ಓ ದೇವರೇ, ಯಶ್​ ಹೊತ್ತುಕೊಂಡಿರೋ ಹುಡುಗಿ ಅವಳಾಗದಿರಪ್ಪಾ! ರುಕ್ಕು ಫ್ಯಾನ್ಸ್​ ಹೀಗೊಂದು ಹರಕೆ

Published : Feb 28, 2026, 11:02 AM IST

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಪೋಸ್ಟರ್​ವೊಂದು ವೈರಲ್​ ಆಗಿದ್ದು, ಇದರಲ್ಲಿ ಯಶ್ ಯುವತಿಯೊಬ್ಬರನ್ನು ಎತ್ತಿಕೊಂಡಿದ್ದಾರೆ. ಈ ಪೋಸ್ಟರ್​ ಅನ್ನು ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದು, ಹಾಡಿನಲ್ಲಿರುವ ನಟಿ ಅವರೇ ಇರಬಹುದೆಂಬ ಚರ್ಚೆ ಶುರುವಾಗಿದೆ. ಮಾರ್ಚ್ 2 ರಂದು ಹಾಡು ಬಿಡುಗಡೆಯಾಗಲಿದೆ. 

PREV
16
ಟಾಕ್ಸಿಕ್​ ಹವಾ

ಈಗಾಗಲೇ ಯಶ್​ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರ ಹವಾ ಸೃಷ್ಟಿಸಿದೆ. ಟೀಸರ್​ ಬಿಡುಗಡೆಯಾದಾಗಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿ ಚಿತ್ರ ಸೌಂಡ್​ ಮಾಡುತ್ತಲೇ ಇದೆ. ಡಾನ್ಸಿಂಗ್​ ಕಾರಿನ ಬಗ್ಗೆ ಪರ-ವಿರೋಧ ನಿಲುವು ವ್ಯಕ್ತ ಆಗುತ್ತಿರುವ ನಡುವೆಯೇ, ಈಗ ಇನ್ನೊಂದು ಪೋಸ್ಟರ್​ ವೈರಲ್​ ಆಗಿದ್ದು, ಇದರ ಬಗ್ಗೆಯೂ ಹಲವಾರು ರೀತಿಯ ಕಮೆಂಟ್ಸ್​​ ಕೇಳಿಬರುತ್ತಿವೆ.

26
ಯಶ್​ ತೋಳಲ್ಲಿ ಯುವತಿ

‘ಟಾಕ್ಸಿಕ್’ ಸಿನಿಮಾದ ಮೊದಲ ಸಾಂಗ್ ಮಾರ್ಚ್ 2ರಂದು ರಿಲೀಸ್ ಆಗಲಿದೆ ಎನ್ನುವ ಬಗ್ಗೆ ನಿನ್ನೆ ಒಂದು ಪೋಸ್ಟ್​ ಹಾಕಲಾಗಿದೆ. ಇದರಲ್ಲಿ ಯಶ್​ ಅವರು ಯುವತಿಯೊಬ್ಬಳನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ನೋಡಬಹುದು. ಈ ಹಾಡು ಸಖತ್ ಹಾಟ್ ಮತ್ತು ರೊಮ್ಯಾಂಟಿಕ್ ಆಗಿರಲಿದೆ ಎಂಬುದನ್ನು ಪೋಸ್ಟರ್ ಮೂಲಕ ಸೂಚಿಸಲಾಗಿದೆ.

36
ಟಾಕ್ಸಿಕ್​ ಪೋಸ್ಟ್​

ಅಷ್ಟಕ್ಕೂ ಈ ಪೋಸ್ಟರ್​ ಅನ್ನು ಕಿಯಾರಾ ಅಡ್ವಾಣಿ (Kiara Adwani) ಪೋಸ್ಟ್​ ಮಾಡಿರುವ ಕಾರಣ, ಯಶ್​ ಅವರ ತೋಳುಗಳಲ್ಲಿ ಇರುವುದು ಕಿಯಾರಾ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೂ ಈ ಪೋಸ್ಟರ್​ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆಗಳೂ ಶುರುವಾಗಿವೆ.

46
ಓ ದೇವರೇ...

ಯಶ್​ ನಟಿಯನ್ನು ಎತ್ತಿಕೊಂಡು ಹೋಗ್ತಿರೋದು ನಮ್ಮ ರುಕ್ಕು (Rukmini Vasant) ಆಗದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ಬಗ್ಗೆ ನಮ್ಮ ಸ್ಯಾಂಡಲ್​ವುಡ್​ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಶೇರ್​ ಮಾಡಲಾಗಿದೆ. ಇದರಲ್ಲಿ ಅಪ್ಪಾ ದೇವರೇ ರಾಯ ಎತ್ತಿಕೊಂಡಿರೋ ಹುಡುಗಿ ನಮ್ಮ ರುಕ್ಕು ಆಗ್ದೇ ಇರಲಪ್ಪಾ ಎಂದಿದ್ದಾರೆ ಅಭಿಮಾನಿಗಳು.

56
ಯಾಕೆ ಹೀಗೆ?

ಅಷ್ಟಕ್ಕೂ ಅವರು ಯಾಕೆ ಹೀಗೆ ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಅದಕ್ಕಾಗಿಯೇ ಹಲವಾರು ಮಂದಿ ರುಕ್ಕು ಆದ್ರೆ ತಪ್ಪೇನು ಎಂದು ಪ್ರಶ್ನಿಸ್ತಾ ಇದ್ದರೆ, ಮತ್ತೆ ಕೆಲವರು ಕಿಯಾರಾ ಇದಾಗಲೇ ಈ ಪೋಸ್ಟ್​ ಶೇರ್​ ಮಾಡಿದ್ದು, ಈಕೆ ಕಿಯಾರಾನೇ ಎನ್ನುತ್ತಿದ್ದಾರೆ.

66
ಮಾರ್ಚ್​ 2ರಂದು ಗುಟ್ಟು

ಒಟ್ಟಿನಲ್ಲಿ, ಈ ಪೋಸ್ಟರ್​ ಗುಟ್ಟು, ಮಾರ್ಚ್ 2ರಂದು ತಿಳಿಯಲಿದೆ. ಅಂದು ಟಾಕ್ಸಿಕ್ ಸಿನಿಮಾದ ಸಾಂಗ್ ರಿಲೀಸ್ ಆಗುತ್ತಿದೆ. ತಬಾಹಿ ಸಾಂಗ್ ಸಿನಿಮಾ ಜಗತ್ತಿನಲ್ಲೇ ಧೂಳೆಬ್ಬಿಸಲು ಸಜ್ಜಾಗಿದೆ. ಪ್ರೀತಿ, ಪ್ರೇಮದ ನವೆರೇಳುವ ಹಾಡನ್ನು ಟಾಕ್ಸಿಕ್ ತಂಡ ರಿಲೀಸ್ ಮಾಡುತ್ತಿದೆ. ಕಿಯಾರಾ, ರುಕ್ಮಿಣಿ ಅಷ್ಟೇ ಅಲ್ಲದೇ ನಯನತಾರ, ಹುಮಾ ಖುರೇಷಿ ಸೇರಿದಂತೆ ನಾಯಕಿರ ದಂಡೇ ಟಾಕ್ಸಿಕ್ ಸಿನಿಮಾದಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories