ಹೌದು, ಸಂಯುಕ್ತಾ ಬಾಲಿ ಬೀಚ್ ನಲ್ಲಿ ನೀರಲ್ಲಿ ಮೋಜು ಮಾಡೋದು ಬಿಟ್ಟು, ತೆಂಗಿನ ಮರವೇರಿ ಕುಳಿತಿರುವ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೊ ತುಂಬಾನೆ ಕ್ಯೂಟ್ ಆಗಿದೆ. ಇದನ್ನ ನೋಡಿದ ಪಡ್ಡೆ ಹುಡುಗರು ತುಂಟಿ, ಮುದ್ದಾದ ಕೋತಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ತುಂಬಾನೆ ಹಾಟ್ ಆಗಿದ್ದೀರಾ. ಇನ್ನು ಸ್ವಲ್ಪ ಮೇಲೆ ಹತ್ತಬೇಕಿತ್ತು ಅಂತಿದ್ದಾರೆ. ಇನ್ನೂ ಒಬ್ರು ಯಾವಾಗ್ಲೂ ಮಾಡರ್ನ್ ಡ್ರೆಸಲ್ಲಿ ಕಾಣಿಸ್ತೀರಿ, ಟ್ರೆಡಿಶನಲ್ ವೇರ್ ಕೂಡ ಧರಿಸಿ, ನಿಮ್ಮನ್ನ ಆ ರೀತಿ ನೋಡೋಕೆ ಇಷ್ಟ ಅಂತಾನೂ ಹೇಳಿದ್ದಾರೆ.