ದೇವಸ್ಥಾನ ಅಥವಾ ಮನೆಯಲ್ಲಿ ಮದುವೆಯಾಗಲು ಒಪ್ಪಿದರೆ ಮಾತ್ರ ಹುಡುಗ ಓಕೆ: ರಚಿತಾ ರಾಮ್

First Published Jan 17, 2023, 2:40 PM IST

ಇಡೀ ರಾಜ್ಯವೇ ರಚಿತಾ ರಾಮ್ ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದೆ. ಕೊನೆಗೂ ಅದಿಕ್ಕೆ ಉತ್ತರ ಕೊಟ್ಟಿದ್ದಾರೆ....

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ನ ಮದುವೆಯಾಗಲು ಹುಡುಗರು ಸಾಲಾಗಿ ನಿಂತಿದ್ದಾರೆ. ಆದರೆ ರಚ್ಚು ಮಾತ್ರ ಯಾರಿಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಈಗ ಮದುವೆ ಬಗ್ಗೆ ಮಾತನಾಡಿದ್ದಾರೆ.

 'ಮದುವೆ ಅನ್ನೋದು ಒಂದು ಸುಂದರವಾದ ಕ್ಷಣ ನನಗೆ. ಮದುವೆ ಯಾವಾಗ ಆಗ್ತೀನಿ ಅನ್ನೋದು ನನಗೆ ಗೊತ್ತಿಲ್ಲ. ಮದುವೆ ಆಗೋ ಪ್ಲ್ಯಾನ್ ಮಾಡಿಲ್ಲ'

' ಮದುವೆ ಆಗ್ತೀದ್ದೀನಿ ಅನ್ನೋ ವಿಚಾರವನ್ನು ಖುಷಿಯಾಗಿ ಹಂಚಿಕೊಳ್ಳುತ್ತೀನಿ. ದೇವಸ್ಥಾನದಲ್ಲಿ ಮದುವೆ ಆಗಬೇಕು ಅಥವಾ ಮನೆಯಲ್ಲಿ ದೇವರ ಮನೆ ಮುಂದೆ ಮದುವೆ ಆಗಬೇಕು...ಏಕೆಂದರೆ ನಾವು ವಾಸ ಮಾಡುವ ಮನೆಯಲ್ಲಿ ಎನರ್ಜಿ ಇರುತ್ತದೆ.'

'ಆಡಂಬರದಲ್ಲಿ ಮದುವೆ ಮಾಡ್ಕೊಂಡು ಆಮೇಲೆ ಲೈಫ್ ಅಯ್ಯಯ್ಯೋ ಅನ್ನುವ ಹಾಗೆ ಆದರೆ ಏನ್ ಮಾಡೋದು. ಹಣೆ ಬರಹ ಏನು ಮಾಡಲು ಆಗುವುದಿಲ್ಲ. '

ನಮ್ಮ ಮದುವೆ...ನಾನು ಮದುವೆಯಾಗಿ ಜೀವನ ಶುರು ಮಾಡುತ್ತಿರುವುದು ನನ್ನ ಪಾರ್ಟನರ್‌ ಜೊತೆ ಹೀಗಾಗಿ ಮದುವೆ ಇಷ್ಟದ ಪ್ರಕಾರ ನಡೆಯಬೇಕು ಅಷ್ಟೆ.' ಎಂದು ಕನ್ನಡ ಪಿಚ್ಚರ್ ಸಂದರ್ಶನದಲ್ಲಿ ಹೇಳಿದ್ದಾರೆ. 

ನಾನು ಕನ್ನಡದ ಹುಡುಗಿ ಎಲ್ಲರನ್ನು ಪ್ರೀತಿ ಮಾಡೋಣ ಎಲ್ಲರಿಗೂ ಒಂದೇ ರೀತಿ ಪ್ರೀತಿ ಕೊಡೋಣ. ಆರಂಭದಿಂದಲೂ ನಾನು ಹೇಳುತ್ತಿರುವುದು ಒಂದೇ.... ಇಷ್ಟವಿಲ್ಲ ಅಂದ್ರೆ ಮಾತನಾಡಲು ಹೋಗಬಾರದು ಎಲ್ಲರಿಗೂ ಮನಸ್ಸಿರುತ್ತೆ ಎಂದು ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಹೇಳಿದ್ದಾರೆ. 

click me!