Rukmini Vasanth: ರಶ್ಮಿಕಾ ಮಂದಣ್ಣ ಬಳಿಕ ಇದೀಗ ಸದ್ಯದ ನ್ಯಾಷನಲ್ ಕ್ರಶ್ ಆಗಿರುವ ಕನ್ನಡಿಗರ ನೆಚ್ಚಿನ ಪುಟ್ಟಿ ರುಕ್ಮಿಣಿ ವಸಂತ್ ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ರುಕ್ಮಿಣಿ ಕೂಡ ವಿಕ್ಕಿ ಜೊತೆ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆಯೇ?
ಕಾಂತಾರಾ ಚಾಪ್ಟರ್ 1 ಮೂಲಕ ಸದ್ಯದ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ನಟಿ ರುಕ್ಮಿಣಿ ವಸಂತ್. ಇದೀಗ ರುಕ್ಮಿಣಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆಗೆ ಕಾಣಿಸಿಕೊಂಡಿದ್ದು, ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆಯೇ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.
27
ರಶ್ಮಿಕಾ ಹಾದಿಯಲ್ಲಿ ರುಕ್ಮಿಣಿ
ಹಿಂದೆ ನ್ಯಾಷನಲ್ ಕ್ರಶ್ ಆಗಿದ್ದ ರಶ್ಮಿಕಾ ಮಂದಣ್ಣ ವಿಕ್ಕಿ ಕೌಶಲ್ ಜೊತೆ ಛವಾ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ರುಕ್ಮಿಣಿ ಕೂಡ ರಶ್ಮಿಕಾ ಹಾದಿಯಲ್ಲಿ ನಡೆಯುತ್ತಿದ್ದಾರೆ? ಎನ್ನುವ ಸಂಶಯ ಮೂಡಿದೆ, ಇದಕ್ಕೆ ಕಾರಣ ವಿಕ್ಕಿ ಜೊತೆ ರುಕ್ಮಿಣಿ ಕಾಣಿಸಿಕೊಂಡು, ಕೇಕ್ ತಿನ್ನಿಸುತ್ತಿರುವ ವಿಡಿಯೋವನ್ನು ರುಕ್ಮಿಣಿ ಹಂಚಿಕೊಂಡಿದ್ದು, ಅದು ಸದ್ಯ ವೈರಲ್ ಆಗುತ್ತಿದೆ.
37
ಬಾಲಿವುಡ್ ಗೆ ಎಂಟ್ರಿ ಕೊಡ್ತಾರ ರುಕ್ಮಿಣಿ?
ಅಷ್ಟಕ್ಕೂ ನಡೆದಿರುವುದು ಏನೆಂದರೆ ಕೆಲವು ದಿನಗಳ ಹಿಂದೆ ಖ್ಯಾತ ಪತ್ರಕರ್ತೆ ಅನುಪಮಾ ಚೋಪ್ರಾ ಜೊತೆ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ ಆಕ್ಟರ್ಸ್ ರೌಂಡ್ ಟೇಬಲ್ 2025’ ಸಂದರ್ಶನ ವೇಳೆ ರುಕ್ಮಿಣಿ ವಸಂತ್, ವಿಕ್ಕಿ ಕೌಶಲ್, ಕಲ್ಯಾಣಿ ಪ್ರಿಯದರ್ಶನ್, ಬೇಸಿಲ್ ಜೋಸೆಫ್, ಇಶಾನ್ ಕಟ್ಟರ್, ಕೃತಿ ಸನನ್ ಭಾವಹಿಸಿದ್ದರು. ಈ ಸಂದರ್ಭದಲ್ಲಿ ರುಕ್ಮಿಣಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಇತ್ತೀಚೆಗಷ್ಟೇ ರುಕ್ಮಿಣಿ ವಸಂತ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಹಾಗಾಗಿ ನಟಿಯ ಹುಟ್ಟುಹಬ್ಬವನ್ನು ಸಂದರ್ಶನದ ಸಮಯದಲ್ಲೂ ಸೆಲೆಬ್ರೇಟ್ ಮಾಡಲಾಗಿದ್ದು, ಆ ಸಂದರ್ಭದಲ್ಲಿ ವಿಕ್ಕಿ ಕೌಶಲ್ ಕೂಡ ಜೊತೆಗಿದ್ದು, ನಟಿಗೆ ವಿಶ್ ಮಾಡಿ, ಕೇಕ್ ತಿನ್ನಿಸುತ್ತಿರುವ ವಿಡಿಯೋ ಇದಾಗಿದೆ. ಆದರೆ ಇಬ್ಬರು ಸದ್ಯಕ್ಕೆ ಸಿನಿಮಾದಲ್ಲಿ ನಟಿಸುವ ಬಗ್ಗೆ ಯಾವುದೇ ಮಾಹಿತಿ ವರದಿಯಾಗಿಲ್ಲ.
57
ಡಿಸೆಂಬರ್ ಫೋಟೊ ಡಂಪ್
ಅಂದಹಾಗೇ ರುಕ್ಮಿಣಿ ವಸಂತ್ ಡಿಸೆಂಬರ್ ತಿಂಗಳಲ್ಲಿ ತಮ್ಮ ಜೀವನದಲ್ಲಿ ಏನೆಲ್ಲಾ ಮುಖ್ಯ ಘಟನೆಗಳು ನಡೆದಿವೆಯೋ ಅದೆಲ್ಲದರ ಸಣ್ಣ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರ ಜೊತೆಗೆ ಬರ್ತ್ ಕೇಕ್ ಕಟ್ಟಿಂಗ್ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.
67
2025 ರುಕ್ಮಿಣಿಗೆ ಬೆಸ್ಟ್ ಇಯರ್
2025ನೇ ವರ್ಷ ರುಕ್ಮಿಣಿ ಪಾಲಿಗೆ ಲಕ್ಕಿ ಇಯರ್ ಅಂದ್ರೆ ತಪ್ಪಾಗಲ್ಲ. ಈ ವರ್ಷ ರುಕ್ಮಿಣಿ ಅಭಿನಯದ 3 ಸಿನಿಮಾಗಳು ಬಿಡುಗಡೆಯಾಗಿವೆ. ತಮಿಳಿನಲ್ಲಿ ಏಸ್ ಮತ್ತು ಮದರಾಸಿ, ಕನ್ನಡದಲ್ಲಿ ಕಾಂತಾರಾ ಚಾಪ್ಟರ್ 1, ಈ ಮೂರು ಸಿನಿಮಾಗಳು ಈ ವರ್ಷ ಸೂಪರ್ ಹಿಟ್ ಪ್ರದರ್ಶನ ನೀಡಿದ್ದವು.
77
ರುಕ್ಮಿಣಿ ನಟಿಸಲಿರುವ ಸಿನಿಮಾಗಳು
ಇದಲ್ಲದೇ ರುಕ್ಮಿಣಿ ವಸಂತ್ ಮುಂದಿನ ವರ್ಷವೂ ಬ್ಯುಸಿಯಾಗಿದ್ದು, ಯಶ್ ಜೊತೆ ಟಾಕ್ಸಿ-ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್, ಡ್ರಾಗನ್ ಎನ್ನುವ ತೆಲುಗು ಹಾಗೂ ಮಣಿರತ್ನಂ ಅವರ ತಮಿಳು ಸಿನಿಮಾದಲ್ಲಿ ರುಕ್ಮಿಣಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.