ಮಾಹಿರಾ ಸಿನಿಮಾದಲ್ಲಿ ನಟಿಸಿದ್ದ ಚೈತ್ರಾ ಆಚಾರ್, ನಂತರ ನಟಿಸಿದ ಪ್ರತಿಯೊಂದು ಚಿತ್ರಗಳಲ್ಲೂ ವಿಭಿನ್ನ ಪಾತ್ರ ಮತ್ತು ನಟನೆಯಿಂದ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಚೈತ್ರಾ ನಟನೆ ನೋಡಿದ ವೀಕ್ಷಕರು ಕನ್ನಡಕ್ಕೊಬ್ಬ ಅಮೋಘ ಪ್ರತಿಭೆ ಸಿಕ್ಕಿದ್ದಾರೆ ಅಂದಿದ್ರು. ನಾಯಕಿ ಜೊತೆಗೆ ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಚೈತ್ರಾ, ಗರುಡ ಗಮನ ವೃಷಭವಾಹನ ಸಿನಿಮಾದ ಸೋಜುಗಾದ ಸೂಜುಮಲ್ಲಿಗೆ ಹಾಡಿಗಾಗಿ ಫಿಲಂ ಫೇರ್ ಪ್ರಶಸ್ತಿಯನ್ನೂ ಸಹ ಪಡೆದಿದ್ದರು.