ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ Rishab Shetty ಪತ್ನಿ ಎಂಟ್ರಿ? ಗುಟ್ಟು ರಿವೀಲ್ ಮಾಡಿದ ಪ್ರಗತಿ

Published : Oct 22, 2025, 05:14 PM IST

'ಕಾಂತಾರ' ಚಿತ್ರದ ಯಶಸ್ಸಿನ ನಂತರ, ರಿಷಬ್ ಶೆಟ್ಟಿ ಅವರ ಪತ್ನಿ ಮತ್ತು ಚಿತ್ರದ ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಗಮನ ಸೆಳೆಯುತ್ತಿದ್ದಾರೆ. ತಮ್ಮ ಸರಳತೆ ಮತ್ತು ಸೌಂದರ್ಯದಿಂದ ಮೆಚ್ಚುಗೆ ಗಳಿಸಿರುವ ಅವರು, ತಮಗೆ ತೆರೆಮರೆಯಲ್ಲಿ ಕೆಲಸ ಮಾಡುವುದೇ ಇಷ್ಟ ಎಂದು ಸ್ಪಷ್ಟಪಡಿಸಿದ್ದಾರೆ.  

PREV
18
ಎಲ್ಲೆಲ್ಲೂ ಕಾಂತಾರ ಹವಾ

ಈಗ ಎಲ್ಲೆಲ್ಲೂ ಕಾಂತಾರ-1 (Kantara-1) ಹವಾ. ಘಟಾನುಘಟಿ ಸ್ಟಾರ್​ಗಳು ರಿಷಬ್​ ಶೆಟ್ಟಿ (Rishab Shetty) ಅವರನ್ನು ಹಾಡಿ ಹೊಗಳುತ್ತಿದ್ದಾರೆ. ನ್ಯಾಷನಲ್​ ಮೀಡಿಯಾಗಳಲ್ಲಿ ಅವರ ಮತ್ತು ಇದೇ ಸಿನಿಮಾದಲ್ಲಿ ಕಾಸ್ಟ್ಯೂಮ್​ ಡಿಸೈನರ್​ ಆಗಿ ಕೆಲಸ ಮಾಡಿರುವ ರಿಷಬ್​ ಪತ್ನಿ ಪ್ರಗತಿ ಶೆಟ್ಟಿ (Pragati Shetty) ಚರ್ಚೆಯಾಗುತ್ತಿದೆ. ಈ ಸಿನಿಮಾದಲ್ಲಿ ಅತ್ಯಂತ ಗಮನ ಸೆಳೆದಿರುವುದರಲ್ಲಿ ಒಂದು ಪ್ರಗತಿ ಶೆಟ್ಟಿ ಅವರ ಕಾಸ್ಟ್ಯೂಮ್​. ಅದೇ ಕಾರಣಕ್ಕೆ ಅವರು ಕೂಡ ಸಕತ್​ ಫೇಮಸ್​ ಆಗ್ತಿದ್ದಾರೆ.

28
ಸರಳ ವ್ಯಕ್ತಿ ಪ್ರಗತಿ ಶೆಟ್ಟಿ

ಅಷ್ಟಕ್ಕೂ ಪ್ರಗತಿ ಶೆಟ್ಟಿ ಅವರು ಸಿಕ್ಕಾಪಟ್ಟೆ ಸರಳ ಮಹಿಳೆ. ಅವರ ಮಾತಿನಂತೆಯೇ, ಅವರ ನಡೆ-ನುಡಿ, ಆಚಾರ ವಿಚಾರ ಎಲ್ಲವೂ ತುಂಬಾ ಸರಳ. ಕಾಂತಾರದ ಈ ಮಟ್ಟಿನ ಯಶಸ್ಸಿನ ಬಳಿಕವೂ ಯಶಸ್ಸಿನ ಅಮಲಿನಲ್ಲಿ ತೇಲದೇ ಅದೇ ಸರಳತೆಯನ್ನು ಉಳಿಸಿಕೊಂಡಿರುವ ಕಾರಣಕ್ಕೆ ಅಭಿಮಾನಿಗಳಿಂದ ಹಾಗೂ ಸೋಷಿಯಲ್​ ಮೀಡಿಯಾದಲ್ಲಿ ಅವರ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತವಾಗುತ್ತಲೇ ಇದೆ.

38
ಕಾಂತಾರ ಯಶಸ್ಸು ಪತ್ನಿಗೆ

ಕಾಂತಾರಾ-1ರ ಸಂಪೂರ್ಣ ಯಶಸ್ಸನ್ನು ರಿಷಬ್​ ಶೆಟ್ಟಿ ಪತ್ನಿಗೆ ಸಲ್ಲಿಸುತ್ತಾರೆ. ನಾಲ್ಕೈದು ವರ್ಷಗಳಿಂದ ಈ ಚಿತ್ರಕ್ಕಾಗಿ ಅವರು ತ್ಯಾಗ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ ರಿಷಬ್​. ಹೇಗೆ ಮಕ್ಕಳು, ಮನೆಯ ಜವಾಬ್ದಾರಿಯನ್ನು ಸಂಪೂರ್ಣ ವಹಿಸಿಕೊಂಡು, ಜೊತೆಗೆ ಚಿತ್ರಕ್ಕಾಗಿ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಟ್ಟರು ಎನ್ನುವುದನ್ನೂ ಹೇಳುತ್ತಾರೆ.

48
ಸಿಂಪಲ್​ ಬ್ಯೂಟಿ

ಅಂದಹಾಗೆ ರಿಷಬ್​ ಶೆಟ್ಟಿ ಅವರಿಗೆ ಈಗ 42 ವರ್ಷ ವಯಸ್ಸು. ಪ್ರಗತಿ ಅವರಿಗೆ 40 ವರ್ಷ. ಇವರು ಇಬ್ಬರು ಮಕ್ಕಳು ಪೋಷಕರು. ವಯಸ್ಸು 40 ಆದರೂ ಪ್ರಗತಿಯವರು ಹಲವು ಹೀರೋಯಿನ್​ಗಳಿಗೆ ಮೀರಿಸುವ ರೂಪವತಿ. ಸಿನಿಮಾದಲ್ಲಿ ಹಲವು ನಾಯಕಿಯರು ಕೆಜಿಗಟ್ಟಲೆ ಮೇಕಪ್ ಮಾಡಿಕೊಂಡು ಸುಂದರಿಯಾಗಿ ಕಾಣುವುದು ಇದೆ. ಆದರೆ ಮೇಕಪ್​ ಇಲ್ಲದೆಯೇ ಅತ್ಯಂತ ಸರಳ ಸುಂದರವಾಗಿ ಇರುವವರು ಪ್ರಗತಿ ಶೆಟ್ಟಿ (Pragathi Shetty)

58
ನಾಯಕಿಯಾಗಿ?

ಇದೀಗ ಕಾಂತಾರ ಯಶಸ್ಸಿನ ಬಳಿಕ, ಪ್ರಗತಿಯವರಿಗೆ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಆಸೆ ಇದೆಯಾ, ಅಥವಾ ಒಂದು ವೇಳೆ ಖುದ್ದು ರಿಷಬ್ ಶೆಟ್ಟಿ ಅವರೇ ಆಫರ್​ ಕೊಟ್ಟರೆ ನಾಯಕಿ ಆಗುತ್ತೀರಾ ಎಂದು ಪ್ರಶ್ನಿಸಲಾಗಿದೆ. ಅಥವಾ ಹಿಂದೆ ಆ ಆಸೆ ಇತ್ತಾ ಎಂದು ಕೇಳಲಾಗಿದೆ.

68
ತೆರೆ ಮರೆಯೇ ಇಷ್ಟ

ಅದಕ್ಕೆ ಪ್ರಗತಿ ಅವರು, ಖಂಡಿತ ಇಲ್ಲ. ನನಗೆ ಅಂಥ ಆಸೆ ಏನೂ ಇಲ್ಲ. ತೆರೆಯ ಹಿಂದುಗಡೆಯಷ್ಟೇ ಕೆಲಸ ಮಾಡುವ ಆಸೆ ನನಗೆ. ಅದನ್ನೇ ಮಾಡುತ್ತಾ ಬಂದಿದ್ದೇನೆ. ತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆ ಇಲ್ಲ ಎಂದಿದ್ದಾರೆ. ಅದಕ್ಕೆ ಫ್ಯಾನ್ಸ್, ಇಲ್ಲ ನೀವು ಒಂದಾದರೂ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ನಮ್ಮೆಲ್ಲರ ಆಸೆ ಎನ್ನುತ್ತಿದ್ದಾರೆ.

78
ದಂಪತಿಯ ಲವ್​ ಸ್ಟೋರಿ

ಇನ್ನು, ರಿಷಬ್​ ಮತ್ತು ಪ್ರಗತಿ ಅವರ ಲವ್​ಸ್ಟೋರಿಯೂ ಚೆನ್ನಾಗಿದೆ. ಆಗ ಪ್ರಗತಿ ಶೆಟ್ಟಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ರಕ್ಷಿತ್ ಶೆಟ್ಟಿ ಅಭಿಮಾನಿ ಆಗಿದ್ದರು. 'ರಿಕ್ಕಿ' ಸಿನಿಮಾ ನೋಡಲು ಪ್ರಗತಿಯವರು ಫ್ರೆಂಡ್ಸ್​ ಜೊತೆ ಹೋದಾಗ, ಚಿತ್ರತಂಡ ಕೂಡ ಅಲ್ಲಿತ್ತು. ಅಲ್ಲಿಯವರೆಗೆ ಪ್ರಗತಿ ಅವರಿಗೆ ರಿಷಬ್​ ಯಾರು ಎಂದೇ ಗೊತ್ತಿರಲಿಲ್ಲ. ಸಿನಿಮಾ ಮುಗಿದ ಬಳಿಕ ಅಲ್ಲೇ ಇದ್ದ ರಿಷಬ್ ಶೆಟ್ಟಿಯವರ ಪರಿಚಯವನ್ನು ಸ್ನೇಹಿತೆಯರು ಮಾಡಿಸಿದಾಗ ಫೋಟೋ ಹೊಡೆಸಿಕೊಂಡು ಬಂದಿದ್ದರು.

88
ಕರಾವಳಿ ಮೂಲ

ಇಬ್ಬರೂ ಕರಾವಳಿಯವರು ಎಂದು ಗೊತ್ತಾದದ್ದೇ ತಡ, ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ರಿಷಬ್ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರಂತೆ. ಅಲ್ಲಿಂದಲೇ ಲವ್​ ಶುರುವಾದದ್ದು. ಒಂದು ವರ್ಷದಲ್ಲಿಯೇ ಪ್ರೀತಿ, ಪ್ರಪೋಸ್​, ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಮದುವೆಯೂ ಆಗಿದೆ. ಇದೀಗ ಮಗ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಮಕ್ಕಳಿದ್ದಾರೆ. ಪತ್ನಿಯ ಸಹಕಾರವನ್ನು ರಿಷಬ್​ ಸದಾ ಬಣ್ಣಿಸುತ್ತಲೇ ಇರುತ್ತಾರೆ.

Read more Photos on
click me!

Recommended Stories