ನಂಜನಗೂಡಿನಲ್ಲಿ ರಾಕಿ.. ಮುಡಿ ಕೊಟ್ಟಿದ್ದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡ ಐರಾ!

First Published | Mar 11, 2020, 5:14 PM IST

ಮಾರ್ಚ್ 11 ಬುಧವಾರ ಬೆಳಗ್ಗೆ  ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್‌ ದಂಪತಿ ದಕ್ಷಿಣದ ಕಾಶಿ ಎಂದು ವಿಖ್ಯಾತಿ ಪಡೆದಿರುವ ನಂಜನಗೂಡಿಗೆ ಆಗಮಿಸಿ ನಂಜುಂಡೇಶ್ವರನ (ಶ್ರೀಕಂಠೇಶ್ವರ) ದರ್ಶನ ಪಡೆದರು. ಮಗಳು ಐರಾ ಮುಡಿ ಕೊಟ್ಟು ಹರಕೆ ತೀರಿಸಿದರು.

ದೇವಾಲಯಕ್ಕೆ ಆಗಮಿಸಿದ ಯಶ್ ದಂಪತಿ
ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ಕೊಡಿಸಿದ ರಾಕಿಂಗ್ ‌ಸ್ಟಾರ್ ಯಶ್.
Tap to resize

ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ಪ್ರಾರ್ಥನೆ ಮಾಡಿಕೊಂಡರು.
'ಕೆಜಿಎಫ್: ಚಾಪ್ಟರ್ 2' ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರೂ ಕುಟುಂಬಕ್ಕೆ ಯಶ್ ಸಾಕಷ್ಟು ಸಮಯ ನೀಡುತ್ತಿದ್ದಾರೆ.
Yash
Yash
Yash
ನಂಜನಗೂಡಿಗೆ ಆಗಮಿಸುತ್ತಿರುವ ಸುದ್ದಿಯನ್ನು ಯಶ್ ದಂಪತಿಗಳು ಗುಟ್ಟಾಗಿದ್ದರು.
ಯಶ್-ರಾಧಿಕಾ ಜೋಡಿಯುನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದರು.
ಸೋಶಿಯಲ್ ಮೀಡಿಯಾದಲ್ಲಿ ಅಪ್ಪ-ಮಗಳು ಫೊಟೋ ಹಂಚಿಕೊಂಡಿದ್ದಾರೆ.
ಅಪ್ಪ-ಮಗಳ ಮಾತುಕತೆಯನ್ನು ಯಶ್ ರಸವತ್ತಾಗಿ ಬರೆದಿದ್ದಾರೆ.
ಡ್ಯಾಡಿ ನನಗೆ ಇದು ಬೇಸಿಗೆ ಕಾಲ ಎಂದು ಗೊತ್ತು... ಆದರೆ ಅದಕ್ಕಿಂತಲೂ ಖಚಿತವಾಗಿ ಹೇಳುತ್ತೇನೆ ಇದು ಬೇಸಿಗೆ ಕಟಿಂಗ್ ಅಲ್ಲ... ಎಂದು ಐರಾ ಹೇಳುತ್ತಾಳೆ.

Latest Videos

click me!