ರಾವಣನ ಹಣ್ಣು ರಾಮ ಕದ್ದ: ಪ್ರಕಾಶ್​ ರಾಜ್​ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು

Published : Apr 17, 2026, 12:51 PM IST

ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್‌ಟಿಗೆ ಹೋಲಿಸಿದ್ದು,  ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

PREV
16
ಕಾಂಟ್ರವರ್ಸಿ ಮೂಲಕ ಫೇಮಸ್​

ನಟ ಪ್ರಕಾಶ್​ ರಾಜ್​ ಅವರಿಗೆ ಕಾಂಟ್ರವರ್ಸಿ ಮೂಲಕ ಫೇಮಸ್​ ಆಗುವುದು ಎಂದರೆ ಇನ್ನಿಲ್ಲದ ಖುಷಿ. ಸದಾ ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಲೇ ಒಂದಷ್ಟು ವರ್ಗವನ್ನು ಓಲೈಸಲು, ತಮ್ಮ ಮೇಲೆ ಕೇಸ್​ ಆದರೂ ಏನೂ ಆಗುವುದಿಲ್ಲ ಎನ್ನುವ ಬಂಢ ಧೈರ್ಯದಿಂದಲೇ ಹಿಂದೂಗಳ ವಿರುದ್ಧವೂ ಸಾಕಷ್ಟು ಚರ್ಚಾಸ್ಪದ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅದರಲ್ಲಿ ಇದೀಗ ಕೇರಳಿಗರ ಓಲೈಕೆಗೆ, ಅವರ ಚಪ್ಪಾಳೆ ಗಿಟ್ಟಿಸಲು ಅಲ್ಲಿ ಕೆಲವು ಮಾತನಾಡಿದ್ದು, ಇದೀಗ ಅವರ ವಿರುದ್ಧ ಕ್ರಿಮಿನಲ್​ ಕೇಸ್​​ ದಾಖಲಾಗಿದೆ ಎನ್ನಲಾಗುತ್ತಿದೆ.

26
ರಾಮಾಯಣದ ಬಗ್ಗೆ ಕೆಟ್ಟ ಮಾತು

ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ನಟ ರಾಮಾಯಣದ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ, ಹಿಂದಿ ಭಾಷೆ ಎಲ್ಲವನ್ನೂ ಟೀಕಿಸುವ ಭರದಲ್ಲಿ, ಶ್ರೀರಾಮಚಂದ್ರನನ್ನೇ ಉದಾಹರಣೆ ಮಾಡಿಕೊಂಡು ಕಾಂಟ್ರವರ್ಸಿ ಕ್ರಿಯೇಟ್​ ಮಾಡಿದ್ದಾರೆ ಪ್ರಕಾಶ್​ ರಾಜ್​.

36
ಉತ್ತರ ಭಾರತದ ರಾಮ

ಶ್ರೀರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ. ರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾನೆ ಎನ್ನುವ ಮೂಲಕ ತಾವೇ ಸೃಷ್ಟಿಸಿರುವ ಕಥೆಯೊಂದನ್ನು ಹೇಳಿದ್ದಾರೆ. ರಾಮ, ಲಕ್ಷ್ಮಣ, ಸೀತೆ ದಕ್ಷಿಣ ಭಾರತಕ್ಕೆ ಅವರಿಗೆ ಒಂದು ತೋಟದಲ್ಲಿ ಹಣ್ಣುಗಳು ಕಾಣುತ್ತವೆ. ಆಗ ಲಕ್ಷ್ಮಣ ಆ ಹಣ್ಣುಗಳನ್ನು ನಾವು ತಿನ್ನಬಹುದೇ ಎಂದು ರಾಮನಲ್ಲಿ ಕೇಳಿದಾಗ, ರಾಮ ಹಸಿವಾಗಿದ್ದರೆ ತಿನ್ನು ಎನ್ನುತ್ತಾನೆ. ಹಣ್ಣುಗಳನ್ನು ತಿನ್ನುವಾಗ, ಶೂರ್ಪನಕಿ ಹಾಗೂ ರಾವಣ ಬರುತ್ತಾರೆ. ಶೂರ್ಪನಕಿಗೆ ಸಿಟ್ಟು ಬಂದು ರಾವಣನಲ್ಲಿ ವಿಷಯ ಹೇಳುತ್ತಾಳೆ ಎಂದು ತಮ್ಮ ಸ್ಟೋರಿ ಆರಂಭಿಸಿದ್ದಾರೆ.

46
ರಾವಣ ಒಳ್ಳೆಯವ

ಬಳಿಕ, ರಾವಣ ಅವರಿಗೆ ಹಸಿವಾಗಿದೆ ಬಿಡು ತಿನ್ನಲಿ, ಆ ಮೇಲೆ ಮಾತಾಡೋಣ ಎನ್ನುತ್ತಾನೆ. ಅದಾದ ಬಳಿಕ ರಾವಣ, ಶೂರ್ಪನಕಿ ರಾಮ, ಲಕ್ಷ್ಮಣರ ಎದುರಿಗೆ ಹೋದಾಗ ರಾಮ ಯಾರೋ ಬುಡಕಟ್ಟ ಜನಾಂಗದವರು ಬಂದರು ಎನ್ನುತ್ತಾನೆ. ಹಣ್ಣುಗಳನ್ನು ತಿಂದಿದ್ದಕ್ಕೆ ಹಣ ನೀಡಬೇಕು ಎಂದು ರಾವಣ ಹೇಳುತ್ತಾನೆ. ಲೆಕ್ಕ ಮಾಡಿ 2000 ಸಾವಿರ ಡಾಲರ್ ಜೊತೆ ಜಿಎಸ್‌ಟಿ ಕಟ್ಟಬೇಕು ಎಂದು ಹೇಳುತ್ತಾನೆ ಎನ್ನುವುದು ಈ ಕಥೆಯ ಮುಂದುವರೆದ ಭಾಗ.

56
ಹಣ ಕೇಳಿದ ರಾವಣ

ಆಗ ರಾಮ, ಲಕ್ಷ್ಮಣ ನಮ್ಮ ಬಳಿ ಹಣವಿಲ್ಲ ಹೇಳುತ್ತಾರೆ . ಆ ಸಮಯದಲ್ಲಿ ರಾವಣ ನಿಮಗೆ ಕೆಲವೊಂದು ರಿಯಾಯ್ತಿ ನೀಡುತ್ತೇವೆ ಎಂದು ಹೇಳಿದರೂ ನಮ್ಮ ಬಳಿ ಹಣ ಇಲ್ಲ ಎನ್ನುತ್ತಾನೆ ರಾಮ. ಆಗ ರಾವಣ ಹಣ್ಣುಗಳನ್ನು ತಿಂದ ಬಳಿಕ ಉಳಿದ ಬೀಜವನ್ನು ನೆಟ್ಟು ಅದನ್ನು ಗಿಡವನ್ನಾಗಿ ಮಾಡಿ ಹೋಗಿ ಎನ್ನುತ್ತಾನೆ. ಹಾಗೆಯೇ ಹೆಸರು ಕೇಳಿದಾಗ, ನಾನು ರಾಮ, ನಾವು ಉತ್ತರ ಭಾರತದವರು ಎಂದು ಹೇಳುತ್ತಾನೆ ಎಂದಿದ್ದಾರೆ.

66
ಹಿಂದಿ ಹೇರಿಕೆ

ಕೊನೆಗೆ ಇದನ್ನು ಹಿಂದಿಗೆ ಲಿಂಕ್​ ಮಾಡಿ, ಹಿಂದಿ ಹೇರಿಕೆ ಸ್ಥಿತಿಯೂ ಇದೇ ಆಗಿದೆ. ದುಡ್ಡೇ ಇಲ್ಲದ ಮೇಲೆ ಡಿಸ್ಕೌಂಟ್​ ಕೊಟ್ರೆ ಏನು ಪ್ರಯೋಜನ ಎನ್ನುವ ರೀತಿ ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ’ ಎಂದಿದ್ದಾರೆ ಪ್ರಕಾಶ್ ರಾಜ್. ರಾಮಾಯಣ ಹಾಗೂ ಬೀಫ್​ ಫೆಸ್ಟ್​ ಬಗ್ಗೆ ಮಾತನಾಡಿದ್ದಕ್ಕೆ ಕ್ರಿಮಿನಲ್​ ಕೇಸ್​ ದಾಖಲಾಗಿದೆ ಎನ್ನಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories