Temple Run ಬಳಿಕ ಫ್ಯಾಮಿಲಿ ಜೊತೆ ಗೋವಾದಲ್ಲಿ ವೆಕೇಶನ್ ಎಂಜಾಯ್ ಮಾಡಿದ Rishab Shetty

Published : Dec 31, 2025, 11:13 AM IST

Rishab Shetty in Goa: ಕಾಂತಾರಾ ಶೂಟಿಂಗ್, ಮೂವಿ ರಿಲೀಸ್, ಸಕ್ಸಸ್, ಟೆಂಪಲ್ ರನ್, ಭೂತ ಕೋಲ, ಸೇವೆಯ ಬಳಿಕ ಇದೀಗ ಚಂದನವನದ ನಟ ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಹಾಗೂ ಮಕ್ಕಳ ಜೊತೆ ಗೋವಾದಲ್ಲಿ ಟೂರ್ ಎಂಜಾಯ್ ಮಾಡಿ ಬಂದಿದ್ದಾರೆ. ಪ್ರಗತಿ ಶೆಟ್ಟಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.

PREV
18
ರಿಷಬ್ ಶೆಟ್ಟಿ

ಕಳೆದ ನಾಲ್ಕೈದು ವರ್ಷಗಳಿಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕಾಂತಾರಾ ಸಿನಿಮಾದ ಶೂಟಿಂಗ್, ಎಡಿಟಿಂಗ್, ಪ್ರೊಮೋಶನ್, ಸಕ್ಸಸ್, ಸಕ್ಸಸ್ ಮೀಟ್ ಎಂದು ಪೂರ್ತಿಯಾಗಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಅವರಿಗೆ ತಮ್ಮ ಫ್ಯಾಮಿಲಿ ಲೈಫ್ ಕಡೆಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಬಾರಿ ನಟ ಹೇಳಿದ್ದರು.

28
ಬ್ರೇಕ್ ಪಡೆದುಕೊಂಡ ರಿಷಬ್

ಇದೀಗ ಐದು ವರ್ಷದ ಬಳಿಕ ಎಲ್ಲದುದರಿಂದ ಬ್ರೇಕ್ ಪಡೆದುಕೊಂಡ ರಿಷಬ್ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳಾದ ರಾಧ್ಯಾ ಮತ್ತು ರಣ್ವೀತ್ ಜೊತೆಗೆ ಗೋವಾಗೆ ಎರಳಿದ್ದು, ಅಲ್ಲಿ ವೆಕೇಶನ್ ಎಂಜಾಯ್ ಮಾಡಿ ಬಂದಿದ್ದಾರೆ.

38
ಫೋಟೊ ಹಂಚಿಕೊಂಡ ಪ್ರಗತಿ

ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಇದೀಗ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಗೋವಾ ವೆಕೇಶನ್ ಫೋಟೋಗಳನ್ನು ಶೇರ್ ಮಾಡಿದ್ದು, Throwback to the Goa trip ಎಂದು ಬರೆದುಕೊಂಡು, ಮುದ್ದಾದ ಫ್ಯಾಮಿಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

48
ಟೆಂಪಲ್ ರನ್ ಬಳಿ ಗೋವಾ ವೆಕೇಶನ್

ಕಾಂತಾರಾ ಸಿನಿಮಾ ರಿಲೀಸ್ ಬಳಿಕ ರಿಷಬ್ ಟೆಂಪಲ್ ರನ್ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದರು. ಕೊಲ್ಲೂರು ಮೂಕಾಂಬಿಕಾ ಸನ್ನಿಧಾನ, ಭೂತ ಕೋಲ, ಪೂಜೆ, ಪುರಸ್ಕಾರ ಎನ್ನುತ್ತಾ ದೇವಸ್ಥಾನಗಳಿಗೆ ಭೇಟಿ ನೀಡುವುದರಲ್ಲಿ ಬ್ಯುಸಿಯಾಗಿದ್ದ ರಿಷಬ್ ಇದೀಗ ಗೋವಾ ಕಡೆಗೆ ಮುಖ ಮಾಡಿದ್ದಾರೆ.

58
ಬೋಟಲ್ಲಿ ಫ್ಯಾಮಿಲಿ ಜೊತೆ

ರಿಷಬ್ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಸಮುದ್ರದ ಮೇಲೆ ಬೋಟ್ ರೈಡ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ. ಮಕ್ಕಳ ತರಲೆ ತುಂಟಾಟ, ನಗು, ಫ್ಯಾಮಿಲಿ ಟೈಮಿಂಗ್ ಎಲ್ಲವನ್ನೂ ನೋಡಿ ಅಭಿಮಾನಿಗಳು ಸಹ ಖುಷಿ ಪಟ್ಟಿದ್ದಾರೆ.

68
ವರ್ಕ್ ಹಾರ್ಡ್ ಆಂಡ್ ಎಂಜಾಯ್

ಅಭಿಮಾನಿಗಳು ಕಾಮೆಂಟ್ ಮಾಡಿ, ಇದ್ದರೆ ಹೀಗೆ ಇರಬೇಕು, ಪರಿಶ್ರಮ ಪಟ್ಟು ಕೆಲಸ ಮಾಡಿ, ಬಳಿಕ ಜೀವನವನ್ನು ಎಂಜಾಯ್ ಮಾಡಬೇಕು. ಬೆಸ್ಟ್ ಫ್ಯಾಮಿಲಿ, ಸುಂದರವಾದ ಕುಟುಂಬ, ಝೀರೋ ಟು ಹೀರೋ ಎಂದು ಕಾಮೆಂಟ್ ಮಾಡಿ, ತಮ್ಮ ನೆಚ್ಚಿನ ನಟನನ್ನು ಹೊಗಳಿದ್ದಾರೆ.

78
ರಿಷಬ್ ಶೆಟ್ಟಿ ಮುಂದಿನ ಚಿತ್ರ ಯಾವುದು?

ರಿಷಬ್ ಶೆಟ್ಟಿ ಕಾಂತಾರ ಬಳಿಕ ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಆದರೆ ಇದರಲ್ಲಿ ಕನ್ನಡದ ಯಾವ ಸಿನಿಮಾ ಕೂಡ ಇಲ್ಲ. ಬಹು ನಿರೀಕ್ಷಿತ ‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನಾಗಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ.

88
ಮತ್ತೆರಡು ಸಿನಿಮಾಗಳಲ್ಲಿ ರಿಷಬ್

‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ರಿಷಬ್, ಈ ಚಿತ್ರ 2027ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದಲ್ಲದೇ ಕಾಂತಾರಾ ಚಾಪ್ಟರ್ 2 ಕೂಡ ಬರಲಿದೆ, ಆದರೆ ಆ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories