ಸಿನಿಮಾ ಬಗ್ಗೆ ವಿವರ ನೀಡಿದ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾ ಈಗ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ ಧೀರೇನ್ ಅವರು ಪಬ್ಬಾರ್ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಆ ಕೆಲಸದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ ಎಂದರು.
ಡಾ. ರಾಜ್‌ಕುಮಾರ್ ಅವರ ಮೊಮ್ಮಗ, ನಟ ಧೀರೇನ್ ಹಾಗೂ ಡಿ ಸತ್ಯಪ್ರಕಾಶ್ ಹೊಸ ಕಮರ್ಷಿಯಲ್ ಸಿನಿಮಾವೊಂದಕ್ಕೆ ಜೊತೆಯಾಗಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಇನ್ನಷ್ಟೇ ರಿವೀಲ್ ಆಗಬೇಕಿದೆ.
25
ಪ್ರಿ ಪ್ರೊಡಕ್ಷನ್ ಹಂತದಲ್ಲಿ..
ಸಿನಿಮಾ ಬಗ್ಗೆ ವಿವರ ನೀಡಿದ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾ ಈಗ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ ಧೀರೇನ್ ಅವರು ಪಬ್ಬಾರ್ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಆ ಕೆಲಸದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ.
35
ಈ ಸಿನಿಮಾ ಚಾಲೆಂಜಿಂಗ್
ನನ್ನ ಈವರೆಗಿನ ಸಿನಿಮಾಗಳು ಪ್ರಯೋಗಾತ್ಮಕವಾಗಿದ್ದವು. ಆದರೆ ಇದನ್ನು ಮಾಸ್ ಕಮರ್ಷಿಯಲ್ ಜಾನರ್‌ನಲ್ಲಿ ಹೊರತರಲು ನಿರ್ಧರಿಸಿದ್ದೇವೆ. ಭಿನ್ನ ನೆಲೆಯ ಸಿನಿಮಾ ಮಾಡುತ್ತ ಬಂದ ನನಗೆ ಈ ಸಿನಿಮಾ ಚಾಲೆಂಜಿಂಗ್.
ಯೂತ್‌ಫುಲ್ ಆಗಿರುವ ಎನರ್ಜಿಟಿಕ್ ಕಲಾವಿದನ ನಿರೀಕ್ಷೆಯಲ್ಲಿದ್ದ ನಮಗೆ ಈ ಪಾತ್ರಕ್ಕೆ ತಕ್ಕ ಹೀರೋವಾಗಿ ಧೀರೇನ್ ಸಿಕ್ಕಿದ್ದಾರೆ. ಅವರ ಪಾತ್ರಕ್ಕೆ ಬಹಳಷ್ಟು ಎಮೋಶನ್‌ಗಳಿವೆ. ಸದ್ಯ ಅವರು ಈ ಪಾತ್ರದ ತಯಾರಿಯಲ್ಲಿದ್ದಾರೆ.
55
ಸಿನಿಮಾಗೆ ಶಿವಣ್ಣ ಬೆಂಬಲ
ಈ ಕಥೆ ಕೇಳಿ ಮೆಚ್ಚಿರುವ ಶಿವಣ್ಣ ಸಿನಿಮಾಕ್ಕೆ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದ್ದಾರೆ ಎಂದರು. ಆರ್.ವಿ ಮಲ್ಟಿ ಸಿನಿಸ್ ಕ್ರಿಯೇಟರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಶೀಘ್ರದಲ್ಲೇ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.