ಚಂದನವನದ ಸ್ಟಾರ್ ಗಳು ಕಾಮಾಕ್ಯ ಮಂದಿರತ್ತ (Kamakhya Temple) ಮುಖ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ತಾರೆಯರು ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯುತ್ತಿದ್ದಾರೆ.
26
ಕೆಲವು ದಿನಗಳ ಹಿಂದೆ ದೀಪಿಕಾ ದಾಸ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಭೂಮಿ ಶೆಟ್ಟಿ ಸೇರಿ ಹಲವು ನಟಿಯರು ಸಾಲು ಸಾಲಾಗಿ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದು ಬಂದಿದ್ದರು. ಇದೀಗ ಮತ್ತೊಂದಿಷ್ಟು ಸೆಲೆಬ್ರಿಟಿಗಳು ಭೇಟಿ ನೀಡಿದ್ದಾರೆ.
36
ಹೌದು ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಕುಟುಂಬದ ಜೊತೆಗೆ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಪ್ರೇಮ್ ಪುತ್ರಿ ಅಮೃತಾ ಸೋಶಿಯಲ್ ಮೀಡೀಯಾದಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇವರಿಗೆ ನಟಿ ಕಾರುಣ್ಯ ರಾಮ್ (Karunya Ram) ಸಾತ್ ಕೊಟ್ಟಿದ್ದಾರೆ.
ನಟೀ ಕಾರುಣ್ಯ ರಾಮ್ ಹಾಗೂ ಕುಟುಂಬ ಅದೇ ರೀತಿ, ಪ್ರೇಮ್, ಅಮೃತಾ (Amrutha Prem), ಜ್ಯೋತಿ ಹೀಗೆ ಹಲವು ಜನರು ಜೊತೆಯಾಗಿ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ, ಅಲ್ಲಿ ದೇವಿ ದರ್ಶನ ಪಡೆದು, ಪೂಜೆ ಮಾಡಿ ಬಂದಿದ್ದಾರೆ.
56
ಕಾಮಾಕ್ಯ ಮಂದಿರವು ಶಕ್ತಿ ಪೀಠವಾಗಿದ್ದು, ಇಲ್ಲಿ ಪೂಜೆ ಮಾಡಿದರೆ, ಎಂತಹುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಸಿಗುತ್ತದೆ. ಎಲ್ಲಾ ತೊಂದರೆಯಿಂದ ಹೊರ ಬರಬಹುದು ಎನ್ನಲಾಗುತ್ತದೆ. ನಟ ದರ್ಶನ್ ಜೈಲಿನಲ್ಲಿದ್ದಾಗ ಅವರ ಪತ್ನಿ ವಿಜಯಲಕ್ಷ್ಮೀ ಕೂಡ ಈ ದೇಗುಲಕ್ಕೆ ಬಂದು ಬೇಡಿಕೊಂಡಿದ್ದರು, ದರ್ಶನ್ ಬಿಡುಗಡೆಯಾದ ಬಳಿಕ ಮತ್ತೆ ಬಂದು ಪೂಜೆ ಸಲ್ಲಿಸಿದ್ದರು.
66
ಕಾಮಾಕ್ಯ ಮಂದಿರವು ಮಾಟ ಮಂತ್ರಗಳಿಗೂ ಸಹ ತುಂಬಾನೆ ಜನಪ್ರಿಯತೆ ಪಡೆದಿದೆ. ಇಲ್ಲಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಅಂಬುವಾಚಿ ಮೇಳೆ ನಡೆಯುತ್ತಿದ್ದು, ಈ ಸಮಯದಲ್ಲಿ ದೇವಿಯ ಋತುಸ್ರಾವವನ್ನು ಸಂಭ್ರಮಿಸಲಾಗುತ್ತದೆ. ಆವಾಗ ದೇಗುಲದ ಹಿಂದೆ ಹರಿಯುವ ಬ್ರಹ್ಮಪುತ್ರ ನದಿ ಸಹ ಕೆಂಪು ಬಣ್ಣದಲ್ಲಿ ಹರಿಯುತ್ತದೆ.