದೆ. ರಚಿತಾ ಸ್ಟಾರ್ ನಟಿ ಆಗಿರುವ ಹಿಂದಿನ ರಹಸ್ಯ ಇಲ್ಲಿದೆ ನೋಡಿ..

PREV
18

ಕನ್ನಡದ ಡಿಂಪಲ್ ಕ್ವೀನ್ ಅಂದ್ರೆ ಅದು ನಟಿ ರಚಿತಾ ರಾಮ್ (Rachita Ram) ಅನ್ನೋದು ಬಹುತೇಕರಿಗೆ ಗೊತ್ತು. ಕನ್ನಡ ಅಲ್ಲದೇ ತಮಿಳಿನಲ್ಲೂ ನಟಿಸಿರುವ, ಅದರಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸಿದ ಹೆಗ್ಗಳಿಕೆ ಹೊತ್ತಿರುವ ರಚಿತಾ ರಾಮ್ ಅವರು, ದರ್ಶನ್ ನಟನೆಯ 'ಬುಲ್ ಬುಲ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಅದಕ್ಕೂ ಮೊದಲು ಅವರು ಸೀರಿಯಲ್‌ಗಳಲ್ಲಿ ಕೂಡ ನಟಿಸಿದ್ದಾರೆ.

28

ರಚಿತಾ ರಾಮ್ ಇಂದು ಕನ್ನಡ ಚಿತ್ರರಂಗದ ಫೇಮಸ್ ಸ್ಟಾರ್ ನಟಿ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಿನಿಮಾರಂಗದಲ್ಲಿ ಸೂಪರ್ ಸ್ಟಾರ್ ಅಗಿ ನಿಂತಿರುವ ರಚಿತಾ ರಾಮ್ ಹಿಂದೆ ಸಾಕಷ್ಟು ಸಿನಿಮಾ ಗೆಲುವು ನಿಂತಿದೆ. ನಟಿ ರಚಿತಾ ರಾಮ್ ಅವರು ಹೆಚ್ಚುಕಡಿಮೆ ಕನ್ನಡದ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಸ್ಟಾರ್ ನಟರೂ ಸೇರಿದಂತೆ, ರಚಿತಾ ರಾಮ್ ಅವರು ಸಾಕಷ್ಟು ಹೊಸಬರೊಂದಿಗೆ ಕೂಡ ನಟಿಸಿದ್ದಾರೆ. ಕಳೆದ ವರ್ಷ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಕೂಲಿ' ಸಿನಿಮಾದಲ್ಲಿ ಕೂಡ ನಟಿಸಿ, ಕನ್ನಡವನ್ನು ಹೊರತಪಡಿಸಿ ಪರಭಾಷೆಯಲ್ಲಿ ಅಂದರೆ ತಮಿಳಿನಲ್ಲಿ ಕೂಡ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

38

ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಆಗಿರುವ ರಚಿತಾ ರಾಮ್ ಅವರು ಸದ್ಯ ಸತೀಶ್ ನೀನಾಸಂ ಜೋಡಿಯಾಗಿ ನಟಿಸಿರುವ 'ಅಯೋಗ್ಯ 2' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇದ್ದಾರೆ. 7 ಆಗಸ್ಟ್ 2026ರಂದು ಅಯೋಗ್ಯ 2 ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಶೂಟಿಂಗ್‌ ಸಲುವಾಗಿ ಮಂಡ್ಯಕ್ಕೆ ಹೋಗಿದ್ದ ರಚಿತಾ ರಾಮ್ ಅವರು ಅಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದ್ದಾರೆ.

48

ರಚಿತಾ ರಾಮ್‌ ಸಿಂಪ್ಲಿಸಿಟಿಗೆ ಲೇಡಿ ಫ್ಯಾನ್ಸ್ ಫಿದಾ!

ಕನ್ನಡದ 'ಡಿಂಪಲ್ ಕ್ವೀನ್' ನಟಿ ರಚಿತಾ ರಾಮ್ ಯಾವತ್ತೋ ಮಂಡ್ಯ ಹೈದರ ಮನಗೆದ್ದಿದ್ದಾಗಿದೆ. ಈಗ ಮಂಡ್ಯದ ಹಳ್ಳಿ ಹೆಣ್ಣುಮಕ್ಕಳ ಸರದಿ! ಬೆಳ್ಳಿತೆರೆಯ ಮೇಲೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಈ ನಟಿ, ನಿಜ ಜೀವನದಲ್ಲಿ ಎಷ್ಟು ಸರಳ ಅನ್ನೋದಕ್ಕೆ ಈಗ 'ಅಯೋಗ್ಯ-2' ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಮಂಡ್ಯದ ಮಣ್ಣಿನ ಸೊಗಡಿನ ಈ ಚಿತ್ರದ 'ಹುಡುಗೀರ್ ಡೇಂಜರಸ್' ಹಾಡಿನ ಮೇಕಿಂಗ್ ಹೊತ್ತಿನಲ್ಲಿ ನಡೆದ ಆ ಒಂದು ಸಂಗತಿ ಇದೀಗ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅದರಲ್ಲಿ ಮಂಡ್ಯದ ಹಳ್ಳಿಯೊಂದರ ಹೆಣ್ಣುಮಕ್ಕಳು ಮತ್ತು ರಚಿತಾ ರಾಮ್ ನಡುವಿನ ಆ ಸುಂದರ ಕ್ಷಣಗಳು ಅಭಿಮಾನಿಗಳ ಮನ ಗೆದ್ದಿವೆ.

58

ಮಂಡ್ಯದ ಹಳ್ಳಿಯಲ್ಲಿ 'ಅಯೋಗ್ಯ 2' ಹವಾ!

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯ 'ಅಯೋಗ್ಯ' ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಈಗ ಅದರ ಮುಂದುವರಿದ ಭಾಗ 'ಅಯೋಗ್ಯ-2' ಸಿದ್ಧವಾಗಿದೆ. ಇತ್ತೀಚೆಗೆ ಮಂಡ್ಯದ ಸುತ್ತಮುತ್ತ ಈ ಚಿತ್ರದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಹಳ್ಳಿಯ ಹಸಿರು, ಮಣ್ಣಿನ ವಾಸನೆಯ ನಡುವೆ ಶೂಟಿಂಗ್ ನಡೆಯುತ್ತಿದ್ದಾಗ ಅಲ್ಲಿಗೆ ಬಂದಿದ್ದು ಆ ಭಾಗದ ಮುಗ್ಧ ಹಳ್ಳಿ ಹೆಣ್ಣುಮಕ್ಕಳು.

68

ಟಿವಿಯಲ್ಲಿ ನೋಡಿದ್ದೀವಿ, ಇವತ್ತು ನೇರವಾಗಿ ನೋಡಿದ್ವಿ!

ತಮ್ಮ ನೆಚ್ಚಿನ ನಟಿಯನ್ನು ಹತ್ತಿರದಿಂದ ನೋಡಿದ ಹಳ್ಳಿ ಮಹಿಳೆಯರ ಖುಷಿಗೆ ಪಾರವೇ ಇರಲಿಲ್ಲ. ಆಗ ರಚಿತಾ ಅವರು ತುಂಬಾನೇ ಪ್ರೀತಿಯಿಂದ ಅವರ ಹತ್ತಿರ ಹೋಗಿ ಮಾತನಾಡಿಸಿದ್ದಾರೆ. "ನೀವು ನನ್ನ ಸಿನಿಮಾಗಳನ್ನೆಲ್ಲಾ ನೋಡ್ತೀರಾ?" ಅಂತ ರಚಿತಾ ಕೇಳಿದಾಗ, ಆ ಹೆಣ್ಣುಮಕ್ಕಳು ಪ್ರಾಮಾಣಿಕವಾಗಿ ಇಲ್ಲ "ನಮಗೆ ಕೆಲಸ ಮಾಡೋದ್ರಲ್ಲೇ ಹೊತ್ತು ಹೋಗಿರುತ್ತೆ.. ಸಿನಿಮಾ ನೋಡೋಕೆ ಟೈಮ್ ಸಿಗಲ್ಲ. ಆದ್ರೆ ಟಿವಿಯಲ್ಲಿ, ಜೀ ಕನ್ನಡದ ಕಾರ್ಯಕ್ರಮಗಳಲ್ಲಿ ನಿಮ್ಮನ್ನ

78

ಫೋಟೋ ತೆಗೆಸಿಕೊಂಡ ರಚಿತಾ!

ಕೇವಲ ಮಾತುಕತೆಗೆ ಸೀಮಿತವಾಗದ ರಚಿತಾ ರಾಮ್, ಅಲ್ಲಿ ಒಂದು ಅಪರೂಪದ ಕೆಲಸ ಮಾಡಿದರು. ತಾವೇ ಮುಂದೆ ನಿಂತು ಆ ಮಹಿಳೆಯರ ಮೊಬೈಲ್ ಫೋನ್ ಪಡೆದು, ಅಲ್ಲಿದ್ದ ಲೈಟ್ ಬಾಯ್ಸ್ ಅಥವಾ ಸೆಟ್ ಹುಡುಗರ ಕೈಗೆ ಕೊಟ್ಟು, "ನಮ್ಮೆಲ್ಲರ ಫೋಟೋ ಚೆನ್ನಾಗಿ ತೆಗೆಯಿರಿ" ಅಂತ ಹೇಳಿ ಎಲ್ಲರ ಜೊತೆ ನಗುನಗುತ್ತಾ ಪೋಸ್ ಕೊಟ್ಟಿದ್ದಾರೆ. ಒಬ್ಬ ಸ್ಟಾರ್ ನಟಿಯಾಗಿ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಅವರು ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚುವಂತದ್ದು. ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿದೆ. ಜೊತೆಗೆ, ಮಂಡ್ಯದ ಆ ಹಳ್ಳಿಯ ಹುಡಗಿಯರು-ಹುಡಗರ ಮೊಬೈಲ್‌ಗಳಲ್ಲಿ ಈ ವಿಡಿಯೋ ಓಡಾಡುತ್ತಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಜೊತೆಗೆ, 'ಸುದ್ದಿ ಮನೆ' ನ್ಯೂಸ್ ಇನ್‌ಸ್ಟಾಗ್ರಾಂ' ಪೇಜ್‌ನಲ್ಲಿ ಈ ವಿಡಿಯೋ ಸಖತ್ ಸುದ್ದಿ ಮಾಡುತ್ತಿದೆ.

88

ಆಗಸ್ಟ್ 7ಕ್ಕೆ 'ಅಯೋಗ್ಯ-2' ದರ್ಬಾರ್ ಶುರು!

ಇನ್ನು ಸಿನಿಮಾದ ವಿಷಯಕ್ಕೆ ಬಂದರೆ, 'ಅಯೋಗ್ಯ-2' ಇದೇ ಆಗಸ್ಟ್ 7 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸತೀಶ್ ನೀನಾಸಂ, ರಚಿತಾ ರಾಮ್ ಜೊತೆಗೆ ದಡಿಯಾ ಗಿರಿ, ಶಿವರಾಜ್ ಕೆ.ಆರ್. ಪೇಟೆ ತಾರಾಗಣದಲ್ಲಿದ್ದಾರೆ. ಚಿತ್ರತಂಡ ಈಗಾಗಲೇ ಹುಬ್ಬಳ್ಳಿಯ ಸಿದ್ಧರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದೆ. ಹಳ್ಳಿಯ ಸೊಗಡು, ಹಾಸ್ಯ ಮತ್ತು ಎಮೋಷನ್ ಒಳಗೊಂಡ ಈ ಚಿತ್ರವು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.

ಅಂದಹಾಗೆ, ನಟಿ ರಚಿತಾ ರಾಮ್ ಅವರು ಇಷ್ಟೊಂದು ಫೇಮಸ್ ಆಗಲು ಕಾರಣ ಅವರ ಸಿಂಪ್ಲಿಸಿಟಿ. ಯಾವುದೇ ಚಿತ್ರತಂಡ, ಸಿನಿಪ್ರೇಕ್ಷಕರು ಹಾಗೂ ಜನರೊಟ್ಟಿಗೆ ನಟಿ ರಚಿತಾ ರಾಮ್ ಅವರು ಲೀಲಾಜಾಲವಾಗಿ ಬೆರೆಯುತ್ತಾರೆ. ಅವರು ಯಾವುದೇ ಸ್ಟಾರ್ ನಟಿ ಎಂಬ ಅಹಂಕಾರ ತೋರಿಸದೇ, ಕೆಲಸದಲ್ಲಿ ಶ್ರದ್ಧೆ ಹಾಗೂ ಜನರಿಗೆ ಪ್ರೀತಿ ತೋರಿಸುತ್ತಾರೆ. ಜೊತೆಗೆ, ಸಹಕಲಾವಿರನ್ನೂ ಗೌರವಿಸುತ್ತಾರೆ. ಅದಕ್ಕಾಗಿಯೇ ರಚಿತಾ ರಾಮ್ ಇಷ್ಟು ಫೇಮಸ್ ಎಂಬುದು ಅವರನ್ನು ಒಮ್ಮೆ ಭೇಟಿ ಆದವರಿಗೆ ಅರ್ಥವಾಗುತ್ತೆ. ಒಟ್ಟಿನಲ್ಲಿ, ರಚಿತಾ ರಾಮ್ ಈ ಸರಳತೆ ಸಿನಿಮಾದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನಬಹುದು. ಇನ್ನೇನು ಸ್ವಲ್ಪ ದಿನಗಳು, ಅಯೋಗ್ಯ -2 ಚಿತ್ರವನ್ನು ತೆರೆಯ ಮೇಲೆ ನೋಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories