ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಿಷಭ್ ಶೆಟ್ರು… ಥ್ಯಾಂಕ್ಯೂ ಬಾಬು ಅಂದಿದ್ದು ಯಾರಿಗೆ?

First Published | Jul 15, 2024, 4:30 PM IST

ಚಂದನವನದಲ್ಲಿ ಅದ್ಭುತ ನಟ ಮತ್ತು ನಿರ್ದೇಶಕರಾಗಿ ಮಿಂಚುತ್ತಿರುವ ರಿಷಭ್ ಶೆಟ್ಟಿಯವರ ಬರ್ತ್ ಡೇ ಪಾರ್ಟಿ ಇತ್ತೋಚೆಗೆ ಅದ್ಧೂರಿಯಾಗಿ ನಡೆದಿದೆ. 
 

ಕನ್ನಡಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟ, ನಿರ್ದೇಶಕ ರಿಷಭ್ ಶೆಟ್ಟಿ (Rishab Shetty) ಜುಲೈ 7 ರಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಬರ್ತ್ ಡೇ ಪಾರ್ಟಿ ಇತ್ತೀಚೆಗೆ ಅದ್ದೂರಿಯಾಗಿ ನಡೆದಿದೆ. 
 

ರಿಷಭ್ ಶೆಟ್ರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ 41ನೇ ಬರ್ತ್ ಡೇ ಪಾರ್ಟಿ  ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶೆಟ್ರು ಪತ್ನಿ ಪ್ರಗತಿ ಶೆಟ್ಟಿ ಮತ್ತು ಮಕ್ಕಳಾದ ರಣ್ವೀರ್ ಮತ್ತು ರಾಧ್ಯಾ ಹಾಗೂ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 
 

Tap to resize

ಬರ್ತ್ ಡೇ ಪಾರ್ಟಿ ಫೋಟೋಗಳನ್ನು ಹಂಚಿಕೊಂಡ ಶೆಟ್ರು ಹುಟ್ಟುಹಬ್ಬದ ಸವಿನೆನಪುಗಳು… ಚಿಯರ್ಸ್ ಟು ಅನೊದರ್ ಇಯರ್ ಆಫ್ ಲವ್ (Cheers to another year of love, laughter) ಈ ಮರೆಯಲಾರದ ನೆನಪುಗಳನ್ನ ಕೊಟ್ಟದ್ದಕ್ಕೆ ಥ್ಯಾಂಕ್ಯೂ ಬಾಬು ಎಂದಿದ್ದಾರೆ. 
 

ತಮ್ಮ ಗಂಡನಿಗಾಗಿ ಸ್ಪೆಷಲ್ ಆಗಿ ಬರ್ತ್ ಡೇ ಅರೇಂಜ್ ಮೆಂಟ್ ಮಾಡಿದ ಪತ್ನಿ ಪ್ರಗತಿ ಶೆಟ್ಟಿಯವರಿಗೆ (Pragathi Shetty) ರಿಷಭ್ ಥ್ಯಾಂಕ್ಯೂ ಬಾಬು ಹೇಳಿದ್ದಾರೆ. ಜುಲೈ 7ರಂದು ರಿಷಭ್ ಶೆಟ್ಟಿ ಹುಟ್ಟುಹಬ್ಬದ ದಿನ ಪ್ರಗತಿ ಶೆಟ್ಟಿ ಪ್ರೀತಿಯಿಂದ ಶುಭಕೋರಿದ್ದರು.
 

ನನ್ನ ಜೀವನದ ಆಧಾರಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು. ನೀವು ಎಂತಹ ಅದ್ಭುತ ವ್ಯಕ್ತಿ ಅನ್ನೋದನ್ನ ಒಮ್ಮೆ ಜಗತ್ತಿಗೆ ಕೂಗಿ ಹೇಳಬೇಕು. ನಿಮ್ಮನ್ನು ನಿಜವಾಗಿಯೂ ಅರ್ಥ ಮಾಡಿಕೊಂಡಿರುವವರು ಅದೃಷ್ಟವಂತರು. ನಿಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರೀತಿ ಪ್ರತಿದಿನ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ನಾವು ಒಟ್ಟಿಗೆ ಇರೋದಕ್ಕೆ ನಾನು ಪ್ರತಿದಿನ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಪಂಚದ ಎಲ್ಲಾ ಸಂತೋಷ ನಿಮಗೆ ಸಿಗಲಿ ಎಂದು ವಿಶ್ ಮಾಡಿದ್ದರು. 
 

ತುಘಲಕ್, ಬೆಲ್ ಬಾಟಮ್, ಕಾಂತಾರಾ, ಗರುಡಗಮನ ವೃಷಭ ವಾಹನದಂತ ಅದ್ಭುತ ಚಿತ್ರಗಳಲ್ಲಿ ನಟಿಸಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಿಕ್ಕಿ, ಕಿರಿಕ್ ಪಾರ್ಟಿಯಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ರಿಷಭ್ ಶೆಟ್ಟಿಯವರದ್ದು. 
 

ಕಾಂತಾರ ಸಿನಿಮಾ ಮೂಲಕ ದೇಶವೇ ಕನ್ನಡ ಚಿತ್ರ ಮಂದಿರದತ್ತ ತಿರುಗಿ ನೋಡುವಂತೆ ಮಾಡಿದ ನಟ ರಿಷಭ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕುಂದಾಪುರದ ಸುತ್ತಮುತ್ತ ಸಿನಿಮಾ ಶೂಟಿಂಗ್ ನಡೆಯುತ್ತಿದೆ. 
 

Latest Videos

click me!