ಕನ್ನಡ ಚಿತ್ರರಂಗ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಮತ್ತು ಯಶಸ್ವಿ ನವೆಂಬರ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ನವೆಂಬರ್ 27ರಿಂದು ಮದುವೆ ಸಂಭ್ರಮ ಶುರುವಾಗಿದೆ. ಮನೆಯಲ್ಲಿ ಅದ್ಧೂರಿಯಾಗಿ ಅರಿಶಿಣ ಶಾಸ್ತ್ರ ನಡೆದಿದೆ. ಇಂದು ಮೆಹೆಂದಿ ನಡೆಯುತ್ತಿದೆ.
ಕೆಂಪು ಮತ್ತು ಹಳದಿ ಕಾಂಬಿನೇಷನ್ ಡಿಸೈನರ್ ವೇರ್‌ನಲ್ಲಿ ಅದಿತಿ ಮತ್ತು ಯಶಸ್ವಿ ಕಂಗೊಳಿಸುತ್ತಿದ್ದಾರೆ. ಇಬ್ಬರೂ ಮುದ್ದಾಗಿ ಕಾಣಿಸುತ್ತಿದ್ದಾರೆ.
ಮೆಹೆಂದಿಗೆ ಕೆಂಪು ಮತ್ತು ಹಳದಿ ಸೆಟ್ ಹಾಕಲಾಗಿದೆ. ನಿರೂಪಕಿ ಚೈತ್ರಾ ವಾಸುದೇವನ್ ಸಂಪೂರ್ಣ ಡಿಸೈನ್ ಹೊನೆ ಹೊತ್ತಿದ್ದಾರೆ.
ಒಂದು ವರ್ಷ ಹಿಂದೆಯೇ ಅದಿತಿ ಮತ್ತು ಯಶಸ್ವಿ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾತುಕತೆ ಮತ್ತು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೋಷಿಯಲ್ ಮಿಡಿಯಾ ಮೂಲಕ ಬಹಿರಂಗ ಪಡಿಸಿದ್ದರು.
ಒಂದು ವರ್ಷದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀವಿ ಜೀವನ ಚೆನ್ನಾಗಿ ಮುಂದಕ್ಕೆ ಚೆನ್ನಾಗಿ ಇರಲಿ. ನನ್ನ ವೃತ್ತಿ ಜೀವನವನ್ನು ಗೌರವಿಸುತ್ತಾರೆಂದು ಈ ಹಿಂದೆ ಸಂದರ್ಶನದಲ್ಲಿ ಅದಿತಿ ಹೇಳಿದ್ದರು.