Sutradhari Song ಚಂದನ್‌ ಶೆಟ್ಟಿ ಜತೆ ಸಂಜನಾ ಆನಂದ್‌ ನೃತ್ಯ!

First Published | Dec 26, 2022, 10:10 AM IST

ಸೂತ್ರಧಾರಿ ಚಿತ್ರದಲ್ಲಿ ಮಿಂಚಲು ಸಜ್ಜಾದ ಸಂಜನಾ ಆನಂದ್. ಸೋಷಿಯಲ್ ಮೀಡಿಯಾದಲ್ಲಿ ಶೂಟ್ ಫೋಟೋ ವೈರಲ್...

 ಸಂಗೀತ ನಿರ್ದೇಶಕ ಹಾಗೂ ರಾರ‍ಯಪರ್‌ ಚಂದನ್‌ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘ಸೂತ್ರಧಾರಿ’ ಚಿತ್ರದ ಒಂದು ಹಾಡಿಗೆ ನಟಿ ಸಂಜನಾ ಆನಂದ್‌ ಹೆಜ್ಜೆ ಹಾಕಿದ್ದಾರೆ. 

ಇದು ಹೀರೋ ಇಂಟ್ರೊಡಕ್ಷನ್‌ ಹಾಡಾಗಿದ್ದು, ಬೆಂಗಳೂರಿನ ಇನ್ನೋವೇಟಿವ್‌ ಫಿಲಮ್‌ ಸಿಟಿಯಲ್ಲಿ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. 

Tap to resize

ಮೊದಲ ಬಾರಿಗೆ ಸಂಜನಾ ಆನಂದ್‌ ಹಾಗೂ ಚಂದನ್‌ ಶೆಟ್ಟಿತೆರೆ ಹಂಚಿಕೊಂಡಿದ್ದಾರೆ. ಈ ಹಾಡು ಇದೇ ಡಿಸೆಂಬರ್‌ 27ಕ್ಕೆ ಬಿಡುಗಡೆ ಆಗುತ್ತಿದೆ. ನವರಸನ್‌ ಚಿತ್ರದ ನಿರ್ಮಾಪಕರು.

 ಚಂದನ್ ಶೆಟ್ಟಿಗೆ ಜೋಡಿಯಾಗಿ ಅಪೂರ್ವ ನಟಿಸುತ್ತಿದ್ದಾರೆ. ಕಿರಣ್‌ ಕುಮಾರ್‌ ನಿರ್ದೇಶನ, ನವರಸನ್‌ ನಿರ್ಮಾಣದ ಚಿತ್ರವಿದು. ಖ್ಯಾತ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್‌ ಚಿತ್ರದ ಟೈಟಲ್‌ ಬಿಡುಗಡೆ ಮಾಡಿದರು. 

ಚಂದನ್‌ ಶೆಟ್ಟಿ ಮಾತನಾಡಿ ‘ನಾನು ಪೊಲೀಸ್‌ ಪಾತ್ರ ಮಾಡುತ್ತಿರುವೆ. ಮರ್ಡರ್‌ ಮಿಸ್ಟ್ರಿ ಕತೆ ಈ ಚಿತ್ರದಲ್ಲಿದೆ. ಚಿತ್ರಕ್ಕಾಗಿ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ನಟನೆ ಜತೆಗೆ ಸಂಗೀತ ನಿರ್ದೇಶನ ಕೂಡ ನನ್ನದೇ’ ಎಂದರು.

‘ನವರಸನ್‌ ಹಾಗೂ ಚಂದನ್‌ ಶೆಟ್ಟಿನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಮೆಚ್ಚುಗೆ ಆಗುವಂತೆ ಸಿನಿಮಾ ಮಾಡುತ್ತೇನೆ’ ಎಂದರು ನಿರ್ದೇಶಕ ಕಿರಣ್‌ ರಾಜ್‌.

Latest Videos

click me!