ಧಮಾಲ್‌ ಮಾಡ್ತಿದೆ Mast Malaika Song, ಫ್ಯಾನ್ಸ್‌ಗೆ ಧನ್ಯವಾದ ಹೇಳಿದ ಸುದೀಪ್‌ ಮಗಳು

Published : Dec 18, 2025, 01:08 PM IST

Saanvi Sudeep : ಇಯರ್ ಎಂಡ್‌ ಮೋಜಿಗೆ ಪಾರ್ಟಿ ಸಾಂಗ್ ಸಿಕ್ಕಾಗಿದೆ. ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ದರ್ಬಾರ್ ಮಾಡ್ತಿದೆ. ಮೊದಲ ಬಾರಿ ಕನ್ನಡದಲ್ಲಿ ಹಾಡಿರುವ ಸಾನ್ವಿ ಸುದೀಪ್ ಅಭಿಮಾನಿಗಳ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ದಾರೆ.

PREV
17
ಮಗಳ ಹಾಡಿಗೆ ಕಿಚ್ಚನ ಭರ್ಜರಿ ಡಾನ್ಸ್

ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಡಿಸೆಂಬರ್ 25 ರಂದು ತೆರೆಗೆ ಬರ್ತಿದೆ. ಆದ್ರೆ ಎರಡು ದಿನಗಳ ಹಿಂದೆ ಬಿಡುಗಡೆ ಆಗಿರುವ ಕಿಚ್ಚನ ಪಾರ್ಟಿ ಸಾಂಗ್ ಮಸ್ತ್ ಮಲೈಕಾ ಭರ್ಜರಿ ಸುದ್ದು ಮಾಡ್ತಿದೆ. ಮಾರ್ಕ್ ಚಿತ್ರದ ಪಾರ್ಟಿ ಸಾಂಗ್ ಹಾಡಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್. ಮಗಳ ಧ್ವನಿ, ಅಪ್ಪನ ಡಾನ್ಸ್ ನೋಡಿದ ಕಿಚ್ಚನ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ.

27
ಸಾನ್ವಿ ಧ್ವನಿಗೆ ಫ್ಯಾನ್ಸ್ ಫಿದಾ

ಸಾನ್ವಿ ಸುದೀಪ್ ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದಾರೆ. ಅವರ ಮೊದಲ ಸಾಂಗ್ ಅಪ್ಪ ಕಿಚ್ಚನ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಮಾರ್ಕ್ ಸಿನಿಮಾದ ಪಾರ್ಟಿ ಸಾಂಗ್ ಗೆ ಸಾನ್ವಿ ಧ್ವನಿ ನೀಡಿದ್ದಾರೆ. ಸಾನ್ವಿ ಕಂಠಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಲ್ಲ ಕಡೆ ಮೆಚ್ಚುಗೆಯ ಸುರಿಮಳೆಯಾಗ್ತಿದೆ. ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟೋದು, ಸಾನ್ವಿ ಧ್ವನಿ ಸೂಪರ್, ಅಧ್ಬುತ ಎನ್ನುವ ಕಮೆಂಟ್ ಎಲ್ಲ ಕಡೆ ರಾರಾಜಿಸ್ತಿದೆ.

37
ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸಾನ್ವಿ

ಸಾನ್ವಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ನಾನು ಸಾನ್ವಿ ಸುದೀಪ್. ಮೊನ್ನೆ ನನ್ನ ಮೊದಲ ಕನ್ನಡ ಸಾಂಗ್ ಮಸ್ತ್ ಮಲೈಕಾ ರಿಲೀಸ್ ಆಗಿದೆ. ಅದಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಧನ್ಯವಾದ. ಹೀಗೆ ಸಪೋರ್ಟ್ ಮಾಡ್ತಿರಿ ಅಂತ ಸಾನ್ವಿ ಹೇಳಿದ್ದಾರೆ.

47
ಕನ್ನಡದಲ್ಲಿ ಮೊದಲ ಸಾಂಗ್

ಸಾನ್ವಿ ಸುದೀಪ್, ಆಕ್ಟಿಂಗ್ ಗಿಂತ ಮ್ಯೂಸಿಕ್ ಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಕನ್ನಡದಲ್ಲಿ ಹಾಡಿರೋದು ಇದೇ ಮೊದಲು. ಆದ್ರೆ ಬೇರೆ ಭಾಷೆಯ ಸಿನಿಮಾಕ್ಕೆ ಸಾನ್ವಿ ಈಗಾಗಲೇ ಧ್ವನಿ ನೀಡಿದ್ದಾರೆ. ಟಾಲಿವುಡ್ ಸಿನಿಮಾ ಹಿಟ್ 3ಯ ಥೀಮ್ ಸಾಂಗ್ ಹಾಗೂ ಪೊರಟಮೆ 3.0 ಸಾಂಗ್ ಗೆ ಧ್ವನಿ ನೀಡಿ, ಅಧಿಕೃತವಾಗಿ ಟಾಲಿವುಡ್ ಪ್ರವೇಶ ಮಾಡಿದ್ದರು.

57
ಸಾನ್ವಿ ಉತ್ಸಾಹ ಡಬಲ್

ತೆಲುಗು ಸಿನಿಮಾಕ್ಕೆ ಹಾಡಿದ್ದ ಸಾನ್ವಿಯನ್ನು ಸುದೀಪ್ ಅಭಿಮಾನಿಗಳು ಬೆನ್ನು ತಟ್ಟಿದ್ದರು. ಆದ್ರೆ ಕನ್ನಡದಲ್ಲಿ ಹಾಡುವ ಆಸೆ ವ್ಯಕ್ತಪಡಿಸಿದ್ದರು. ಈಗ ಅದು ಈಡೇರಿದೆ. ಕಿಚ್ಚನ ಅಭಿಮಾನಿಗಳು ಸಾನ್ವಿ ಹಾಡಿಗೆ ಖುಷಿಯಾದ್ರೆ, ಹಾಡಿಗೆ ಸಿಗ್ತಿರುವ ರೆಸ್ಪಾನ್ಸ್ ಸಾನ್ವಿ ಉತ್ಸಾಹ ಡಬಲ್ ಮಾಡಿದೆ.

67
ಆಕ್ಟಿಂಗ್ ಮಾಡ್ತಾರಾ ಸಾನ್ವಿ?

ಸಾನ್ವಿ ಸುದೀಪ್ ಈಗಾಗಲೇ ಹಾಡಿನ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರೋಡ್ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಸಾನ್ವಿ, ನಟನೆ ಬಗ್ಗೆ ಆಸಕ್ತಿ ಇದೆ ಎಂದಿದ್ದರು. ನಟನಾ ತರಬೇತಿ ಕೂಡ ಪಡೆದಿದ್ದು, ಯಾವುದೇ ಪಾತ್ರ ಬಂದ್ರೂ ನಟಿಸಲು ಸಿದ್ಧ ಎಂದಿದ್ದರು. ಸಾನ್ವಿ ಬರೀ ಹೀರೋಯಿನ್ ರೋಲ್ ನೋಡ್ತಿಲ್ಲ. ಕ್ಯಾಮರಾ ಹಿಂದಿನ ಕೆಲ್ಸವನ್ನು ಇಷ್ಟಪಟ್ಟಿದ್ದಾರೆ. ನಿರ್ದೇಶನ, ಬರವಣಿಗೆಯಲ್ಲೂ ಆಸಕ್ತಿ ಹೊಂದಿದ್ದಾರೆ.

77
ಇಯರ್‌ ಎಂಡ್‌ ಪಾರ್ಟಿ ಡಾನ್ಸ್

ಮಸ್ತ್ ಮಲೈಕಾ ಸಾಂಗ್ ಯೂಟ್ಯೂಬ್ ನಲ್ಲಿ ಹಬ್ಬ ಮಾಡ್ತಿದೆ. 3. 7 ಮಿಲಿಯನ್ ಗಿಂತಲೂ ಹೆಚ್ಚು ವ್ಯೂವ್ ಪಡೆದಿದೆ. ಈ ಸಾಂಗ್ ನಲ್ಲಿ ಸುದೀಪ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇಯರ್ ಎಂಡ್‌ ಮೂಡಿನಲ್ಲಿರುವ ಅಭಿಮಾನಿಗಳಿಗೆ ಸುದೀಪ್ ಹಾಗೂ ಸಾನ್ವಿ ಪಾರ್ಟಿ ಸಾಂಗ್ ನೀಡಿದ್ದಾರೆ. ಮಾರ್ಕ್ ಟೀಸರ್ ಕೂಡ ಅಷ್ಟೇ ಹಿಟ್ ಆಗಿದ್ದು, ಸುದೀಪ್ ಮಾರ್ಕ್ ತೆರೆ ಮೇಲೆ ನೋಡಲು ಫ್ಯಾನ್ಸ್ ಕಾದು ಕುಳಿತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories