ಫ್ಯಾಮಿಲಿ ಫೋಟೊ ಶೇರ್ ಮಾಡಿದ ಧನ್ಯಾ… ನಟ ರಾಮ್’ಕುಮಾರ್ ಹ್ಯಾಂಡ್ಸಮ್ ಲುಕ್’ಗೆ ಅಭಿಮಾನಿಗಳು ಫಿದಾ

First Published | Oct 15, 2024, 2:42 PM IST

ರಾಜ್ ಕುಮಾರ್ ಫ್ಯಾಮಿಲಿಯ ಕುಡಿ, ನಟಿ ಧನ್ಯಾ ರಾಮ್ ಕುಮಾರ್ ತಮ್ಮ ಮುದ್ದಾದ ಫ್ಯಾಮಿಲಿ ಫೋಟೊ ಶೇರ್ ಮಾಡಿದ್ದು, ರಾಮ್’ಕುಮಾರ್ ಅವರನ್ನ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 
 

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಯುವ ನಟಿ ಧನ್ಯಾ ರಾಮ್ ಕುಮಾರ್ (Dhanya Ramkumar), ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾಮಿಲಿ ಫೋಟೊ ಶೇರ್ ಮಾಡಿದ್ದು, ಫೋಟೊ ನೋಡಿ, ನಟಿಯ ಅಭಿಮಾನಿಗಳು ಮಾತ್ರ ಅಲ್ಲ, ಧನ್ಯಾ ತಂದೆಯ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. 
 

ಧನ್ಯಾ ರಾಮ್ ಕುಮಾರ್ ಮತ್ತು ಅಣ್ಣ ಧೀರೇನ್ ರಾಮ್ ಕುಮಾರ್  (Dhiren Ramkumar) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಮ್ಮ-ಅಪ್ಪನ ಜೊತೆಗಿರುವ ಫ್ಯಾಮಿಲಿ ಫೋಟೊ ಶೇರ್ ಮಾಡಿದ್ದು, ರಾಮ್ ಕುಮಾರ್ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. 
 

Tap to resize

ರಾಮ್ ಕುಮಾರ್ (Ramkumar) ಅವರು 90ರ ದಶಕದ ಜನಪ್ರಿಯ ನಾಯಕ, ಜೊತೆಗೆ ಹ್ಯಾಂಡ್ಸಮ್ ನಟ. ಇವರು ಗೆಜ್ಜೆನಾದ, ಕಾವ್ಯಾ, ಮಹಾಕ್ಷತ್ರೀಯದಂತಹ ಹಿಟ್ ಚಿತ್ರಗಳನ್ನು ನೀಡಿ, ಆ ಕಾಲದಲ್ಲಿ ಹೆಂಗಳೆಯರ ಹೃದಯ ಕದ್ದಿದ್ದರು ಈ ನಟ. ನಂತರ ಒಂದರ ನಂತರ ಒಂದು ಸಿನಿಮಾಗಳು ಫ್ಲಾಪ್ ಆಗಿ ಸಿನಿಮಾ ರಂಗದಿಂದಲೇ ದೂರ ಉಳಿದರು ರಾಮ್ ಕುಮಾರ್. 
 

ಕೊನೆಗೆ ಸಿನಿಮಾಗಳಲ್ಲಿ ಪೋಷಕ ಪಾತ್ರ, ಅಲ್ಲೊಂದು ಇಲ್ಲೊಂದು ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದ ರಾಮ್’ಕುಮಾರ್ ನಂತರ ಸಿನಿಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡು, ನಿರ್ಮಾಣದಲ್ಲಿ ತೊಡಗಿದ್ದರು, ರಾಮ್ ಕುಮಾರ್ ಕೊನೆಯದಾಗಿ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ನಟಿಸಿದ್ದಾರೆ. 
 

ಕ್ಯಾಮೆರಾ ಎದುರು ರಾಮ್’ಕುಮಾರ್ ಕಾಣಿಸಿಕೊಳ್ಳುವುದೇ ತುಂಬಾ ಅಪರೂಪ. ಇದೀಗ ಧನ್ಯಾ ರಾಮ್ ಕುಮಾರ್ ಶೇರ್ ಮಾಡಿರುವ ಫೋಟೊ ನೋಡಿ, ಜನರಿಗೆ ಸಖತ್ ಖುಷಿಯಾಗಿದ್ದು, ಅವತ್ತು ರಾಮ್’ಕುಮಾರ್ ಹೇಗಿದ್ದರೋ, ಈವಾಗ್ಲೂ ಅಷ್ಟೇ ಹ್ಯಾಂಡ್ಸಮ್ ಆಗಿದ್ದಾರೆ ಅಂತಿದ್ದಾರೆ ಜನ. ಮತ್ತೆ ರಾಮ್ ಕುಮಾರ್ ಅವರನ್ನ ಸಿನಿಮಾದಲ್ಲಿ ನೋಡೋದಕ್ಕೆ ಇಷ್ಟಪಡ್ತಿದ್ದಾರೆ. 
 

ರಾಮ್’ಕುಮಾರ್ ಅವರು ಡಾ. ರಾಜ್ ಕುಮಾರ್ ಅವರ ಪುತ್ರಿಯಾದ ಪೂರ್ಣಿಮಾ ಅವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಸದ್ಯ ಮಕ್ಕಳಾದ ಧನ್ಯಾ ಮತ್ತು ಧೀರೇನ್ ಇಬ್ಬರೂ ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 
 

ಧನ್ಯಾ ಈಗಾಗಲೇ ನಿನ್ನ ಸನಿಹಕೆ, ಹೈಡ್ ಆಂಡ್ ಸೀಕ್, ದ ಜಡ್ಜ್ ಮೆಂಟ್, ಪೌಡರ್, ಕಾಲಾಪತ್ತರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಧೀರೇಜ್ ಕೂಡ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

Latest Videos

click me!