ಅಮ್ಮನಿಂದ ವಿಲನ್ ವರೆಗೆ ಎಲ್ಲ ಪಾತ್ರಕ್ಕೂ ಸೈ, ಹೊಸ ವರ್ಷ ಹೊಸ ನಿರೀಕ್ಷೆಯಲ್ಲಿ ನಟಿ ಶ್ರುತಿ

Published : Dec 30, 2025, 10:10 PM IST

2025 ವಿದಾಯಕ್ಕೆ ಕ್ಷಣಗಣನೆ ಶುರುವಾಗಿದೆ. 2026 ಸ್ವಾಗತಿಸಲು ಎಲ್ಲರೂ ಸಿದ್ಧರಾಗ್ತಿದ್ದಾರೆ. ಈ ವರ್ಷ ಹೇಗೆ ಕಳೀತು ಎಂಬುದನ್ನು ಪ್ರತಿಯೊಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ. ಅದ್ರಲ್ಲಿ ನಟಿ ಶ್ರುತಿ ಕೂಡ ಒಬ್ಬರು. ಈ ವರ್ಷದ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?

PREV
18
ನಾಲ್ಕು ಸಿನಿಮಾ ಮಾಡಿದ ಶ್ರುತಿ

ಸ್ಯಾಂಡಲ್ ವುಡ್ ಹಿರಿಯ ನಟಿ ಶ್ರುತಿ ಈಗ್ಲೂ ಬ್ಯುಸಿ ನಟಿಯರಲ್ಲಿ ಒಬ್ಬರು. ಶ್ರುತಿ, ಅನೇಕ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದಲ್ದೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2025ರಲ್ಲಿ ನಟಿ ಶ್ರುತಿ ನಾಲ್ಕು ವಿಭಿನ್ನ ಚಿತ್ರಗಳಲ್ಲಿ ನಟಿಸಿದ್ದಾರೆ.

28
ಮಾದೇವ

ಶ್ರುತಿ ಅಭಿನಯದ ಮಾದೇವ ಸಿನಿಮಾ ಈ ವರ್ಷ ಜೂನ್ ನಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾದಲ್ಲಿ ಶ್ರುತಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶ್ರುತಿ ಅಂದ್ರೆ ಅಳು ಅಂದ್ಕೊಂಡಿದ್ದ ಅಭಿಮಾನಿಗಳ ಆಲೋಚನೆಯನ್ನು ಶ್ರುತಿ ಬದಲಿಸಿದ್ದಾರೆ. ಸಿನಿಮಾದಲ್ಲಿ ವಿನೋದ್ ಪ್ರಭಾಕರ್, ಸೋನಲ್, ಶ್ರೀನಗರ ಕಿಟ್ಟಿ, ಮಾಲಾಶ್ರೀ ಸೇರಿದಂತೆ ಅನೇಕ ನಟರು ನಟಿಸಿದ್ದಾರೆ.

38
ಎಕ್ಕ ಸಿನಿಮಾ

ಶ್ರುತಿ ಅಭಿನಯದ, 2025ರಲ್ಲಿ ತೆರೆಗೆ ಬಂದ ಇನ್ನೊಂದು ಸಿನಿಮಾ ಎಕ್ಕ. ಈ ಸಿನಿಮಾದಲ್ಲಿ ಶ್ರುತಿ, ಯುವ ರಾಜಕುಮಾರ್ ಅಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಆನಂದ್, ಸಂಪದ ಹುಲಿವಾನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಂಗಲ್ ಬಂಗಾರಿ ಹಾಡಿನ ಮೂಲಕವೇ ಸಿನಿಮಾ ಅಭಿಮಾನಿಗಳ ಗಮನ ಸೆಳೆದಿತ್ತು.

48
ಜಸ್ಟ್ ಮ್ಯಾರೀಡ್

ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ಶ್ರುತಿ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಹಾಡಿನ ಮೂಲಕ ಶ್ರುತಿ ಕ್ಯಾರೆಕ್ಟರ್ ರಿವೀಲ್ ಮಾಡಲಾಗಿತ್ತು. ಮೇಲೊಬ್ಬ ಕುಂತು ಗೀಚವ್ನೆ ನೋಡು ಹಾಡು ಬಹುತೇಕ ಎಲ್ಲ ಅಭಿಮಾನಿಗಳಿಗೆ ಇಷ್ಟವಾಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಶೈನ್ ಶೆಟ್ಟಿ, ಅಂಕಿತಾ ಅಮರ್ ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಆಗಸ್ಟ್ 22 ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು.

58
ಫ್ಲರ್ಟ್

ಚಂದನ್ ಕುಮಾರ್ ನಿರ್ಮಾಣ ಮಾಡಿ ನಟಿಸಿರುವ ಫ್ಲರ್ಟ್ ಸಿನಿಮಾದಲ್ಲಿ ಶ್ರುತಿ ನಟಿಸಿದ್ದಾರೆ. ಲಾಯರ್ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಚಂದನ್ ಮತ್ತು ಶ್ರುತಿ ಜೊತೆ ನಿಮಿಕಾ ರತ್ನಾಕರ್, ಗಿರೀಶ್ ಶಿವಣ್ಣ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾ ನವೆಂಬರ್ 28, 2025ರಲ್ಲಿ ತೆರೆಗೆ ಬಂದಿದೆ.

68
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್

ಸೋಶಿಯಲ್ ಮೀಡಿಯಾದಲ್ಲಿ ನಟಿ ಶ್ರುತಿ 2025ರಲ್ಲಿ ಬಿಡುಗಡೆಯಾದ ತಮ್ಮ ಸಿನಿಮಾಗಳ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರತಿಯೊಂದು ಸಿನಿಮಾದ ಒಂದೊಂದು ವಿಡಿಯೋ ಪೋಸ್ಟ್ ಮಾಡಿರುವ ಶ್ರುತಿ, ಧನ್ಯವಾದ ಹೇಳಿದ್ದಾರೆ.

78
ಧನ್ಯವಾದ ಹೇಳಿದ ಶ್ರುತಿ

ಈ ವರ್ಷದ ನನ್ನ ನಾಲ್ಕು ಚಿತ್ರಗಳು, ಮಹಾದೇವ , ಎಕ್ಕ , just married , flirt. ಈ ಚಿತ್ರದ ನಿರ್ದೇಶಕರಿಗೆ, ನಿರ್ಮಾಪಕರಿಗೆ ಜೊತೆಗೆ ನಟಿಸಿದ ಪ್ರತಿಯೊಬ್ಬ ಕಲಾವಿದರಿಗೂ ಹಾಗೆ ಒಳ್ಳೆ ವಿಮರ್ಶೆ ಕೊಟ್ಟ ಮಾಧ್ಯಮದವರಿಗೂ, ಈ ಚಿತ್ರಗಳಲ್ಲಿ ನನ್ನ ಪಾತ್ರವನ್ನು ಮೆಚ್ಚಿದ ಪ್ರತಿ ಅಭಿಮಾನಿಗಳಿಗೂ ಧನ್ಯವಾದಗಳು. ಮುಂದಿನ ವರ್ಷ ಮತ್ತಷ್ಟು ವಿಭಿನ್ನ ಪಾತ್ರಗಳೊಂದಿಗೆ ನಿಮನ್ನು ರಂಜಿಸುವ ಪ್ರಯತ್ನ ಮಾಡುತೇನೆ ಅಂತ ಶ್ರುತಿ ಪೋಸ್ಟ್ ಹಾಕಿದ್ದಾರೆ.

88
ಶುಭ ಹಾರೈಸಿದ ಫ್ಯಾನ್ಸ್

ಶ್ರುತಿ ಅಭಿನಯದ ಎಲ್ಲ ಸಿನಿಮಾಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾದೇವ ಸಿನಿಮಾದಲ್ಲಿ ನಿಮ್ಮ ಪಾತ್ರ ಭಿನ್ನವಾಗಿದೆ ಎಂದಿರುವ ಅಭಿಮಾನಿಗಳು, ಮುಂದಿನ ವರ್ಷಕ್ಕೆ ಕಾಯ್ತಿದ್ದೇವೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories