ಮುದ್ದು ಮಕ್ಕಳ ಜೊತೆ ಪ್ರಗತಿ ಶೆಟ್ಟಿ; 'ಕಾಂತಾರ' ಹೀರೋನ ಸುಂದರ ಕುಟುಂಬ ಹೇಗಿದೆ ನೋಡಿ

Published : Nov 03, 2022, 05:43 PM IST

ಶೆಟ್ರು ಮನೆ ದೀಪಾವಳಿ ಹೇಗಿತ್ತು? ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಪ್ರಗತಿ...  

PREV
16
ಮುದ್ದು ಮಕ್ಕಳ ಜೊತೆ ಪ್ರಗತಿ ಶೆಟ್ಟಿ; 'ಕಾಂತಾರ' ಹೀರೋನ ಸುಂದರ ಕುಟುಂಬ ಹೇಗಿದೆ ನೋಡಿ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕ್ರೀರ್ತಿ ತಂದು ಕೊಟ್ಟಿರುವುದು ಕಾಂತಾರ ಸಿನಿಮಾ. ರಿಷಬ್ ಶೆಟ್ಟಿ ನಟನೆ ಜೊತೆ ನಿರ್ದೇಶನ ಮಾಡಿದ್ದರೆ, ಹೊಂಬಾಳೆ ಸಿನಿಮಾ ನಿರ್ಮಾಣ ಮಾಡಿದೆ.

26

 ಕೋಟಿ ಕೋಟಿ ಗಳಿಕೆ ಮಾಡಿರುವ ಕಾಂತಾರ ಇದೀಗ 300 ಕೋಟಿ ಕ್ಲಬ್ ಸೇರಿದೆ ಎಂದು ವರದಿಯಾಗಿದೆ. ಇದು ರಿಷಬ್ ಶೆಟ್ಟಿ ಅಂಡ್ ತಂಡಕ್ಕೆ ಸಂತಸ ತಂದಿದೆ. ಎಲ್ಲಿ ನೋಡಿದ್ರೂ ಕಾಂತಾರ ಸಿನಿಮಾದೇ ಹವಾ.

36

ಯಶಸ್ಸಿನಲ್ಲಿ ತೇಲುತ್ತಿರುವ ಶೆಟ್ರು ಫ್ಯಾಮಿಲಿ ಈ ವರ್ಷ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಜೊತೆ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೊಟೋ ಹಂಚಿಕೊಂಡಿದ್ದಾರೆ.

46

ನೇರಳೆ ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಪ್ರಗತಿ ಕಂಗೊಳ್ಳಿಸುತ್ತಿದ್ದಾರೆ. ಮಗಳಿಗೂ ಅದೇ ಕಾಂಬಿನೇಷನ್‌ ಲಂಗಾ- ಬ್ಲೌಸ್ ಹಾಕಿದ್ದಾರೆ. ರಿಷಬ್ ಮತ್ತು ರಣ್ವಿತ್ ಶೆರ್ವಾನಿಯಲ್ಲಿ ಮಿಂಚಿದ್ದಾರೆ. 

56

 ವಿಜಯದಶಮಿ ಹಬ್ಬದಂದು ರಿಷಬ್ ಶೆಟ್ಟಿ ಮಗಳ ಫೋಟೋ ಮತ್ತು ಹೆಸರು ರಿವೀಲ್ ಮಾಡಿದ್ದಾರೆ. 'ಎಲ್ಲರಿಗೂ ನವರಾತ್ರಿಯ ಶುಭಾಶಯಗಳು. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು, ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿವೆ. ಇದಕ್ಕೆ ಕಲಶಪ್ರಾಯವಾಗಿ, ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ.. ನಿಮ್ಮೆಲ್ಲರ ಹಾರೈಕೆಗಳಿರಲಿ' ಎಂದು ಬರೆದುಕೊಂಡಿದ್ದರು.

66

ಕಾಂತಾರ ಸಿನಿಮಾದಲ್ಲಿ ರಿಷಬ್ ಮಾತ್ರವಲ್ಲ ಪತ್ನಿ ಪ್ರಗತಿ, ಪುತ್ರ ರಣ್ವಿತ್, ಮತ್ತು ಪುತ್ರಿ ರಾಧ್ಯಾ ಕೂಡ ಅಭಿನಯಿಸಿದ್ದಾರೆ. ಅಲ್ಲದೆ ಇಡೀ ಚಿತ್ರಕ್ಕೆ ಸ್ವತಃ ಪ್ರಗತಿ ಡ್ರೆಸ್‌ ಡಿಸೈನ್ ಮಾಡಿದ್ದಾರೆ.

Read more Photos on
click me!

Recommended Stories