ರಚಿತಾ ರಾಮ್‌ಗೆ ಸಖತ್ ಸೆಲ್ಫೀ ಕ್ರೇಜ್‌ ಇದೆ ಇಲ್ನೋಡಿ....ನೀವು ಏನಂತೀರಾ?

First Published | Sep 27, 2021, 12:41 PM IST

ಗುಳಿಕೆನ್ನೆ ಚೆಲುವೆ ಎಲ್ಲೇ ಹೋದ್ರೂ ಒಂದು ಸೆಲ್ಳೀ (Selfie) ಫೋಟೋ ತೆಗೆದುಕೊಳ್ಳುವುದನ್ನು ಮಾತ್ರ ಮಿಸ್ ಮಾಡುವುದಿಲ್ಲ. ಹೀಗಂತ ನಾವ್ ಹೇಳ್ತಿಲ್ಲ ಅವರ ಫ್ಯಾನ್ಸ್‌ ಹೇಳಿದ್ದಾರೆ ನೋಡಿ....

ಸ್ಯಾಂಡಲ್‌ವುಡ್‌ (Sandalwood) ಡಿಂಪಲ್ ಕ್ವೀನ್ (Dimple Queen) ರಚಿತಾ ರಾಮ್ (Rachita Ram) ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ. 

 ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಂತೆ, ಬ್ಯಾಕ್ ಟು ಬ್ಯಾಕ್ ಸೆಲ್ಫೀ ಶೇರ್ ಮಾಡಿಕೊಳ್ಳುತ್ತಾರೆ. 

Tap to resize

ರಚ್ಚು ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ನೀವು ಗಮನಿಸಿದರೆ ಸೆಲ್ಫಿ ಫೋಟೋ ಹೆಚ್ಚಿರುತ್ತದೆ ಇಲ್ಲವಾದರೆ ಸಾಯಿ ಬಾಬ (Sai Baba) ಫೋಟೋಗಳು ಇರುತ್ತವೆ. 

ಸೆಲ್ಫೀ (Selfie) ಮಾತ್ರವಲ್ಲ, ಅದೆಷ್ಟೋ ಮಿರರ್ ಫೋಟೋ ಹಾಗೂ ಹಾಡುಗಳಿಗೆ ರಚ್ಚು ಹೆಜ್ಜೆ ಹಾಕಿದ್ದಾರೆ. ಪ್ರತಿಯೊಂದು ಫೋಟೋದಲ್ಲೂ ಡಿಫರೆಂಟ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಕೆಲವು ದಿನಗಳ ಹಿಂದೆ ನಡೆದ ಸೈಮಾ ಪ್ರಶಸ್ತಿ (SIIMA Awards) ಕಾರ್ಯಕ್ರಮದಲ್ಲಿ ರಚಿತಾ ರಾಮ್ (Rachita Ram) ಆಯುಷ್ಮಾನ್ ಭವ ಚಿತ್ರಕ್ಕೆ ಬೆಸ್ಟ್‌ ನಟಿ (Best Actress)  2019 ಪ್ರಶಸ್ತಿ ಗೆದ್ದಿದ್ದಾರೆ. 

ಮಾನ್ಸೂನ್ ರಾಗ, ವೀರಂ, ಲವ್‌ ಯು ರಚ್ಚು, ಏಪ್ರಿಲ್, ಲಿಲ್ಲಿ, ಬ್ಯಾಡ್‌ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್‌ ಮಿ, ಪಂಕಜ ಕಸ್ತೂರಿ, 100 ಸೇರಿದಂತೆ ಇನ್ನೂ ಹೆಸರಿಡದ ಸಿನಿಮಾಗಳ ಚಿತ್ರೀಕರಣ ಮಾಡುತ್ತಿದ್ದಾರೆ.

Latest Videos

click me!