ನವರಸ ನಾಯಕ ನಟ ಜಗ್ಗೇಶ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರಂತೆ. ಸ್ವತಃ ಜಗ್ಗೇಶ್ ಅವರು ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬೆನ್ನು ನೋವಿಗೆ ಪಡೆಯುತ್ತಿರುವ ಚಿಕಿತ್ಸೆಯ ಬಗ್ಗೆಗ್ಗೂ ಹೇಳಿಕೊಂಡಿದ್ದಾರೆ.
ನಟ ಜಗ್ಗೇಶ್ ಅವರು ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದು ಅದರ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
27
Jaggesh
ಜಗ್ಗೇಶ್ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ಅವರು ಒಬ್ಬರ ಸಹಾಯದಿಂದ ಯೋಗದ ಆಸನಗಳನ್ನು ಮಾಡುತ್ತಿರುವುದು ಕಾಣಬಹುದು.
37
Jaggesh
ತಮ್ಮ ಪೋಸ್ಟ್‌ನಲ್ಲಿ ಜಗ್ಗೇಶ್ ಅವರು ಜೊತೆಯಲ್ಲಿರುವುದು ತಮ್ಮ ಯೋಗ ಗುರುಗಳು ಎಂದು ಹೇಳಿಕೊಂಡಿದ್ದು ಅವರ ಬಗ್ಗೆ ವಿವರವನ್ನು ನೀಡಿದ್ದಾರೆ. ಫೋಟೋಗಳನ್ನು ನೋಡಿ ಫ್ಯಾನ್ಸ್ ತಮ್ಮ ನೋವು ತೋಡಿಕೊಂಡಿದ್ದಾರೆ.
47
Jaggesh
'ನನ್ನ ಮೇಲಿನ ಪ್ರೀತಿಗೆ ಮನೆಗೆ ಬಂದು ನನ್ನ ಬೆನ್ನು ಸಮಸ್ಯೆಯ ನಿವಾರಣೆ ಮಾಡುತ್ತಿರುವ ನನ್ನ ಆತ್ಮೀಯ ಯೋಗ ಗುರುಗಳು ಶ್ರೀಯುತ ಓಂಕಾರರವರು ಇವರು ಟಾಟಾ ಇಸ್ಟಿಟೂಟ್ ನ ಏರೋನಾಟಿಕಲ್ ವಿಭಾಗದ ಮುಖ್ಯಸ್ಥರು' ಎಂದು ನಟ ಬರೆದಿದ್ದಾರೆ
57
Jaggesh
'ವಿಶೇಷ ಎಂದರೆ ಇವರು ವಿಶ್ವಯೋಗ ಗುರುಗಳು ಶ್ರೀ ಬಿಕೆಎಸ್ ಐಯಂಗಾರ್ ರವರ ಶಿಷ್ಯರು..ನನಗೆ ಇವರ ಪರಿಚಯ ಮಾಡಿಸಿದ್ದು ನಮ್ಮ ಸಾಹಸಸಿಂಹ ವಿಷ್ಣುವರ್ಧನ ರವರು. ಯಾವುದೆ ದೇಹಭಾಗದ ಭಾಹ್ಯ ಸಮಸ್ಯೆ ಇದ್ದರೆ ಯೋಗದ ಕೆಲ ಪ್ರಯೋಗದಿಂದ ಗುಣಪಡಿಸುತ್ತಾರೆ' ಎಂದು ಜಗ್ಗೇಶ್ ಅವರು ಇನ್ನಷ್ಟು ಹೇಳಿದ್ದಾರೆ.
67
Jaggesh
'ಯಾರಿಗಾದರು ಅಡ್ವಾನ್ಸ್ ಯೋಗ ತರಬೇತಿ ಇಚ್ಚೆ ಇದ್ದರೆ ಅಥವ ಬೆನ್ನು ಸೊಂಟ ಕೀಲು ನೋವಿದ್ದರೆ ಇವರ ಬಳಿಹೋಗಿ ಇವರ ವಾಸ ದೇವೇಗೌಡ ಪೆಟ್ರೋಲ್ ಬಳಿ..ಇವರ ದೂರವಾಣಿ 9341028478' ಎಂದು ಯೋಗ ಗುರುಗಳನ್ನು ಜಗ್ಗೇಶ್ ಪರಿಚಯಿಸಿದ್ದಾರೆ.
77
Jaggesh
ಈ ದಿನಗಳಲ್ಲಿ ಜಗ್ಗೇಶ್ ಅವರು ರಂಗನಾಯಕ ಸಿನಿಮಾದ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಗುರುಪ್ರಸಾದ್ ಡೈರೆಕ್ಟ್ ಮಾಡಿರುವ ಈ ಸಿನಿಮಾದಲ್ಲಿ ಜಗ್ಗೇಶ್ ಅವರಿಗೆ ರಚಿತಾ ಮಹಾಲಕ್ಷ್ಮಿ ನಾಯಕಿಯಾಗಿದ್ದು ಚಿತ್ರ ಮಾರ್ಚ್ ರಂದು ಬಿಡುಗಡೆಯಾಗಲಿದೆ.