ಈ ಸ್ಟಾರ್ ಕಿಡ್ಸ್ ಸ್ಯಾಂಡಲ್‌ವುಡ್‌ನ ಮುಂದಿನ ರಾಣಿಯರಂತೆ!ನಿಮಗೂ ಹಾಗೆ ಅನಿಸ್ತಿದ್ಯಾ?

First Published | Jul 12, 2024, 5:50 PM IST

ಸ್ಯಾಂಡಲ್ ವುಡ್ ನಲ್ಲಿ ಹೀರೋಯಿನ್ ಗಳಿಗೆ ಬರ ಇದೆ ಅನ್ನೋವಂತಹ ಹೊತ್ತಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಈ ನಾಲ್ಕು ಜನ ಹುಡುಗೀರ ಫೋಟೋ ಸದ್ದು ಮಾಡ್ತಿದೆ. 
 

ಚಂದನವನದಲ್ಲಿ (Sandalwood) ವರ್ಷಕ್ಕೆ ನೂರು ಸಿನಿಮಾಗಳು ಬಂದು ಹೋಗುತ್ತೆ, ಆದ್ರೆ ಹಲವು ಸಮಯದಿಂದೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವಂತಹ ಹೀರೋಯಿನ್‌ಗಳು ಮಾತ್ರ ಸಿಕ್ಕೇ ಇಲ್ಲ ಅನ್ನೋದಂತೂ ನಿಜ. ರಕ್ಷಿತಾ, ರಮ್ಯಾ, ರಾಧಿಕಾ ಪಂಡಿತ್ ಬಿಟ್ರೆ ಇತ್ತೀಚಿನ ದಿನಗಳಲ್ಲಿ ಹಾಗೆ ಬಂದು ಹೀಗೆ ಹೋಗೋರೆ ಜಾಸ್ತಿ.ರಚಿತಾ ರಾಮ್, ಆಶಿಕಾ ರಂಗನಾಥ್, ರುಕ್ಮಿಣಿ ವಸಂತ್ ನಂತಹ ನಟಿಯರಿದ್ರೂ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿ, ಜನರ ಮನಸಿನಲ್ಲಿ, ಕನ್ನಡದಲ್ಲಿ ಭದ್ರವಾಗಿ ನಿಲೆಯೂರಿದವರು ಕಡಿಮೆಯೇ. 
 

ಸ್ಯಾಂಡಲ್‌ವುಡ್‌ನಲ್ಲಿ ಹೀರೋಯಿನ್‌ಗಳಿಗೆ ಬರ ಇದೆ ಅನ್ನೋವಂತಹ ಹೊತ್ತಲ್ಲೇ ಸೋಶಿಯಲ್ ಮೀಡಿಯಾದಲ್ಲಿ (social media) ಈ ನಾಲ್ಕು ಜನ ಹುಡುಗೀರ ಫೋಟೋ ಸದ್ದು ಮಾಡ್ತಿದೆ. ಯಾರಿವರು ಅಂತ ನೋಡಿದ್ರೆ ಚಂದನವನವನ್ನು ಒಂದು ಕಾಲದಲ್ಲಿ ರೂಲ್ ಮಾಡಿದ ಸೆಲೆಬ್ರಿಟಿಗಳ ಮಕ್ಕಳು. 
 

Tap to resize

ಕೆಲವೊಂದು ಟ್ರೋಲ್ ಪೇಜ್‌ಗಳಲ್ಲಿ ಚಂದನವನವನ್ನು ಮುಂದಿನ ದಿನಗಳಲ್ಲಿ ರೂಲ್ ಮಾಡೋ ನಟಿಮಣಿಯರು ಇವರೇ ಅಂತ ಸುದ್ದಿಯಾಗ್ತಿವೆ. ಇವರು ಯಾರೆಂದ್ರೆ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತ, ಮಾಲಾಶ್ರೀಯವರ ಪುತ್ರಿ ಆರಾಧನಾ ರಾಮ್, ದುನಿಯಾ ವಿಜಯ್ ಪುತ್ರಿ ಮೊನಿಷಾ ಮತ್ತು ಶ್ರುತಿಯವರ ಪುತ್ರಿ ಗೌರಿ. 
 

ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ (Amrutha Prem) ಈಗಾಗಲೇ ಚಂದನವನಕ್ಕೆ ಕಾಲಿಟ್ಟಾಗಿದೆ. ಇವರು ಅಭಿನಯಿಸಿದ ಟಗರು ಪಲ್ಯ ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡಿದೆ. ಅಮೃತಾ ಅಂದಕ್ಕೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಆದರೆ ಆಕೆ ಇನ್ನೂ ನಟನೆಯಲ್ಲಿ ಪಳಗಬೇಕಿದೆ. ಒಂದು ಸಿನಿಮಾ ಬಳಿಕ ಸದ್ಯ ಸುಮ್ಮನಿದ್ದಾರೆ, ಇನ್ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಕಾದು ನೋಡಬೇಕು. 
 

ಕನ್ನಡಿಗರ ಕನಸಿನ ರಾಣಿ ಮಾಲಾಶ್ರೀಯವರ ಪುತ್ರಿ ಆರಾಧನಾ ರಾಮ್ (Aradhana Ram) ಮೊದಲ ಚಿತ್ರದಲ್ಲಿ ಸ್ಟಾರ್ ನಟನೊಂದಿಗೆ ನಟಿಸುವ ಚಾನ್ಸ್ ಸಿಕ್ಕಿತ್ತು. ಕಾಟೇರ ಚಿತ್ರದಲ್ಲಿ ದರ್ಶನ್ ತೂಗುದೀಪಗೆ ನಾಯಕಿಯಾಗಿ ಆರಾಧನಾ ಅದ್ಭುತವಾಗಿ ನಟಿಸಿದ್ದರು. ಇವರ ನಟನೆಗೆ ಹೆಚ್ಚಿನ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದು, ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕಾಯ್ತಿದ್ದಾರೆ ಜನ. 

ಇನ್ನು ದುನಿಯಾ ವಿಜಯ್ ಪುತ್ರಿ ಮೊನಿಶಾ (Monisha Vijay). ಈಕೆ ಇಂಡಸ್ಟ್ರಿ ಬರೋಕ್ಕಿಂದಲೂ ಮೊದಲೇ ಸುದ್ದಿಯಲ್ಲಿದ್ದಂತಹ ನಟಿ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೊನಿಶಾ ತಮ್ಮ ಸೌಂದರ್ಯದಿಂದಲೇ ಅಭಿಮಾನಿಗಳನ್ನ ಪಡೆದುಕೊಂಡಿದ್ದಾರೆ, ಈಗಾಗಲೇ ಆಕ್ಟೀಂಗ್ ಕೂಡ ಕಲಿತಿರುವ ಇವರು ತಂದೆಯ ಜೊತೆ ತಮ್ಮ ಡೆಬ್ಯೂ ಸಿನಿಮಾ ಮಾಡಲು ತಯಾರಾಗಿದ್ದಾರೆ. 

ಸೋಶಿಯಲ್ ಮೀಡೀಯಾದಲ್ಲಿ ಸದ್ದು ಮಾಡ್ತಿರೋ ಮತ್ತೊಂದು ಹೆಸರು ಗೌರಿ ಶ್ರುತಿ (Gowri Shruthi). ಕನ್ನಡಿಗರ ಫೇವರಿಟ್ ನಟಿ ಶ್ರುತಿಯವರ ಮಗಳು ಗೌರಿ. ಈಕೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಡುಗಳ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಸಂಗೀತದಲ್ಲಿ ಸಾಧನೆ ಮಾಡಬೇಕೆನ್ನುವ ಮಹದಾಸೆ ಹೊತ್ತಿರುವ ಗೌರಿ, ಸಿನಿಮಾಗೆ ಬರುವ ಕುರಿತು ಯಾವತ್ತೂ ಎಲ್ಲೂ ಮಾತನಾಡಿಲ್ಲ. ಆದ್ರೆ ನಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳು ಮಾತ್ರ ಸ್ಯಾಂಡಲ್‌ವುಡ್‌ನಲ್ಲಿ ಗೌರಿಯವರನ್ನ ನೋಡೋದಕ್ಕೆ ಇಷ್ಟ ಪಡ್ತಿದೆ. 

Latest Videos

click me!