ಶಿವರಾಜ್ ಕುಮಾರ್ ಸರಳತೆಗೆ ಮತ್ತೊಮ್ಮೆ ಅಭಿನಂದನೆ ತಿಳಿಸಿರುವ ಅಭಿಮಾನಿಗಳು ಮಗುವಿನೊಂದಿಗೆ ಮಗುವಿನ ಮನಸ್ಸಿನ ಶಿವಣ್ಣ ಎಂದು ಕೊಂಡಾಡಿದ್ದಾರೆ.
ಶಿವಣ್ಣ ಕೈಯಲ್ಲಿ ಪ್ರೀತಿ ಪಡೆದುಕೊಳ್ಳಲು ಆ ಮಗು ನಿಜವಾಗಿಯೂ ಅದೃಷ್ಟ ಮಾಡಿತ್ತು ಎಂದವರು ಇದ್ದಾರೆ. ಯಾರ ಮಗು ಇದು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಶಿವರಾಜ್ ಕುಮಾರ್ ಅಭಿನಮಯದ ಭಜರಂಗಿ-2 ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದು ಅಕ್ಟೋಬರ್ 29 ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.
ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಎಂದು ಕನ್ನಡಿಗರ ಪ್ರೀತಿ ಗಳಿಸಿಕೊಂಡಿರುವ ಶಿವರಾಜ್ ಕುಮಾರ್ ವಿಭಿನ್ನ ಚಿತ್ರಗಳ ಮೂಲಕ ಅಭಿಮಾನಿಗಳ ಸಂಪಾದನೆ ಮಾಡಿಕೊಂಡವರು.
ಕನ್ನಡ ಚಿತ್ರರಂಗದ ಅತ್ಯಂತ ಸರಳತೆಯ ಪ್ರತೀಕ ಎಂಬಂತಿರುವ ಡಾ. ಶಿವರಾಜ್ ಕುಮಾರ್ ಬಗ್ಗೆ ಹೊಸದಾಗಿ ಹೇಳುವುದು ಏನು ಇಲ್ಲ. ಶಿವರಾಜ್ ಕುಮಾರ್ ಮಗುವನ್ನು ಮುದ್ದಾಡುತ್ತಿರುವ ದೃಶ್ಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ...
ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಮಗುವಿನ ಜತೆ ಮಗುವಾದ ಪೋಟೋಗಳು ಹೃದಯಕ್ಕೆ ಹತ್ತಿರವಾಗಿದ್ದು ಅಪರಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ತಮ್ಮ ಸಂಬಂಧಿಕರ ಮಗುವನ್ನು ಶಿವಣ್ಣ ಎತ್ತಿ ಮುದ್ದಾಡಿದ್ದಾರೆ.