ಅದಿತಿ ಪ್ರಭುದೇವ ಆರತಕ್ಷತೆಯಲ್ಲಿ ಯಶ್ ದಂಪತಿ: ರಾಧಿಕಾಗೆ ಹಗ್ ಮಾಡಿ ಕಿಸ್ ಕೊಟ್ಟ ಸ್ಯಾನೆ ಟಾಪ್ ಹುಡುಗಿ

Published : Nov 28, 2022, 11:30 AM IST

ಸ್ಯಾಂಡಲ್‌ವುಡ್‌ನ ಸ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉದ್ಯಮಿ ಯಶಸ್ವಿ ಜೊತೆ ಅದಿತಿ ಪ್ರಭುದೇವ ಹಸೆಮಣೆ ಏರಿದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ಅದಿತಿ ಮತ್ತು ಯಶಸ್ವಿ ಮದುವೆ ಸಮಾರಂಭ ನಡೆಯುತ್ತಿದೆ. 

PREV
17
ಅದಿತಿ ಪ್ರಭುದೇವ ಆರತಕ್ಷತೆಯಲ್ಲಿ ಯಶ್ ದಂಪತಿ: ರಾಧಿಕಾಗೆ ಹಗ್ ಮಾಡಿ ಕಿಸ್ ಕೊಟ್ಟ ಸ್ಯಾನೆ ಟಾಪ್ ಹುಡುಗಿ

ಸ್ಯಾಂಡಲ್‌ವುಡ್‌ನ ಸ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉದ್ಯಮಿ ಯಶಸ್ವಿ ಜೊತೆ ಅದಿತಿ ಪ್ರಭುದೇವ ಹಸೆಮಣೆ ಏರಿದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ಅದಿತಿ ಮತ್ತು ಯಶಸ್ವಿ ಮದುವೆ ಸಮಾರಂಭ ನಡೆಯುತ್ತಿದೆ. 

27

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ಅದಿತಿ ಮತ್ತು ಯಶಸ್ವಿ ಎಲ್ಲಾ ಶಾಸ್ತ್ರಗಳನ್ನು ಸಂಪ್ರದಾಯಬದ್ಧವಾಗಿ ಮಾಡಿಸಿಕೊಂಡಿದ್ದಾರೆ.  ನವೆಂಬರ್ 26ರಂದು ಹಳದಿ ಸಮಾರಂಭ, 27 ಮೆಹಂದಿ ಮತ್ತು ಸಂಗೀತ ಸಮಾರಂಭ ಹಾಗೂ ರಾತ್ರಿ ಆರತಕ್ಷತೆ ಸಂಭ್ರಮ ಜೋರಾಗಿತ್ತು. 

37

ನವೆಂಬರ್ 27 ರಾತ್ರಿ ನಡೆದ ಆರತಕ್ಷತೆ ಸಂಭ್ರಮದಲ್ಲಿ ಅನೇಕ ಗಣ್ಯರು ಹಾಜರಾಗಿದ್ದರು. ಅದಿತಿ ಪ್ರಭುದೇವ ಸ್ನೇಹಿತರು, ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ಅನ ಅನೇಕ ಗಣ್ಯರು ಭಾಗಿಯಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ. 

47

ನಟಿ ರಾಧಿಕಾ ನೀಲಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು. ಯಾಕಿಂಗ್ ಸ್ಟಾರ್ ಬ್ಲ್ಯಾಕ್ ಶರ್ಟ್‌ನಲ್ಲಿ ಕಂಗೊಳಿಸಿದ್ದರು. ಯಶ್ ಮತ್ತು ರಾಧಿಕಾ ಎಂಟ್ರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

57

ಅದಿತಿ ಮತ್ತು ಯಶಸ್ವಿ ಜೋಡಿಗೆ ಶುಭಾಹಾರೈಸಿದ ರಾಧಿಕಾ ಮತ್ತು ಯಶ್ ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿದರು. ಅದಿತಿ ಪ್ರಭುದೇವ ರಾಧಿಕಾ ಅವರನ್ನು ಹಗ್ ಮಾಡಿ, ಕಿಸ್ ಮಾಡಿ ಸಂಭ್ರಮಿಸಿದರು. ಅದಿತಿ ಮತ್ತು ರಾಧಿಕಾ ಪೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

67

ಅದಿತಿ ಮದುವೆ ಸಂಭ್ರಮದಲ್ಲಿ ಕಿರುತೆರೆ ನಟಿ ರಂಜನಿ ರಾಘವಾನ್ ಕೂಡ ಕಾಣಿಸಿಕೊಂಡರು. ಅದಿತಿ ದಂಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ನವ ಜೋಡಿಗೆ ಶುಭಹಾರೈಸಿದರು. ಇನ್ನು ನಟಿಯರಾದ ಮೇಘ ಶೆಟ್ಟಿ ಹಾಗೂ ರಚನಾ ಕೂಡ ಮದುವೆಯಲ್ಲಿ ಹಾಜರಿದ್ದರು. ಮೇಘಾ ಮತ್ತು ರಚನಾ ಇಬ್ಬರೂ ಅದಿತಿ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. 

77

ಸಿನಿಮಾ ಗಣ್ಯರ ಜೊತೆಗೆ ಅನೇಕ ರಾಜಕೀಯ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಭಾಗಿಯಾಗಿ ಅದಿತಿ ಮತ್ತು ಯಶಸ್ವಿ ಜೋಡಿಗೆ ಶುಭಹಾರೈಸಿದರು. ಇನ್ನೂ ಅನೇಕರು ಆರತಕ್ಷತೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories