ಸಾಲು ಮರದ ತಿಮ್ಮಕ್ಕ ಮಡಿಲಿನಲ್ಲಿ ನಟಿ ಅಮೂಲ್ಯ ಅವಳಿ ಮಕ್ಕಳು; ಫೋಟೋ ವೈರಲ್

First Published | Dec 27, 2022, 12:20 PM IST

ನಟಿ ಅಮೂಲ್ಯ ಗೌಡ ನಿವಾಸಕ್ಕೆ ಭೇಟಿ ನೀಡಿಸ ಸಾಲು ಮರದ ತಿಮ್ಮಕ್ಕ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್....
 

ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ಗೌಡ ಮತ್ತು ಜಗದೀಶ್ ಆರ್‌ಸಿ ಅವರ ಅವಳಿ ಮಕ್ಕಳನ್ನು ನೋಡಿ ನಿವಾಸಕ್ಕೆ ವಿಶೇಷ ಅತಿಥಿ ಅಗಮಿಸಿದ್ದಾರೆ.

ಪದ್ಮಶ್ರೀ ಶ್ರೀಮತಿ ಸಾಲು ಮರದ ತಿಮ್ಮಕ್ಕ ಅವರು ಅಮೂಲ್ಯ ಮಕ್ಕಳನ್ನು ಮುದ್ದಾಡುತ್ತಿರುವ ಫೋಟೋವನ್ನು ಜಗದೀಶ್ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

Tap to resize

'ಪದ್ಮಶ್ರೀ ಪ್ರಶಸ್ತಿ ವಿಜೇತೆ, ಸಾವಿರಾರು ಮರಗಳ ಪೋಷಿಸಿದ ಶತಾಯುಷಿ, ವೃಕ್ಷಮಾತೆ, ಸಾಲುಮರದ ತಿಮ್ಮಕ್ಕನವರು ನಮ್ಮ ಸ್ವಗೃಹಕ್ಕೆ ಇಂದು ಭೇಟಿ ನೀಡಿ, ನಮ್ಮ ಮಕ್ಕಳಿಗೆ ಹರಸಿ, ಹಾರೈಸಿದ ಕ್ಷಣ' ಎಂದು ಬರೆದುಕೊಂಡಿದ್ದಾರೆ.

'ಸಾಲು ಮರದ ತಿಮ್ಮಕ್ಕ ಅವರ ಬದುಕಿನ ಹಾದಿ ನಮಗೆಲ್ಲಾ ಮಾದರಿ, ಅವರ ಪರಿಸರ ಕಾಳಜಿ ನಮಗೆಲ್ಲರಿಗೂ ಸದಾ ಪ್ರೇರಣೆ. ಅಂತಹ ಮಹಾನ್ ತಾಯಿ ನಮ್ಮ ಮನೆಗೆ ಭೇಟಿ ನೀಡಿ, ಪುತ್ರರತ್ನರಿಗೆ ಆಶೀರ್ವಾದಿಸಿದ್ದು ಅತ್ಯಂತ ಸಂತಸವೆನಿಸಿತು' ಎಂದಿದ್ದಾರೆ ಜಗದೀಶ್.

ನಟಿ ಅಮೂಲ್ಯಾ ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು. ಅಮೂಲ್ಯಾ ಕ್ಯೂಟ್ ಮಕ್ಕಳು ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಬಳಿಕ 6 ತಿಂಗಳಿಗೆ ಮಕ್ಕಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು. 

 ಅಮೂಲ್ಯ ಮತ್ತು ಪತಿ ಜಗದೀಶ್‌ ಬೆಂಗಳೂರಿನಲ್ಲಿ ನವೆಂಬರ್ 10ರಂದು ತಮ್ಮ ಅವಳಿ ಮಕ್ಕಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಬೆಂಗಳೂರಿನ ಶೆರಾಟನ್ ಗ್ರ್ಯಾಂಡ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು ಅಥರ್ವ್‌ - ಆಧವ್ ಎಂದು ಹೆಸರಿಟ್ಟಿದ್ದಾರೆ

Latest Videos

click me!