ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ದೇಶಭಕ್ತಿಯು ಮೊಳಗುತ್ತಿದೆ. ಸೆಲೆಬ್ರಿಟಿಗಳು ಸಹ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸುತ್ತಿದ್ದಾರೆ.
210
ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿಭಿನ್ನವಾಗಿ ತಮ್ಮ ಕುಟುಂಬದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
310
ರಿಷಬ್ ತಮ್ಮ ಹುಟ್ಟೂರಾದ ಕುಂದಾಪುರದ ಕೆರಾಡಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ತಮ್ಮ ಕುಟುಂಬದ ಜೊತೆಯಾಗಿ ತೆರಳಿ, ಅಲ್ಲಿ ಮಕ್ಕಳ ಜೊತೆಗೆ ಸಂಭ್ರಮದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿರುವ ನಟ ನನ್ನ ಕುಟುಂಬದೊಂದಿಗೆ ನಮ್ಮೂರಿನ ಕೆರಾಡಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಜೊತೆ ಸ್ವಾತಂತ್ರ್ಯೋತ್ಸವ. ಈ ಪುಟಾಣಿಗಳ ಭವಿಷ್ಯವೇ ನಮ್ಮ ಭಾರತದ ಭವಿಷ್ಯ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಎಂದಿದ್ದಾರೆ.
510
ರಿಷಬ್ ಶೆಟ್ಟಿ ಧ್ವಜಾರೋಹಣ ಮಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪತ್ನಿ ಪ್ರಗತಿ ಶೆಟ್ಟಿ ಕೂಡ ಜೊತೆಯಾಗಿದ್ದು, ಅವರು ಕೂಡ ಶಾಲಾ ಮಕ್ಕಳ ಜೊತೆ ಮಾತನಾಡಿ ಶುಭ ಕೋರಿದ್ದಾರೆ.
610
ಇನ್ನು ರಿಷಬ್ ಹಾಗೂ ಪ್ರಗತಿ ಅವರ ಮಕ್ಕಳಾದ ರನ್ವಿತ್ ಮತ್ತು ರಾಧ್ಯಾ ಕೂಡ ಶಾಲೆಯ ಮಕ್ಕಳೊಂದಿಗೆ ಬೆರೆತು, ತಾವು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಗುಲಾಬಿ ಹೂವು ಹಿಡಿದು ಸಂಭ್ರಮಿಸಿದ್ದಾರೆ.
710
ತಮ್ಮ ಹುಟ್ಟೂರಿನ ಕುರಿತು ಅಪಾರ ಅಭಿಮಾನವುಳ್ಳ ರಿಷಬ್ ಶೆಟ್ಟಿ ಕೆಲವು ವರ್ಷಗಳ ಹಿಂದೆ ಕೆರಾಡಿಯ ಈ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ಪಡೆದಿದ್ದರು. ಸದ್ಯ ಈ ಶಾಲೆ ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ನಡೆಯುತ್ತಿದೆ.
810
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಉಳಿವಿನ ಬಗ್ಗೆ ಮಾತನಾಡಿದ ರಿಷಬ್ ನಿಜವಾಗಿಯೂ ತಮ್ಮೂರಿನಲ್ಲಿ ಕನ್ನಡ ಶಾಲೆಯನ್ನು ಉಳಿಸಿದ್ದಾರೆ. ಸಾಮಾಜಿಕ ಕೆಲಸಗಳಿಗಾಗಿ ರಿಷಬ್ ಶೆಟ್ಟಿ ತಮ್ಮದೇ ‘ರಿಷಬ್ ಶೆಟ್ಟಿ ಫೌಂಡೇಶನ್’ ಆರಂಭಿಸಿದ್ದು, ಆ ಮೂಲಕ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ.
910
ಇನ್ನೊಂದೆಡೆ ರಿಷಭ್ ಶೆಟ್ಟಿ ಇತ್ತೀಚೆಗಷ್ಟೇ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಸಿದ್ದು, ಇದೇ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾದ ಮೇಕಿಂಗ್ ವಿಡಿಯೋ ಇತ್ತೀಚೆಗೆ ರಿಲೀಸ್ ಆಗಿದ್ದು, ಭರ್ಜರಿ ಸೆಟ್ಟಿಂಗ್ ನೋಡಿ, ಸಿನಿಮಾ ಬ್ಲಾಕ್ ಬಸ್ಟರ್ ಗ್ಯಾರಂಟಿ ಎಂದಿದ್ದಾರೆ ಜನ.
1010
ರಿಷಬ್ ಶೆಟ್ಟಿ ಸದ್ಯ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದು, ತೆಲುಗಿನಲ್ಲಿ ಹನುಮಾನ್, ಛತ್ರಪತಿ ಶಿವಾಜಿ ಸಿನಿಮಾದಲ್ಲು ನಟಿಸಲಿದ್ದಾರೆ. ಅಷ್ಟೇ ಅಲ್ಲ ಶ್ರೀಕೃಷ್ಣದೇವರಾಯನ ಪಾತ್ರದಲ್ಲೂ ಕಾಣಿಸಲಿದ್ದಾರೆ ಎಂಬ ವದಂತಿ ಇದೆ. ಇದಲ್ಲದೇ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲೂ ರಿಷಬ್ ನಾಯಕನಾಗಿ ನಟಿಸಲಿದ್ದಾರೆ.