ಮಿಥುನ ರಾಶಿಯ ವಿಲನ್ ಆಗಿದ್ದ ನಟಿ, ಈಗ ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ನಾಯಕಿ!

Published : Feb 16, 2024, 05:17 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಸೀರಿಯಲ್ ನಲ್ಲಿ ನೆಗೆಟೀವ್ ಶೇಡ್ ಪಾತ್ರದಲ್ಲಿ ನಟಿಸಿದ್ದ ನಟಿ ಸಂಪದಾ ಇದೀಗ ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ. 

PREV
110
ಮಿಥುನ ರಾಶಿಯ ವಿಲನ್ ಆಗಿದ್ದ ನಟಿ, ಈಗ ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ನಾಯಕಿ!

ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ಸೀರಿಯಲ್ ಗಳಲ್ಲಿ ಒಂದು ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಸೀರಿಯಲ್. ಈ ಸೀರಿಯಲ್ ನಲ್ಲಿ ಮನೆಯನ್ನು ನಡೆಸಿಕೊಂಡು ಹೋಗಲು ವಿದ್ಯಾಭ್ಯಾಸದ ಜೊತೆ ಆಟೋ ಡ್ರೈವರ್ ಆಗಿ ಕೆಲಸ ಮಾಡುವ ರಾಶಿ ಮತ್ತು ಬ್ಯುಸಿನೆಸ್ ಮೆನ್ ಮಿಥುನ್ ಕಥೆಯಾಗಿದೆ. 

210

ಮಿಥುನ ರಾಶಿ ಸೀರಿಯಲ್ ನಲ್ಲಿ ಯಾವಾಗಲೂ ಹಣ, ಆಸ್ತಿ, ಶಾಪಿಂಗ್ ಎಂದು ದುಡ್ಡಿಗಾಗಿ ಏನೂ ಮಾಡಲು ತಯಾರಿರುವ ರಾಶಿಯ ಅಕ್ಕ ಸುರಕ್ಷ ಪಾತ್ರ ಕೂಡ ನೆನಪಿರಬಹುದು ಅಲ್ವಾ? ಆ ಪಾತ್ರ ನಿರ್ವಹಿಸಿದವರು ಬೇರಾರು ಅಲ್ಲ ಸಂಪದ (Sampada). 

310

ಹೌದು, ಮಿಥುನ ರಾಶಿ ಸೀರಿಯಲ್ ನ (Mithuna Rashi) ಆರಂಭದ ದಿನಗಳಲ್ಲಿ ಸುರಕ್ಷಾ ಪಾತ್ರಕ್ಕೆ ನ್ಯಾಯ ಒದಗಿಸಿ, ನೆಗೆಟೀವ್ ಶೇಡ್ (negative shade) ನಲ್ಲಿ ಅದ್ಭುತವಾಗಿ ನಟಿಸಿದ್ದರು ಸಂಪದ, ನಂತರ ಕಾರಣಾಂತರಗಳಿಂದ ಆ ಸೀರಿಯಲ್ ಬಿಟ್ಟಿದ್ದರು. ಆದರೂ ಇವರು ನಟಿಸಿದ ಆ ಪಾತ್ರ ಮಾತ್ರ ಜನರಿಗೆ ಇಷ್ಟವಾಗಿತ್ತು. 

410

ಮಿಥುನ ರಾಶಿಯ ಸೊಕ್ಕಿನ ಹುಡುಗಿ ಸುರಕ್ಷಾ ಪಾತ್ರಧಾರಿ ಸಂಪದ,ಇದೀಗ ಸಿನಿಮಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಅದು ಡೈನಾಮಿಕ್ ಪ್ರಿನ್ಸ್ ಖ್ಯಾತಿಯ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಕರಾವಳಿ ಚಿತ್ರದಲ್ಲಿ ನಾಯಕಿ ದಕ್ಷಿಣ ಆಗಿ ಸಂಪದ ಮಿಂಚಲಿದ್ದಾರೆ. 

 

510

ಸಂಪದ ಸಿನಿಮಾ ಜರ್ನಿ ಈಗಾಗಲೇ ಆರಂಭವಾಗಿದೆ, ಇದಕ್ಕೂ ಮುನ್ನ ಅವರು ನಿಖಿಲ್ ಕುಮಾರ್ ನಟನೆಯ ರೈಡರ್ (Raider) ಸಿನಿಮಾದಲ್ಲಿ ನಟಿಸಿದ್ದರು. ಇದಿಗ ಕರಾವಳಿಯ ಮಣ್ಣಿನ ಸೊಗಡಿನ ಕಥೆಯನ್ನ ಇಷ್ಟಪಟ್ಟಿರುವ ಸಂಪದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

610

ಕನಸಿನ ನಗರಿ ಮುಂಬೈನಲ್ಲಿ ಹುಟ್ಟಿರೋ ಬೆಡಗಿ ಸಂಪದ. ನಂತರ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು ಬೆಂಗಳೂರಲ್ಲಿ, ಸದ್ಯ ಬೆಂಗಳೂರಲ್ಲೇ ಸೆಟಲ್ ಆಗಿದ್ದಾರೆ ಈ ಬೆಡಗಿ. ನಟನೆಗೂ ಬರುವ ಮುನ್ನ ಮಾಡೆಲ್ (model) ಆಗಿ ಕೆಲಸ ಮಾಡಿದ್ದಾರೆ. 

710

22 ವರ್ಷದ ಈ ಬೆಡಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಇವರ ಸೋಶಿಯಲ್ ಮೀಡಿಯಾ ಪ್ರೊಫೈಲ್ ನೋಡಿದ್ರೆ, ಸಾಕಷ್ಟು ಫೋಟೋ ಶೂಟ್ (photoshoot) ಮಾಡಿಸಿರೋದು ನೋಡಬಹುದು. 

810

ಕನ್ನಡದಲ್ಲಿ ರೈಡರ್ ಚಿತ್ರದ ಬಳಿಕ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಂಪದಾ, ಶ್ರೀ ಶ್ರೀ ಶ್ರೀ ರಾಜವಾರು ಮತ್ತು ಮಾಸ್ ಮಹಾರಾಜು ಸಿನಿಮಾಗಳಲ್ಲಿ ನಟಿಸಿದರು. ಅದು ಅಷ್ಟಾಗಿ ಹೆಸರು ತಂದು ಕೊಟ್ಟಿಲ್ಲ, ಇದೀಗ ಕರಾವಳಿ ಚಿತ್ರ ಸಂಪದಾಗೆ ಲಕ್ ತಂದುಕೊಡುತ್ತಾ ನೋಡಬೇಕು.

910

ವ್ಯಾಲೆಂಟೈನ್ಸ್ ದಿನವಾಗಿ ಫೆಬ್ರವರಿ 14 ರಂದು ಚಿತ್ರತಂಡ ಮೊದಲ ಬಾರಿಗೆ ನಾಯಕಿಯ ಫೋಟೋ ರೀಲೀಸ್ ಮಾಡಿದ್ದರು. ಕೆಂಪು ಬಣ್ಣದ ಲಂಗ, ದಾವಣಿಯುಟ್ಟು, ಕೈಯಲ್ಲಿ ಮೇಕೆ ಮರಿ ಹಿಡಿದು ಮುದ್ದು ಮಾಡುತ್ತಿರುವ ಫೋಟೋ ಇದಾಗಿತ್ತು. 

1010

ಗುರುದತ್ ಗಾಣಿಗ (Gurudat Ganiga) ನಿರ್ದೇಶನದ ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಜ್ವಲ್ ನಟನೆಯ 40ನೇ ಸಿನಿಮಾ ಇದಾಗಿದೆ ಅನ್ನೋದು ವಿಶೇಷ. 

Read more Photos on
click me!

Recommended Stories