ಹೆಂಡ್ತಿ ಬರ್ತ್ ಡೇಗೆ Sri Murali ಸ್ಪೆಷಲ್ ವಿಷ್…. ಇವರ Love Story ಯಾವ ಸಿನಿಮಾಗೂ ಕಮ್ಮಿ ಇಲ್ಲ

Published : Oct 23, 2025, 09:15 AM IST

ಚಂದನವನದ ರೋರಿಂಗ್ ಸ್ಟಾರ್ ಶ್ರೀಮುರಳಿ ಪತ್ನಿ ವಿದ್ಯಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ಪತ್ನಿಯ ಮುದ್ದಾದ ಫೋಟೊಗಳನ್ನು ಶೇರ್ ಮಾಡಿ, ತಮ್ಮ ಮುದ್ದಿನ ಕಂದನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಜೋಡಿಯ ಲವ್ ಸ್ಟೋರಿ ಯಾವುದೇ ಫಿಲಂ ಸ್ಟೋರಿಗೂ ಕಮ್ಮಿ ಇಲ್ಲ.

PREV
18
ರೋರಿಂಗ್ ಸ್ಟಾರ್ ಶ್ರೀಮುರಳಿ

ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಪತ್ನಿ ವಿದ್ಯಾ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಶ್ರೀಮುರಳಿ ಪತ್ನಿಗೆ ಮುದ್ದಾಗಿ ವಿಶ್ ಮಾಡಿದ್ದಾರೆ.

28
ಪತ್ನಿ ಹುಟ್ಟುಹಬ್ಬ

ಶ್ರೀಮುರಳಿ ತಮ್ಮ ಪ್ರೀತಿಯ ಮಡದಿಯ ಒಂದಷ್ಟು ರೇರ್ ಫೋಟೊಗಳನ್ನು ಶೇರ್ ಮಾಡಿ Happy Birthday my Kandha, I love you beautiful ಎಂದು ಬರೆದುಕೊಂಡಿದ್ದಾರೆ.

38
ಪ್ರೀತಿ ಮಾಡಿ ಮದುವೆಯಾದ ಜೋಡಿ

ಶ್ರೀಮುರಳಿ ಹಾಗೂ ವಿದ್ಯಾ ಪ್ರೀತಿಸಿ ಮದುವೆಯಾದ ಜೋಡಿಗಳಾಗಿದ್ದು, ಈ ಮುದ್ದಾದ ಜೋಡಿಯ ದಾಂಪತ್ಯ ಜೀವನಕ್ಕೆ 17ವರ್ಷ ವಯಸ್ಸಾಗಿದ್ದು, ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ.

48
ಈ ಜೋಡಿಯ ಲವ್ ಸ್ಟೋರಿ ಸೂಪರ್

ಶ್ರೀಮುರಳಿ ಹಾಗೂ ವಿದ್ಯಾ ಲವ್ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ. ಮೊದಲ ದಿನ ವಿದ್ಯಾರನ್ನು ನೋಡಿದ ದಿನವೇ ಲವ್ವಲ್ಲಿ ಬಿದ್ದಿದ್ದರು ಶ್ರೀಮುರಳಿ. ಆಮೇಲೆ ಆಗಿದ್ದೇ ಸಖತ್ ಆಗಿರುವ ಲವ್ ಸ್ಟೋರಿ. ಇಲ್ಲಿದೆ ನೋಡಿ ಆ ಸೂಪರ್ ಲವ್ ಸ್ಟೋರಿ.

58
ದ್ವಿತೀಯ ಪಿಯುಸಿಯಲ್ಲಿ ಲವ್

ಶ್ರೀಮುರಳಿ ಶ್ರೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮೊದಲನೇ ದಿನವೇ , ವಿದ್ಯಾ ಮೆಟ್ಟಿಲು ಇಳಿದು ಬರುವುದನ್ನು ಕಂಡು ಅಲ್ಲೇ ಲವ್‌ ಅಟ್ ಫರ್ಸ್ಟ್‌ ಸೈಟ್‌ ಆಯ್ತಂತೆ! ವಿದ್ಯಾ ನೋಡಿದಾಕ್ಷಣ 'ಮದುವೆ ಆದ್ರೆ ಇವಳನ್ನೇ ಆಗಬೇಕು' ಎಂದು ಸ್ನೇಹಿತರಿಗೆ ಹೇಳಿದರಂತೆ.

68
ಜೂನಿಯರ್ ಮೇಲೆ ಲವ್

ವಿದ್ಯಾ ಶ್ರೀಮುರಳಿಗಿಂತ ಒಂದು ವರ್ಷ ಜೂನಿಯರ್ ಆಗಿದ್ದರು. ವಿದ್ಯಾ ಪ್ರಥಮ ಪಿಯುಸಿಯಲಿದ್ದಾಗಲೇ ಮುರಳಿಗೆ ಲವ್ ಆಗಿತ್ತು, ವಿದ್ಯಾಳನ್ನು ಮಾತನಾಡಿಸಲು ಮುರುಳಿ ಮೂರು ತಿಂಗಳು ತೆಗೆದುಕೊಂಡರಂತೆ. ಆಮೇಲೆ ನೇರವಾಗಿ ಪ್ರಪೋಸ್ ಮಾಡಿದ್ರು ಮುರಳಿ.

78
ಪ್ರಪೋಸ್ ಮಾಡಿದ್ದು ಹೀಗೆ

1999 ಡಿಸೆಂಬರ್ 30 ರಂದು 'ನಾನು ನಿನ್ನ ಲವ್ ಮಾಡ್ತಿದೀನಿ. ನಿನ್ನ ಮದ್ವೆ ಮಾಡಿಕೊಳ್ಳುತ್ತೇನೆ. ಹೊಸ ವರ್ಷ ಶುರುವಾಗೋಕೆ ಇನ್ನೂ ಸಮಯ ಇದೆ. ನಾನು ಮನೆಗೆ ಹೋಗಿ ಕಾಲ್ ಮಾಡ್ತೀನಿ ನೀನು ಪಿಕ್ ಮಾಡಿದ್ರೆ ನಿನ್ನ ಒಪ್ಪಿಗೆ ಇದೆ' ಎಂದು ಅರ್ಥ ಮಾಡಿಕೊಳ್ಳುತ್ತೀನಿ ಎಂದು ಹೇಳಿ ಹೊರಟರಂತೆ!

88
25 ವರ್ಷದ ಪ್ರೀತಿ

ಈ ಜೋಡಿಯ ಪ್ರೀತಿಗೆ ಇದೀಗ 25 ವರ್ಷಗಳು ತುಂಬಿವೆ. ಮೇಡ್ ಫಾರ್ ಈಚ್ ಅದರ್ ಎನ್ನುವಂತಿರುವ ಈ ಜೋಡಿ ಮನೆಯವರನ್ನು ಒಪ್ಪಿಸಿ, 2008 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಲವ್ ಬರ್ಡ್ಸ್ ಗೆ ಅಗಸ್ತ್ಯ ಮತ್ತು ಅತೀವ ಎನ್ನುವ ಮುದ್ದಾದ ಇಬ್ಬರು ಮಕ್ಕಳಿದ್ದಾರೆ.

Read more Photos on
click me!

Recommended Stories