ಡಾ ವಿಷ್ಣುವರ್ಧನ್ 'ವಲ್ಮೀಕ' ನಿಲಯ: ಗೃಹಪ್ರವೇಶ ಫೋಟೋಗಳಿವು...

First Published | Nov 27, 2022, 2:27 PM IST

ಕನ್ನಡ ಚಿತ್ರರಂಗ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜಯನಗರ ಹೊಸ ಮನೆಗೆ ಇಂದು ವಲ್ಮೀಕ ಎಂದು ಗೃಹಪ್ರವೇಶ ಮಾಡಲಾಗಿದೆ. 
 

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹೊಸ ಮನೆ ಗೃಹಪ್ರವೇಶ ಇಂದು ಅದ್ಧೂರಿಯಾಗಿ ನಡೆದಿದೆ. ಜಯನಗರದಲ್ಲಿದ್ದ ಹಳೆ ಮನೆಗೆ ಹೊಸ ರೂಪ ನೀಡಲಾಗಿತ್ತು. 

ಹೌದು ಹಳೆ ಮನೆ ಇದ್ದ ಜಾಗದಲ್ಲೇ ಹೊಸ ಮನೆ ಕಟ್ಟಿಸಿದ್ದಾರೆ ಭಾರತಿ ವಿಷ್ಣುವರ್ಧನ್ ಅವರು. ವಿಷ್ಣು ಕನಸಿನ ಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದು ಕನ್ನಡ ಚಿತ್ರರಂಗದ ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು. 

Tap to resize

ಈ ವೇಳೆ ಸಿಎಂ ಬಸವರಾಜ್‌ ಬೊಮ್ಮಾಯಿ ಮಾತನಾಡಿದ್ದಾರೆ. 'ವಿಷ್ಣುವರ್ಧನ್‌ ಒಬ್ಬ ಮೇರು ನಟ. ಭಾರತಿ ಅವರು ತುಂಬಾ ಕಷ್ಟಪಟ್ಟು ಮನೆ ನಿರ್ಮಿಸಿದ್ದಾರೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಮಾಡುತ್ತೇವೆ.'

 'ಡಿಸೆಂಬರ್‌ನಲ್ಲಿ ಅಂತಿಮ ತೀರ್ಮಾನ ಮಾಡಲಾಗುತ್ತೆ. ಈಗ ಅದಕ್ಕೆ ಜಾಗ ಕೂಡ ನೋಡಲಾಗಿದೆ ಅವರ ಘನತೆ ಮತ್ತು ವ್ಯಕ್ತಿತ್ವಕ್ಕೆ ತಕ್ಕಂತೆ ಮ್ಯೂಸಿಯಂ ಮತ್ತು ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ' ಎಂದಿದ್ದಾರೆ.

'ಸಾಹಸ ಸಿಂಹ ನಮ್ಮ ಅಚ್ಚುಮೆಚ್ಚಿನ ನಟ. ವಿಷ್ಣುವರ್ಧನ್ ಮನೆ ತುಂಬಾ ಸುಂದರವಾಗಿದೆ ಹಾಗೆ ಶೀಘ್ರದಲ್ಲಿ ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಕೆಲಸಗಳು ನಡೆಯಲಿದೆ. ವಿಷ್ಣು ನಮ್ಮೆಲ್ಲರಿಗೂ ಮಾದರಿ' ಎಂದಿದ್ದಾರೆ.

ಅಂದಹಾಗೆ ಮನೆಗೆ ವಲ್ಕೀಕ ಎಂದು ಹೆಸರಿಡಲು ಕಾರಣವಿದೆ. ವಲ್ಕೀಕ ಅಂದ್ರೆ ಹುತ್ತದಲ್ಲಿ ಇರೋ ನಾಗರಹಾವು. ವಿಷ್ಣುಗೆ ಬ್ರೇಕ್ ಕೊಟ್ಟ ಸಿನಿಮಾ ನಾಗರಹಾವು ಹೀಗಾಗಿ ಈ ಹೆಸರು ಆಯ್ಕೆ ಮಾಡಲಾಗಿದೆ. 

Latest Videos

click me!