ತಮಿಳಿನ ಜನಪ್ರಿಯ ನಟ ಶರತ್ ಕುಮಾರ್ ಮಗಳು ಹಾಗೂ ಮಾಣಿಕ್ಯ ಚಿತ್ರದ ನಾಯಕ ನಟಿ ವರಲಕ್ಷ್ಮಿ ಶರತ್ ಕುಮಾರ್ (Varalakshmi Sarathkumar) ಮತ್ತು ನಿಕೋಲಾಯ್ ಸಚ್ ದೇವ್ ಇತ್ತೀಚೆಗೆ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಥೈಲ್ಯಾಂಡ್ ನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಚಿತ್ರರಂಗದ ಸೆಲೆಬ್ರಿಟಿಗಳಿಗೆ ಅದ್ದೂರಿಯಾಗಿ ರಿಸೆಪ್ಶನ್ ಪಾರ್ಟಿ ನೀಡಿದ ವರಲಕ್ಷ್ಮಿ ಶರತ್ ಕುಮಾರ್, ಮದುವೆ ಮಾತ್ರ ತುಂಬಾನೆ ಖಾಸಗಿಯಾಗಿ ತಮ್ಮ ಕುಟುಂಬದ ಸಮ್ಮುಖದಲ್ಲಿ ಥೈಲ್ಯಾಂಡ್ ನಲ್ಲಿ ಆಗಿದ್ದಾರೆ. ದಂಪತಿ ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಳ್ಳದಿದ್ದರೂ, ಅವರ ಬಿಗ್ ಡೇ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಸದ್ಯ ಹರಿದಾಡ್ತಿರೋ ಫೋಟೋಗಳನ್ನ ನೋಡಿದ್ರೆ, ಅವರು ಸಾಂಪ್ರದಾಯಿಕ ಹಿಂದೂ ಮದುವೆ ಮತ್ತು ಕ್ರಿಶ್ಚಿಯನ್ ವೆಡ್ಡಿಂಗ್ (Christian Wedding) ಎರಡೂ ಸಹ ಆಗಿದ್ದಾರೆ ಅನ್ನೋದು ಕಂಡು ಬಂದಿದೆ. ವರದಿಗಳ ಪ್ರಕಾರ, ಅವರ ಮದುವೆ ಥೈಲ್ಯಾಂಡಲ್ಲಿ ನಡೆಯಿತು. ಆದರೆ ಯಾವುದರ ಬಗ್ಗೆಯೂ ನಟಿ ಆಗಲಿ, ಕುಟುಂಬದ ಸದಸ್ಯರಾಗಲಿ ಮಾಹಿತಿ ನೀಡಿಲ್ಲ.
ತಮಿಳು ಸಂಪ್ರದಾಯದ ಮದುವೆಗಾಗಿ, ವರಲಕ್ಷ್ಮಿ ಬ್ರೈಟ್ ಕೆಂಪು ಬಣ್ಣದ ಸಿಲ್ಕ್ ಸೀರೆ ಧರಿಸಿ, ಬನ್ ಹೇರ್ ಸ್ಟೈಲ್ ಮಾಡಿ ಮಲ್ಲಿಗೆ ಮುಡಿದು, ಕುಂದನ್ ಜ್ಯುವೆಲ್ಲರಿಯಲ್ಲಿ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದರು. ಇನ್ನು ನಿಕೋಲಾಯ್ ಆ ದಿನ ಸಾಂಪ್ರದಾಯಿಕ ರೇಷ್ಮೆ ಶರ್ಟ್ ಮತ್ತು ಧೋತಿ ಧರಿಸಿದ್ದರು.
ಕ್ರಿಶ್ಚಿಯನ್ ವೆಡ್ಡಿಂಗ್ ಗೆ ವರಲಕ್ಷ್ಮಿ ಆಫ್ ವೈಟ್ ಶೋಲ್ಡರ್ ಲೆಸ್ ಲಾಂಗ್ ಗೌನ್ ಧರಿಸಿದ್ರೆ, ಸಚ್ ದೇವ್ ಆಫ್ ವೈಟ್ ಬಣ್ಣದ ಸೂಟ್, ಬ್ಲೇಜರ್ ಧರಿಸಿದ್ದರು. ಕುಟುಂಬ ಸದಸ್ಯರು ಮತ್ತು ಎಲ್ಲಾ ಅತಿಥಿಗಳು ಹಿಂದೂ ಮತ್ತು ಕ್ರಿಶ್ಚಿಯನ್ ಸಮಾರಂಭಗಳಿಗೆ ಪ್ಯಾಸಲ್ ಬ್ಲೂ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಶರತ್ ಕುಮಾರ್ (Sarathkumar), ರಾಧಿಕಾ, ರಾಹುಲ್, ಪೂಜಾ ಮತ್ತು ರಾಯನೆ ಅವರ ವೀಡಿಯೊಗಳು ಮತ್ತು ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮದುವೆಗೂ ಮುನ್ನ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಮೆಹಂದಿ, ಸಂಗೀತ್ ಮತ್ತು ಆರತಕ್ಷತೆಯ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಚೆನ್ನೈನಲ್ಲಿ ನಡೆಸಿದರು. ಈ ಕಾರ್ಯಕ್ರಮದಲ್ಲಿ ತಮಿಳು, ತೆಲುಗು, ಕನ್ನಡ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.
ವರಲಕ್ಷ್ಮಿ ಶರತ್ ಕುಮಾರ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡದಲ್ಲಿ ರನ್ನ ಮತ್ತು ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ಶರತ್ ಕುಮಾರ್ ಅವರ ಪುತ್ರಿ. ಮದುವೆಯಾಗೋದಿಲ್ಲ ಎಂದು ಹೇಳುತ್ತಿದ್ದ ನಟಿ ಇದೀಗ ತಮ್ಮ 38ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿಕೋಲಾಯ್ ಮುಂಬೈ ಮೂಲದ ಕಲಾವಿದ. ಇದು ಅವರ ಎರಡನೇ ಮದುವೆ, ಮತ್ತು ಅವರು ತಮ್ಮ ಮೊದಲ ಮದುವೆಯಲ್ಲಿ ಟೀನೇಜ್ ಮಗಳನ್ನ ಸಹ ಹೊಂದಿದ್ದಾರೆ. ಮಗಳು ಪವರ್ ಲಿಫ್ಟರ್ ಕೂಡ ಹೌದು. ನಿಕೋಲಾಯ್ ಮತ್ತು ವರಲಕ್ಷ್ಮೀ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಇದೀಗ ಸಪ್ತಪದಿ ತುಳಿದಿದ್ದಾರೆ.